Crime: ‘ನಕಲಿ ನಕ್ಸಲ್’ ಹವಾ ಮುಕ್ತಾಯ: ಭಯದ ವಾತಾವರಣ ಸೃಷ್ಟಿಸುತ್ತಿದ್ದ ಕನಕಲಬಂಡೆ ವೆಂಕಟೇಶ್ ಕೊನೆಗೂ ಕಂಬಿ ಹಿಂದೆ
ತುಮಕೂರು: ಜಿಲ್ಲೆಯ ಗಡಿ ತಾಲೂಕಾದ ಪಾವಗಡದಲ್ಲಿ ಕಳೆದ ಕೆಲ ದಿನಗಳಿಂದ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದ ‘ನಕಲಿ ನಕ್ಸಲ್’ ಕನಕಲಬಂಡೆ (Crime) ವೆಂಕಟೇಶ್ ಅಲಿಯಾಸ್ ದೇವನ್ನನ ಕ್ರಿಮಿನಲ್ ಸಾಮ್ರಾಜ್ಯಕ್ಕೆ ಕೊನೆಗೂ ತೆರೆಬಿದ್ದಿದೆ. ನಕ್ಸಲೈಟ್‌ಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಗಡಿಭಾಗದ ಜನರಲ್ಲಿ ಭೀತಿ ಹುಟ್ಟಿಸಿ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದ ಈತನ ಕುಖ್ಯಾತ ಹಿನ್ನೆಲೆ ಇದೀಗ ಪೊಲೀಸ್ ತನಿಖೆಯಿಂದ ಒಂದೊಂದಾಗಿ ಬಯಲಾಗುತ್ತಿದೆ. ದಶಕದಿಂದ ಬೆಳೆದುಬಂದ ಅಪರಾಧ ಪಥ ಮೂಲತಃ ಪಾವಗಡ ತಾಲೂಕಿನ ಕನಕಲಬಂಡೆ ಗ್ರಾಮದವನಾದ…
