Nora Fatehi: ಫಿಫಾ ವಿಶ್ವಕಪ್ ಪಂದ್ಯದಲ್ಲಿ ನೋರಾ ಫತೇಹಿ ಪ್ರದರ್ಶನ

bollywood 2026 FIFA World Cup Nora Fatehi to perform

ಮುಂಬೈ: ಫಿಫಾ ವಿಶ್ವಕಪ್ 2026 (‌FIFA World Cup) ಇತಿಹಾಸದಲ್ಲೇ ಮೊದಲ (Nora Fatehi) ಬಾರಿಗೆ ಒಂದು ಹೊಸ ದಾಖಲೆಗೆ ಸಾಕ್ಷಿಯಾಗುತ್ತಿದೆ. ಈ ಬಾರಿ ಟೂರ್ನಿಯ ಆತಿಥ್ಯ ವಹಿಸಿರುವ ಮೆಕ್ಸಿಕೋ, ಕೆನಡಾ ಮತ್ತು ಅಮೆರಿಕ ದೇಶಗಳು ಜಂಟಿಯಾಗಿ ಪ್ರತ್ಯೇಕ ಉದ್ಘಾಟನಾ ಸಮಾರಂಭಗಳನ್ನು ಆಯೋಜಿಸಲು ಸಜ್ಜಾಗಿವೆ. ಜೂನ್ 11 ಮತ್ತು 12ರಂದು ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಗಳಲ್ಲಿ ಜಾಗತಿಕ ಸಂಗೀತ ತಾರೆಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ಅನಾವರಣಗೊಳ್ಳಲಿವೆ. ಕೇವಲ ಉದ್ಘಾಟನೆ ಮಾತ್ರವಲ್ಲದೆ, ಜುಲೈ 4ರಂದು ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ.

ಯಾರೆಲ್ಲಾ ಪ್ರದರ್ಶನ ನೀಡಲಿದ್ದಾರೆ?

ವಿಶ್ವಕಪ್‌ನ ಅಧಿಕೃತ ಚಾಲನೆ ಜೂನ್ 11ರಂದು ಮೆಕ್ಸಿಕೋ ನಗರದ ಐತಿಹಾಸಿಕ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದು ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಲ್ಯಾಟಿನ್ ಸಂಗೀತದ ದೈತ್ಯ ಪ್ರತಿಭೆಗಳಾದ ಮಾನಾ ಬ್ಯಾಂಡ್, ಅಲೆಜಾಂಡ್ರೋ ಫೆರ್ನಾಂಡಿಸ್ ಮತ್ತು ಬೆಲಿಂಡಾ ಪ್ರದರ್ಶನ ನೀಡಲಿದ್ದಾರೆ. ದಕ್ಷಿಣ ಆಫ್ರಿಕಾದ ಖ್ಯಾತ ಗಾಯಕಿ ಟೈಲಾ ಕೂಡ ಈ ಸಮಾರಂಭಕ್ಕೆ ಮೆರುಗು ನೀಡಲಿದ್ದಾರೆ.

ಜೂನ್ 12ರಂದು ಕೆನಡಾದ ಟೊರೊಂಟೊದಲ್ಲಿ ಎರಡನೇ ಉದ್ಘಾಟನಾ ಸಮಾರಂಭ ಜರುಗಲಿದೆ. ಕೆನಡಾ ಮತ್ತು ಬೋಸ್ನಿಯಾ ನಡುವಿನ ಪಂದ್ಯಕ್ಕೂ ಮೊದಲು ನಡೆಯುವ ಈ ಕಾರ್ಯಕ್ರಮದಲ್ಲಿ ಮೈಕೆಲ್ ಬಬಲ್, ಅಲಾನಿಸ್ ಮೊರಿಸೆಟ್ಟೆ ಮತ್ತು ಭಾರತೀಯ ಮೂಲದ ನೋರಾ ಫತೇಹಿ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಕಲಾವಿದರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಅಂದೇ ಸಂಜೆ ಅಮೆರಿಕದ ಲಾಸ್ ಏಂಜಲೀಸ್‌ನ ಸೋಫಿ ಸ್ಟೇಡಿಯಂನಲ್ಲಿ ಮೂರನೇ ಸಮಾರಂಭ ನಡೆಯಲಿದ್ದು, ಖ್ಯಾತ ಪಾಪ್ ಗಾಯಕಿ ಕೇಟಿ ಪೆರ್ರಿ, ಫ್ಯೂಚರ್ ಮತ್ತು ಅನಿಟ್ಟಾ ಅವರಂತಹ ದಿಗ್ಗಜರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಜುಲೈ 19ರಂದು ಫೈನಲ್

ವಿಶೇಷವೆಂದರೆ, ಜುಲೈ 4ರಂದು ಅಮೆರಿಕದ 250ನೇ ವರ್ಷಾಚರಣೆಯ ನೆನಪಿಗಾಗಿ ಫಿಲಡೆಲ್ಫಿಯಾ ಮತ್ತು ಹೂಸ್ಟನ್‌ನಲ್ಲಿ ನಡೆಯುವ ನಾಕೌಟ್ ಪಂದ್ಯಗಳ ವೇಳೆ ವಿಶೇಷ ಗೌರವ ಸಮರ್ಪಣೆಗಳು ನಡೆಯಲಿವೆ. ಜುಲೈ 19ರಂದು ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ ಪಂದ್ಯದ ವೇಳೆಯೂ ಅದ್ಧೂರಿ ಸಮಾರೋಪ ಸಮಾರಂಭ ಮತ್ತು ಹಾಫ್-ಟೈಮ್ ಶೋ ನಡೆಯಲಿದೆ. ಈಗಾಗಲೇ ವಿಶ್ವಕಪ್‌ನ ಅಧಿಕೃತ ಆಲ್ಬಂನ ಎರಡು ಹಾಡುಗಳಾದ ‘ಇಲ್ಯುಮಿನೇಟ್’ ಮತ್ತು ‘ಪೋರ್ ಎಲ್ಲಾ’ ಬಿಡುಗಡೆಯಾಗಿದ್ದು, ಫುಟ್‌ಬಾಲ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿವೆ. ಮಾನ್ಯತೆ ಪಡೆದ ಈ ಎಲ್ಲಾ ಕಾರ್ಯಕ್ರಮಗಳು ಪಂದ್ಯ ಆರಂಭವಾಗುವ 90 ನಿಮಿಷಗಳ ಮೊದಲೇ ಶುರುವಾಗಲಿವೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ದರ್ಶನ್ ಹವಾ: ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ

Leave a Reply

Your email address will not be published. Required fields are marked *