ಹಾಸನ: ಐತಿಹಾಸಿಕ ಹಾಸನಾಂಬ ದೇವಿ (Hassanamba) ಜಾತ್ರೋತ್ಸವವು ಕೇವಲ ಹಾಸನ ಜಿಲ್ಲೆಗೆ ಸೀಮಿತವಾಗಿ ಉಳಿಯದೆ, ಇಡೀ ನಾಡಹಬ್ಬವಾಗಿ ಮಾರ್ಪಟ್ಟಿದೆ. ಹಾಸನಾಂಬೆಯು ನಾಡದೇವತೆಯಾಗಿ ಹೊರಹೊಮ್ಮಿದ್ದು, ಭಕ್ತರ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಉತ್ಸವದ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಕಳೆದ ಬಾರಿಗಿಂತ ಈ ಬಾರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹೆಚ್ಛುವರಿ ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
1. ವರ್ಷಕ್ಕೊಮ್ಮೆ (Hassanamba) ತೆರೆಯುವ ದೇವಾಲಯದ ಮಹತ್ವ
ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲ್ಪಡುವ ಹಾಸನಾಂಬ ದೇವಾಲಯದ ಬಾಗಿಲು ಈ ಬಾರಿ ಅಕ್ಟೋಬರ್ 29, 2026 ರಿಂದ ನವೆಂಬರ್ 11, 2026 ರವರೆಗೆ ಸಾರ್ವಜನಿಕರ ದರ್ಶನಕ್ಕಾಗಿ ಮುಕ್ತವಾಗಿರಲಿದೆ. ಮೊದಲ ದಿನ ಹಾಗೂ ಕೊನೆಯ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.
2. ಶ್ರೀ ಹಾಸನಾಂಬ ದೇವಿ ದರ್ಶನ ವಿವರ – 2026 (ವೇಳಾಪಟ್ಟಿ)
| ದಿನಾಂಕ ಮತ್ತು ವಾರ | ದರ್ಶನ ಸಮಯ | ನೈವೇದ್ಯ ಸಮಯ (ದರ್ಶನವಿರುವುದಿಲ್ಲ) |
| 29-10-2026, ಗುರುವಾರ | ಮಧ್ಯಾಹ್ನ 12.00 ಕ್ಕೆ ಬಾಗಿಲು ತೆರೆಯಲಾಗುವುದು. | ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ |
| 30-10-2026, ಶುಕ್ರವಾರ | ಬೆಳಿಗ್ಗೆ 6.00 ರಿಂದ ಸಂಜೆ 7.00 ರ ವರೆಗೆ | ಸಂಜೆ 7.00 ರ ನಂತರ ದರ್ಶನವಿರುವುದಿಲ್ಲ |
| 31-10-2026, ಶನಿವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 3.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 3.00 ರಿಂದ 6.00 |
| 01-11-2026, ಭಾನುವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 3.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 3.00 ರಿಂದ 6.00 |
| 02-11-2026, ಸೋಮವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 3.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 3.00 ರಿಂದ 6.00 |
| 03-11-2026, ಮಂಗಳವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 3.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 3.00 ರಿಂದ 6.00 |
| 04-11-2026, ಬುಧವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 12.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 12.00 ರಿಂದ 6.00 |
| 05-11-2026, ಗುರುವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 2.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 2.00 ರಿಂದ 6.00 |
| 06-11-2026, ಶುಕ್ರವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 3.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 3.00 ರಿಂದ 6.00 |
| 07-11-2026, ಶನಿವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 12.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 12.00 ರಿಂದ 6.00 |
| 08-11-2026, ಭಾನುವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 2.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 2.00 ರಿಂದ 6.00 |
| 09-11-2026, ಸೋಮವಾರ | ಬೆಳಿಗ್ಗೆ 6.00 – ಮಧ್ಯಾಹ್ನ 2.00 ಮಧ್ಯಾಹ್ನ 3.30 – ಬೆಳಗಿನ ಜಾವ 12.00 | ಮಧ್ಯಾಹ್ನ 2.00 ರಿಂದ 3.30 ಬೆಳಗಿನ ಜಾವ 12.00 ರಿಂದ 6.00 |
| 10-11-2026, ಮಂಗಳವಾರ | ಬೆಳಿಗ್ಗೆ 6.00 – ಸಂಜೆ 7.00 ರಾತ್ರಿ 1.00 – ಬೆಳಗಿನ ಜಾವ 7.00 | ಸಂಜೆ 7.00 ರಿಂದ ರಾತ್ರಿ 1.00 |
| 11-11-2026, ಬುಧವಾರ | ಮಧ್ಯಾಹ್ನ 12.00 ಗಂಟೆಗೆ ಬಾಗಿಲು ಮುಚ್ಚಲಾಗುವುದು | ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ |
3. ಭಕ್ತಾದಿಗಳಿಗೆ ಮುಖ್ಯ ಸೂಚನೆಗಳು
- ದರ್ಶನ ಸಮಯ ಪರಿಶೀಲಿಸಿ: ನೈವೇದ್ಯ ನೆರವೇರಿಸುವ ಸಮಯದಲ್ಲಿ ದೇವಿಯ ದರ್ಶನ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಆದ್ದರಿಂದ ಭಕ್ತಾದಿಗಳು ವೇಳಾಪಟ್ಟಿಯನ್ನು ಗಂಟೆಗಳ ಆಧಾರದ ಮೇಲೆ ನೋಡಿ ಆಗಮಿಸುವುದು ಸೂಕ್ತ.
- ಆರಂಭ ಮತ್ತು ಸಮಾರೋಪ: ಅಕ್ಟೋಬರ್ 29 ರಂದು ಬಾಗಿಲು ತೆರೆಯುವ ದಿನ ಮತ್ತು ನವೆಂಬರ್ 11 ರಂದು ಬಾಗಿಲು ಮುಚ್ಚುವ ದಿನ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.
ಇದನ್ನೂ ಓದಿ: “ಇನ್ನೂ 15-20 ವರ್ಷಗಳಲ್ಲಿ ನಾನು ಸಿಎಂ ಆಗ್ತೀನಿ, ಯಾರು ತಡೆಯೋಕೆ ಆಗಲ್ಲ”: ಶಾಸಕ ಪ್ರದೀಪ್ ಈಶ್ವರ್ ಬೋಲ್ಡ್ ಹೇಳಿಕೆ!
