TOP NEWS

Job Recruitment: ಪದವಿ ಆಗಿದ್ರೆ ಜಿಲ್ಲಾ ಮಿಷನ್ ಸಂಯೋಜಕ ಹುದ್ದೆಗೆ ಅರ್ಜಿ ಹಾಕಿ

Job Recruitment Apply Offline for 1 District Mission Coordinator Post

ಯಾದಗಿರಿ: ಜಿಲ್ಲೆಯ ಮಹಿಳಾ ಸಬಲೀಕರಣ ವಿಭಾಗದಲ್ಲಿ ಖಾಲಿ ಇರುವ ‘ಜಿಲ್ಲಾ ಮಿಷನ್ ಸಂಯೋಜಕ’ (District Mission Coordinator) ಹುದ್ದೆಯನ್ನು ಭರ್ತಿ ಮಾಡಲು (Job Recruitment) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ‘ಮಿಷನ್ ಶಕ್ತಿ’ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅರ್ಜಿ ನಮೂನೆಯನ್ನು ಯಾದಗಿರಿ ಜಿಲ್ಲೆಯ ಅಧಿಕೃತ ವೆಬ್‌ಸೈಟ್ (yadgir.nic.in) ನಲ್ಲಿರುವ ‘ನೇಮಕಾತಿ’ (Recruitment) ವಿಭಾಗದ ‘ನೋಟಿಸ್’ (Notices) ಪುಟದಲ್ಲಿ ಪಡೆದುಕೊಳ್ಳಬಹುದು. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸಂಬಂಧಪಟ್ಟ ದಾಖಲೆಗಳೊಂದಿಗೆ ಸಲ್ಲಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿ ಹೀಗಿದೆ

ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ
ಹುದ್ದೆಗಳ ಸಂಖ್ಯೆ: 1
ಉದ್ಯೋಗ ಸ್ಥಳ: ಯಾದಗಿರಿ
ಹುದ್ದೆಯ ಹೆಸರು: ಜಿಲ್ಲಾ ಮಿಷನ್ ಸಂಯೋಜಕರು

ಶೈಕ್ಷಣಿಕ ಅರ್ಹತೆ: ಪದವಿ ಆಗಿರಬೇಕು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 5, 2026 ಆಗಿದೆ. ಉದ್ಯೋಗಾಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಂಬಂಧಪಟ್ಟ ಕಚೇರಿಗೆ ತಲುಪಿಸಬೇಕೆಂದು ಇಲಾಖೆ ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *