TOP NEWS

Toxic: ‘ಟಾಕ್ಸಿಕ್’ ಟ್ರೇಲರ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದ ಧಮಾಕಾ: ಅಪ್ಪ-ಮಗನಾಗಿ ಅಬ್ಬರಿಸಿದ ಮಾನ್‌ಸ್ಟರ್, ಫ್ಯಾನ್ಸ್ ಫಿದಾ!

rocking star yash toxic trailer released

ಬೆಂಗಳೂರು: ‘ಕೆಜಿಎಫ್’ ಸರಣಿಯ ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿದ್ದಾರೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ ಚಿತ್ರದ ಭರ್ಜರಿ ಟ್ರೇಲರ್ ಇಂದು ಸಿಲಿಕಾನ್ ಸಿಟಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅಧಿಕೃತವಾಗಿ ಅನಾವರಣಗೊಂಡಿದೆ.

ದ್ವಿಪಾತ್ರದಲ್ಲಿ ರಾಕಿ ಭಾಯ್ ಧಮಾಕಾ: ತಾರಾಗಣದ ಜುಗಲ್ಬಂದಿ ಸದ್ಯ ಬಿಡುಗಡೆಯಾಗಿರುವ 4 ನಿಮಿಷ 38 ಸೆಕೆಂಡ್‌ಗಳ ಸುದೀರ್ಘ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಚಿತ್ರದಲ್ಲಿ ಯಶ್ ಅಪ್ಪ ಹಾಗೂ ಮಗನಾಗಿ ದ್ವಿಪಾತ್ರದಲ್ಲಿ ಅಬ್ಬರಿಸಿರುವುದು ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದೆ. ಅದರಲ್ಲೂ ಮಗನ ಪಾತ್ರದ ಲುಕ್ ಯಶ್ ಅವರ ಹಳೆಯ ಸೂಪರ್ ಹಿಟ್ ಚಿತ್ರ ‘ಲಕ್ಕಿ’ಯನ್ನು ನೆನಪಿಸುವಂತಿದೆ. ಇನ್ನು ರಾಕಿಂಗ್ ಸ್ಟಾರ್‌ಗೆ ಪೈಪೋಟಿ ನೀಡುವಂತೆ ನಾಯಕಿಯರು ಸಾಥ್ ಕೊಟ್ಟಿದ್ದು, ಅದರಲ್ಲೂ ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ ಅವರ ಪಾತ್ರ ಟ್ರೇಲರ್‌ನಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕಣ್ಣು ಕೋರೈಸುವ ವಿಶುವಲ್ಸ್ ಜೊತೆಗೆ “ಹೆಣ್ಣಿಗೆ ಅಂದ ಇದ್ರೆ ಚೆಂದ, ಆ ಅಂದನೇ ಆಯುಧ ಮಾಡಿಕೊಂಡ್ರೆ ಹೇಗೆ ಕಂದ…” ಎನ್ನುವ ಖಡಕ್ ಮಾಸ್ ಸಂಭಾಷಣೆಗಳು ಈಗಾಗಲೇ ಸಿನಿಪ್ರೇಮಿಗಳ ಬಾಯಲ್ಲಿ ಹರಿದಾಡುತ್ತಿವೆ.

ಹಾಲಿವುಡ್ ರೇಂಜ್ ಮೇಕಿಂಗ್; ಪ್ಯಾನ್ ವರ್ಲ್ಡ್ ರಿಲೀಸ್ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ನಟ ಯಶ್ ಅವರೂ ಸಹ ಕಥೆ ಬರೆಯುವಲ್ಲಿ ಕೈಜೋಡಿಸಿದ್ದಾರೆ. ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿದ್ಧವಾಗಿರುವ ಈ ಹೈ ಬಜೆಟ್ ಸಿನಿಮಾ, ಏಕಕಾಲಕ್ಕೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ಗ್ಲೋಬಲ್ ಮಟ್ಟದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಭಾರತೀಯ ಚಿತ್ರರಂಗದ ಗಡಿ ದಾಟಲು ರೆಡಿಯಾಗಿರುವ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಅವರಂತಹ ದಕ್ಷಿಣ ಹಾಗೂ ಬಾಲಿವುಡ್‌ನ ಮೇರು ತಾರೆಯರ ದಂಡೇ ಇದೆ.

ಯಶ್ ಅವರ ಸ್ವಂತ ಸಂಸ್ಥೆ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಹಾಗೂ ‘ಕೆವಿಎನ್ ಪ್ರೊಡಕ್ಷನ್ಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಕರ್ನಾಟಕದ ವಿತರಣಾ ಹಕ್ಕನ್ನು ತಾವೇ ಉಳಿಸಿಕೊಂಡಿವೆ. ರವಿಬಸ್ರೂರು ಅವರ ಹಿನ್ನೆಲೆ ಸಂಗೀತ ಹಾಗೂ ರಾಜೀವ್ ರವಿ ಅವರ ಸಿನಿಮಾಟೋಗ್ರಫಿ ಟ್ರೇಲರ್‌ನ ತಾಂತ್ರಿಕ ಶ್ರೀಮಂತಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

ಇದನ್ನೂ ಓದಿ: ಟಾಕ್ಸಿಕ್’ ಟ್ರೈಲರ್ ಸಂಭ್ರಮ: ಬೆಂಗಳೂರಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟಿ ಕಿಯಾರಾ ಅಡ್ವಾಣಿ

Leave a Reply

Your email address will not be published. Required fields are marked *