Janhvi Kapoor: ‘ಡೀಪ್‌ಫೇಕ್’ ವಿರುದ್ಧ ಬಾಲಿವುಡ್ ನಟಿ ಜಾನ್ವಿ ಕಪೂರ್ ತೀವ್ರ ಆಕ್ರೋಶ
ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ಜಾನ್ವಿ ಕಪೂರ್ (Janhvi Kapoor) ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಲೈಂಗಿಕವಾಗಿ ಅಸಭ್ಯವಾದ ‘ಡೀಪ್‌ಫೇಕ್’ (Deepfake) ವೀಡಿಯೊ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನದ ದುರ್ಬಳಕೆ ಮತ್ತು ಮಹಿಳೆಯರ ಸಮ್ಮತಿಯ ಕುರಿತು ಅತ್ಯಂತ ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಅವರು, ಇನ್ಸ್ಟಾಗ್ರಾಮ್ ಖಾತೆಯ ಸ್ಟೋರೀಸ್ ವಿಭಾಗದಲ್ಲಿ ದೀರ್ಘವಾದ ಭಾವನಾತ್ಮಕ ಹಾಗೂ ಖಾರವಾದ ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಜೂನಿಯರ್ ಎನ್ಟಿಆರ್ ಅವರೊಂದಿಗೆ ನಟಿಸಿದ್ದ ‘ದೇವರ’ ಚಿತ್ರದ ದೃಶ್ಯವೊಂದನ್ನು ತರ್ತು ಮಾಡಿ, ಕೃತಕ ಬುದ್ಧಿಮತ್ತೆಯ…
