TOP NEWS

Tollywood: ಜಾನ್ವಿ ಕಪೂರ್ ಹೇಳಿಕೆಗೆ ನಟಿ ರೆಜಿನಾ ಕ್ಯಾಸಂಡ್ರಾ ಖಡಕ್ ತಿರುಗೇಟು: ‘ಸಿನಿಮಾದಲ್ಲಿ ಇಷ್ಟವಿಲ್ಲದಿದ್ದರೆ ಹೊರನಡೆಯಿರಿ, ಅನಗತ್ಯ ಟೀಕೆ ಬೇಡ!’

Tollywood Regina Cassandra Slams Janhvi Kapoor Statements If Uncomfortable Walk Away from the Film

ಆಂಧ್ರಪ್ರದೇಶ: ತೆಲುಗು ಚಿತ್ರರಂಗದಲ್ಲಿನ (Tollywood) ತಮ್ಮ ಅನುಭವಗಳ ಕುರಿತು ನಟಿ ಜಾನ್ವಿ ಕಪೂರ್ ಹಾಗೂ ರಾಧಿಕಾ ಆಪ್ಟೆ ನೀಡಿದ್ದ ಹೇಳಿಕೆಗಳು ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ‘ಪೆದ್ದಿ’ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಗ್ಲಾಮರೈಸ್ ಅಥವಾ ವಸ್ತುವಿನಂತೆ (Objectification) ಬಿಂಬಿಸಲಾಗಿದೆ ಎಂಬ ಜಾನ್ವಿ ಕಪೂರ್ ಅವರ ವಿವಾದಾತ್ಮಕ ಹೇಳಿಕೆಗೆ ದಕ್ಷಿಣ ಭಾರತದ ಪ್ರಸಿದ್ಧ ನಟಿ ರೆಜಿನಾ ಕ್ಯಾಸಂಡ್ರಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರೀಕರಣದ ವೇಳೆ ಅಥವಾ ಪಾತ್ರದ ಚಿತ್ರಣದಲ್ಲಿ ಕಷ್ಟವೆನಿಸಿದರೆ ಅಂತಹ ಸಿನಿಮಾಗಳಿಂದ ನೇರವಾಗಿ ಹೊರಬರುವ ಆಯ್ಕೆ ನಟಿಯರಿಗೆ ಇದೆ ಎಂದು ಅವರು ತಿರುಗೇಟು ನೀಡಿದ್ದಾರೆ.

‘ಆಯ್ಕೆ ಇಲ್ಲದೆ ಒಪ್ಪಿಕೊಂಡೆ ಎನ್ನಲು ಸಾಧ್ಯವಿಲ್ಲ’: ರೆಜಿನಾ ನೇರ ಮಾತು

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೆಜಿನಾ ಕ್ಯಾಸಂಡ್ರಾ, ಚಿತ್ರರಂಗದಲ್ಲಿ ತಮ್ಮದೇ ಆದ ನೆಲೆ ಕಂಡುಕೊಂಡಿರುವ ನಟಿಯರು ತಮ್ಮ ಪಾತ್ರಗಳ ಬಗ್ಗೆ ಅಸಮಾಧಾನವಿದ್ದರೆ ಅದನ್ನು ನಿರಾಕರಿಸುವ ಹಕ್ಕು ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. “ನಿಮಗೆ ಯಾವುದೇ ಪಾತ್ರದಲ್ಲಿ ನಟಿಸಲು ಮುಜುಗರ ಅಥವಾ ಅಸಹಕಾಯತೆ ಎನಿಸಿದರೆ, ದಯವಿಟ್ಟು ಆ ಸಿನಿಮಾದಿಂದ ಹೊರನಡೆಯಿರಿ. ಬಲವಂತವಾಗಿ ನಟಿಸಿದೆ ಅಥವಾ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಹೇಳುವ ಪರಿಸ್ಥಿತಿಯಲ್ಲಿ ಇಂದಿನ ನಟಿಯರಿಲ್ಲ. ಜಾನ್ವಿ ಕಪೂರ್ ಅಥವಾ ರಾಧಿಕಾ ಆಪ್ಟೆ ಅವರಂತಹ ಪ್ರಭಾವಿ ನಟಿಯರಿಗೆ ಸಿನಿಮಾವನ್ನು ಬೇಡ ಎನ್ನುವಷ್ಟು ಅವಕಾಶ ಹಾಗೂ ಸ್ವಾತಂತ್ರ್ಯ ಖಂಡಿತ ಇದೆ,” ಎಂದು ರೆಜಿನಾ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗದ ಬಗ್ಗೆ ಉತ್ತರ ಭಾರತದ ನಟ-ನಟಿಯರು ಮಾಡುವ ಇಂತಹ ವಿಮರ್ಶೆಗಳು ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿ ನಡುವೆ ಅನಗತ್ಯವಾಗಿ ‘ಉತ್ತರ-ದಕ್ಷಿಣ ವಿಭಜನೆ’ಯನ್ನು ಸೃಷ್ಟಿಸುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಧರ್ಮಾ ಪ್ರೊಡಕ್ಷನ್ಸ್ ವಿರುದ್ಧ ರೆಜಿನಾ ಕ್ಯಾಸಂಡ್ರಾ ಗಂಭೀರ ಆರೋಪ

ತಮ್ಮ ಸಂದರ್ಶನದಲ್ಲಿ ಬಾಲಿವುಡ್‌ನ ಪ್ರಸಿದ್ಧ ನಿರ್ಮಾಣ ಸಂಸ್ಥೆ ‘ಧರ್ಮಾ ಪ್ರೊಡಕ್ಷನ್ಸ್’ ನೀಡಿದ ಕಹಿ ಅನುಭವವನ್ನು ರೆಜಿನಾ ಹಂಚಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ 2’ ಚಿತ್ರದಲ್ಲಿ ಅವರ ಪತ್ನಿಯಾಗಿ ರೆಜಿನಾ ನಟಿಸಿದ್ದರು. ಆದರೆ, ಚಿತ್ರದ ಪ್ರಚಾರದ ವೇಳೆ ನಿರ್ಮಾಣ ಸಂಸ್ಥೆಯು ತಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅವರು ಆರೋಪಿಸಿದ್ದಾರೆ.

“ಜಾನ್ವಿ ಕಪೂರ್ ಅವರು ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋನಲ್ಲಿ ಸೌತ್ ಸಿನಿಮಾದಲ್ಲಿ ತಮ್ಮನ್ನು ವಸ್ತುವಿನಂತೆ ಬಿಂಬಿಸಲಾಯಿತು ಎಂದು ಮಾತನಾಡುತ್ತಾರೆ. ಆದರೆ ಅದೇ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ‘ಕೇಸರಿ 2’ ಸಿನಿಮಾದ ಸಾಂಗ್ ಪ್ರಚಾರ ಮಾಡುವಾಗ ನನ್ನನ್ನು ಟ್ಯಾಗ್ ಕೂಡ ಮಾಡಲಿಲ್ಲ. ಆ ಹಾಡಿನಲ್ಲಿ ಮೊದಲಿನಿಂದ ಕೊನೆಯವರೆಗೆ ನಾನೇ ಅಭಿನಯಿಸಿದ್ದರೂ ನನ್ನನ್ನು ಏಕೆ ಗುರುತಿಸಲಿಲ್ಲ? ಇದನ್ನು ನಾನು ದಕ್ಷಿಣ ಭಾರತದ ನಟಿ ಎಂಬ ಕಾರಣಕ್ಕೆ ಮಾಡಿದ ತಾರತಮ್ಯ ಎನ್ನಬೇಕೋ ಅಥವಾ ಏನೆನ್ನಬೇಕೋ ಇಂದಿಗೂ ಅರ್ಥವಾಗಿಲ್ಲ,” ಎಂದು ರೆಜಿನಾ ಖಾರವಾಗಿ ಪ್ರಶ್ನಿಸಿದ್ದಾರೆ.

ಜಾನ್ವಿ ಕಪೂರ್ ‘ಪೆದ್ದಿ’ ಸಿನಿಮಾ ವಿವಾದ ಮತ್ತು ನೀಡಿದ್ದ ಹೇಳಿಕೆ ಏನು?

ರಾಮ್ ಚರಣ್ ಅಭಿನಯದ ಹಾಗೂ ಬುಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಅವರ ಪಾತ್ರವನ್ನು ತೋರಿಸಿದ ಕ್ಯಾಮೆರಾ ಕೋನಗಳು ಹಾಗೂ ಗ್ಲಾಮರ್ ಚಿತ್ರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಈ ಕುರಿತು ಕರಣ್ ಜೋಹರ್ ಶೋನಲ್ಲಿ ಮಾತನಾಡಿದ್ದ ಜಾನ್ವಿ, “ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮೊದಲೇ ಸಿದ್ಧಪಡಿಸಿದ ಪೂರ್ಣ ಪ್ರಮಾಣದ ಸ್ಕ್ರಿಪ್ಟ್ (Bound Script) ಕೊಡುವುದು ತೀರಾ ವಿರಳ. ಕ್ಯಾಮೆರಾ ಕೋನಗಳು ಹೇಗಿರುತ್ತವೆ ಎಂಬುದು ಮುಂಚಿತವಾಗಿ ತಿಳಿಯುವುದಿಲ್ಲ. ನಿರ್ದೇಶಕರು ಹೇಳಿದಂತೆ ಕೇಳಬೇಕಾದ ವಾತಾವರಣ ಇರುತ್ತದೆ. ಈ ಘಟನೆ ನನಗೆ ಮಾನಸಿಕವಾಗಿ ಕಷ್ಟ ನೀಡಿತು ಮತ್ತು ಅಪಮಾನಕರ ಅನುಭವ ನೀಡಿತು. ನನ್ನ ಸ್ಥಾನಮಾನವನ್ನು ಬಳಸಿ ನಾನು ಇದನ್ನು ತಡೆಯಬೇಕಿತ್ತು,” ಎಂದು ಕಣ್ಣೀರಿಟ್ಟಿದ್ದರು. ಈ ಹೇಳಿಕೆಗೆ ಈಗ ರೆಜಿನಾ ಕ್ಯಾಸಂಡ್ರಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಮಿತಾಭ್ ಬಚ್ಚನ್ ಬಂಗಲೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಿಗೆ ಬಾಂಬ್ ಬೆದರಿಕೆ

Leave a Reply

Your email address will not be published. Required fields are marked *