TOP NEWS
Skill Up with ISRO Free AI and ML Training in Hydro Informatics Announced

ISRO: ಇಸ್ರೋದಿಂದ ಉಚಿತ ಆನ್‌ಲೈನ್ ಕೋರ್ಸ್: AI ಹಾಗೂ ML ತಂತ್ರಜ್ಞಾನ ಕಲಿಕೆಗೆ ಸುವರ್ಣಾವಕಾಶ!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗಾಗಿ ಉಚಿತ ಆನ್‌ಲೈನ್ ಕೋರ್ಸ್ ಒಂದನ್ನು ಆಯೋಜಿಸಿದೆ. ‘ಜಲ ಸಂಪನ್ಮೂಲ ವಲಯದಲ್ಲಿ ಹೈಡ್ರೋ-ಇನ್ಫರ್ಮ್ಯಾಟಿಕ್ಸ್‌ಗಾಗಿ AI/ML’ ಎಂಬ ಶೀರ್ಷಿಕೆಯಡಿಯಲ್ಲಿ ಈ ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 4 ರ ಒಳಗಾಗಿ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಈ ಕೋರ್ಸ್‌ನಲ್ಲಿ ಏನ್ನೆಲ್ಲಾ ಹೇಳಿಕೊಡಲಾಗುತ್ತೆ? ಡೆಹ್ರಾಡೂನ್‌ನಲ್ಲಿ ನೆಲೆಸಿರುವ ಇಸ್ರೋದ ಪ್ರಮುಖ ಅಂಗಸಂಸ್ಥೆಯಾದ ‘ಇಂಡಿಯನ್…

Read More
End of an Era for Remote Work Uber Imposes Strict Office Rules and Restricts Full Time WFH to a Mere 1 percent of Global Staff

Uber: ಬೃಹತ್ ಉದ್ಯೋಗ ಕಡಿತದ ಬೆನ್ನಲ್ಲೇ ಕಠಿಣ ಹೊಸ ರೂಲ್ಸ್ ಜಾರಿ ಮಾಡಿದ ಉಬರ್‌

ನವದೆಹಲಿ: ಜಾಗತಿಕ ಮಟ್ಟದಲ್ಲಿ ಸುಮಾರು 3,300 ಉದ್ಯೋಗಗಳನ್ನು ಕಡಿತಗೊಳಿಸುವ ಮೂಲಕ ಭಾರೀ ಸಂಚಲನ ಮೂಡಿಸಿದ್ದ ಖ್ಯಾತ ರೈಡ್-ಹೇಲಿಂಗ್ ದೈತ್ಯ ಸಂಸ್ಥೆ ಉಬರ್ (Uber), ಇದೀಗ ತನ್ನ ಉದ್ಯೋಗಿಗಳಿಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಕಂಪನಿಯು ತನ್ನ ರಿಮೋಟ್ ವರ್ಕ್ ಅಥವಾ ಮನೆಯಿಂದಲೇ ಕೆಲಸ ಮಾಡುವ (WFH) ನೀತಿಯನ್ನು ಅತ್ಯಂತ ಕಠಿಣಗೊಳಿಸಲು ಮುಂದಾಗಿದೆ. ‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಉಬರ್ ಸಂಸ್ಥೆಯು ಜಾರಿಗೆ ತರುತ್ತಿರುವ ಹೊಸ ನಿಯಮಗಳ ಅಡಿಯಲ್ಲಿ, ಇನ್ನು ಮುಂದೆ ಕೇವಲ ಶೇಕಡಾ 1ರಷ್ಟು ಉದ್ಯೋಗಿಗಳಿಗೆ…

Read More
Good News Amid AI Layoff Fears Tourism Sector to Create 30 Lakh Jobs by 2028

AI: ಎಐ ಭೀತಿಯ ನಡುವೆ ಯುವಜನತೆಗೆ ಗುಡ್ ನ್ಯೂಸ್: 2028ರ ವೇಳೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿ!

ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹಾವಳಿಯಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಯುವ ಸಮೂಹಕ್ಕೆ ಪ್ರವಾಸೋದ್ಯಮ ವಲಯವು ಹೊಸ ಭರವಸೆ ಮೂಡಿಸಿದೆ. ದೇಶದ ಪ್ರವಾಸೋದ್ಯಮ ಮತ್ತು ಆತಿಥ್ಯ (Tourism and Hospitality) ರಂಗದಲ್ಲಿ ಮುಂಬರುವ ದಿನಗಳಲ್ಲಿ ಭಾರಿ ಉದ್ಯೋಗ ಕ್ರಾಂತಿ ನಡೆಯಲಿದೆ ಎಂದು ಪ್ರವಾಸೋದ್ಯಮ ಮತ್ತು ಆತಿಥ್ಯ ಕೌಶಲ್ಯ ಮಂಡಳಿ (THSC) ತನ್ನ ಇತ್ತೀಚಿನ ವರದಿಯಲ್ಲಿ ಆಶಾವಾದ ವ್ಯಕ್ತಪಡಿಸಿದೆ. 2028ರ ವೇಳೆಗೆ ಉದ್ಯೋಗಿಗಳ ಸಂಖ್ಯೆ 1.48 ಕೋಟಿಗೆ ಏರಿಕೆ: ವರದಿಯ ಅಂದಾಜಿನ ಪ್ರಕಾರ, ಇನ್ನು ಎರಡು ವರ್ಷಗಳಲ್ಲಿ…

Read More
KEA Recruitment 2026 Apply Online for 1600 Armed Police Constable

KEA Recruitment: 1600 ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಹೀಗೆ ಅಪ್ಲೈ ಮಾಡಿ

ಬೆಂಗಳೂರು: ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಸಿಕ್ಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA Recruitment) ಜೂನ್ 2026ರ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ 1600 ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ (CAR/DAR) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು ಹುದ್ದೆಗಳ ಪೈಕಿ ಆರ್​ಪಿಸಿ (RPC) ವಿಭಾಗದಲ್ಲಿ 1421 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ (KK) ವಿಭಾಗದಲ್ಲಿ 179 ಹುದ್ದೆಗಳು…

Read More
amazon lay off in Selling Partner Services team shock to employs

Amazon: ಆರು ತಿಂಗಳಲ್ಲಿ 30,000 ಮಂದಿ ಮನೆಗೆ; ಅಮೆಜಾನ್ ಮಾರಾಟಗಾರರ ಸೇವಾ ವಿಭಾಗದ ಮೇಲೆ ಈಗ ವಜಾ ಕತ್ತಿ.

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರವನ್ನು ಪುನರ್ವಿಂಗಡಿಸಲು ಮುಂದಾಗಿರುವ ಅಮೆಜಾನ್ (Amazon) ಕಂಪನಿಯು ಉದ್ಯೋಗಿಗಳಿಗೆ ಮತ್ತೊಂದು ಬಿಗ್ ಶಾಕ್ ನೀಡಿದೆ. ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಈ ಬಾರಿ ಕಂಪನಿಯ ಪ್ರಮುಖ ವಿಭಾಗಗಳಲ್ಲಿ ಒಂದಾದ ‘ಸೆಲ್ಲಿಂಗ್ ಪಾರ್ಟ್ನರ್ ಸರ್ವಿಸಸ್’ ತಂಡದ ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನಿಸಿದೆ. ಯಾವ ವಿಭಾಗದ ಮೇಲೆ ಪ್ರಭಾವ? ಅಮೆಜಾನ್‌ನಲ್ಲಿ ಮಾರಾಟಗಾರರ ಖಾತೆಗಳ ನಿರ್ವಹಣೆ ಮತ್ತು ಸರಕುಗಳ ವಿತರಣಾ ಜವಾಬ್ದಾರಿ ಹೊತ್ತಿದ್ದ ಉದ್ಯೋಗಿಗಳು ಈ ಕಡಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅಲ್ಪ ಪ್ರಮಾಣದ ವಜಾ ಎಂದು…

Read More
Good News karnataka government ready to recruit 56,432 post

Good News: 56,432 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಅರಸುತ್ತಿದ್ದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ (Good News) ನೀಡಿದೆ. ಬಹುಕಾಲದ ಚರ್ಚೆಯಾಗಿದ್ದ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿರುವ ಸರ್ಕಾರ, ಖಾಲಿ ಇರುವ ಒಟ್ಟು 56,432 ಹುದ್ದೆಗಳ ನೇರ ನೇಮಕಾತಿಗೆ ಹಸಿರು ನಿಶಾನೆ ತೋರಿಸಿದೆ. ಒಳಮೀಸಲಾತಿ ಹಂಚಿಕೆಯ ವಿವರ ನ್ಯಾಯಾಲಯದ ಮಧ್ಯಂತರ ಆದೇಶದ ಅನ್ವಯ, ಸದ್ಯಕ್ಕೆ ಪರಿಶಿಷ್ಟ ಜಾತಿಯ ಒಟ್ಟು ಮೀಸಲಾತಿಯನ್ನು ಶೇಕಡಾ 15ಕ್ಕೆ ನಿಗದಿಪಡಿಸಲಾಗಿದೆ. ಈ ಮೀಸಲಾತಿಯನ್ನು ವೈಜ್ಞಾನಿಕವಾಗಿ ಮೂರು…

Read More
high court gives stay to continue interview for valmiki university

High Court: ವಾಲ್ಮೀಕಿ ವಿವಿ ನೇಮಕಾತಿಗೆ ಹೈಕೋರ್ಟ್ ಬ್ರೇಕ್: 24 ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪ್ರಕ್ರಿಯೆ ಸ್ಥಗಿತ

ರಾಯಚೂರು: ಸ್ಥಳೀಯ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ (High Court) ನಡೆಯುತ್ತಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವಿಶ್ವವಿದ್ಯಾಲಯ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ನಿಯಮ ಉಲ್ಲಂಘನೆಯ ಆರೋಪ: ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಖಾಲಿ ಇದ್ದ 24 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಕೇವಲ ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ನಿರ್ಧರಿಸಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ…

Read More