Namma Metro: ನಮ್ಮ ಮೆಟ್ರೋ ಶಾಕಿಂಗ್ ರಿಪೋರ್ಟ್: ದಿನಕ್ಕೆ 12 ಲಕ್ಷ ಜನ ಓಡಾಡಿದ್ರೂ ಈ ಸ್ಟೇಷನ್‌ಗಳಲ್ಲಿ ಜನವೇ ಇಲ್ವಂತೆ!
ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ’ನಮ್ಮ ಮೆಟ್ರೋ’ (Namma Metro) ಬಹುದೊಡ್ಡ ವರವಾಗಿದೆ. ಸಂಚಾರ ದಟ್ಟಣೆ ಹಾಗೂ ರಸ್ತೆ ಕಿರಿಕಿರಿಯಿಂದ ತಪ್ಪಿಸಿಕೊಂಡು ವೇಗವಾಗಿ ತಲುಪಲು ಮೆಟ್ರೋ ರೈಲುಗಳು ಬೆಂಗಳೂರಿಗರ ಪಾಲಿಗೆ ನಿತ್ಯ ಜೀವನಾಡಿಯಾಗಿ ಮಾರ್ಪಟ್ಟಿವೆ. ಪ್ರಸ್ತುತ ಹಸಿರು, ನೇರಳೆ ಮತ್ತು ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ದಿನಂಪ್ರತಿ ಸುಮಾರು 11 ರಿಂದ 12 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಈ ಸೇವೆಯ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಮಟ್ಟದ…
