ಬಾಗಲಕೋಟೆ: ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ ಪತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿ, ಆಕೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ (Crime) ದೃಶ್ಯವನ್ನು ಪೋಷಕರಿಗೆ ವೀಡಿಯೊ ಕಾಲ್ ಮಾಡಿ ತೋರಿಸಿದ ಅಮಾನುಷ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ?
ಘಟನೆಯಲ್ಲಿ 23 ವರ್ಷದ ಭಾಗ್ಯಶ್ರೀ ಜಿಗಳೂರ ಕೊಲೆಯಾದ ದುರದೃಷ್ಟಕರ ಮಹಿಳೆಯಾಗಿದ್ದು, ಆಕೆಯ ಪತಿ ಪ್ರವೀಣ ಜಿಗಳೂರ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಭಾನುವಾರ ಸಂಜೆ ಈ ದುರಂತ ನಡೆದಿದೆ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬದಲ್ಲಿ ಪದೇ ಪದೇ ಗಲಾಟೆ ನಡೆಯುತ್ತಿದ್ದ ಕಾರಣ ಭಾಗ್ಯಶ್ರೀ ಕಳೆದ ಎರಡು ತಿಂಗಳಿನಿಂದ ತವರು ಮನೆಯಲ್ಲಿದ್ದರು. ಇತ್ತೀಚೆಗೆ ಪತಿ ಪ್ರವೀಣ, ಇನ್ನು ಮುಂದೆ ಚೆನ್ನಾಗಿ ಸಂಸಾರ ನಡೆಸುವುದಾಗಿ ನಂಬಿಸಿ ಆಕೆಯನ್ನು ಮನೆಗೆ ಕರೆತಂದಿದ್ದನು. ಆದರೆ ಮನೆಗೆ ಬಂದ ದಿನವೇ ಸಂಜೆ ಆಕೆಯ ಮೇಲೆ ಮರದ ತುಂಡಿನಿಂದ ಹಲ್ಲೆ ನಡೆಸಿ, ಬಳಿಕ ದುಪ್ಪಟಾದಿಂದ ನೇಣಿಗೆ ತಳ್ಳಿದ್ದಾನೆ.
ವಿಡಿಯೋ ಹಂಚಿಕೊಂಡು ವಿಖರತಿ ಮೆರೆದ ಭೂಪ
ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಪತ್ನಿ ಉಸಿರುಗಟ್ಟಿ ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದಾಗ ಆಕೆಯ ಪೋಷಕರಿಗೆ ನೇರವಾಗಿ ವೀಡಿಯೊ ಕಾಲ್ ಮಾಡಿ ಮಗಳ ಸಾವಿನ ದೃಶ್ಯವನ್ನು ಅಮಾನವೀಯವಾಗಿ ತೋರಿಸಿದ್ದಾನೆ. ಅಲ್ಲದೆ, ಈ ದೃಶ್ಯವನ್ನು ವೀಡಿಯೊ ರೆಕಾರ್ಡ್ ಮಾಡಿ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಿಕೊಂಡಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೀಳಗಿಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ
ಇದನ್ನೂ ಓದಿ: ಜೈಲು ಹಕ್ಕಿಗೆ ಸಿಮ್ ಸಪ್ಲೈ ಮಾಡಲು ಸ್ಕೆಚ್: ಪೊಲೀಸರ ಅಲರ್ಟ್ ಕಾರ್ಯಾಚರಣೆಗೆ ಪ್ಲಾನ್ ಫ್ಲಾಪ್!
