Allu Arjun: ಅಭಿಮಾನಿಗಳಿಗೆ ವಿಮೆ ಗಿಫ್ಟ್ ನೀಡಿದ ಅಲ್ಲು ಅರ್ಜುನ್: ನೆಗೆಟಿವಿಟಿ, ಟ್ರೋಲ್‌ಗಳಿಂದ ದೂರವಿರಿ ಎಂದು ಐಕಾನ್ ಸ್ಟಾರ್ ಕಿವಿಮಾತು!
ಹೈದರಾಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ತಮ್ಮ ಅಖಿಲ ಭಾರತ ಅಭಿಮಾನಿ ಸಂಘದ (AAFA) ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ, ತಮಗೆ ಪ್ರಾಣಪ್ರಿಯರಾಗಿರುವ ಅಭಿಮಾನಿಗಳಿಗೆ ವಿಶೇಷ ವಿಮಾ ಸೌಲಭ್ಯವನ್ನು ಘೋಷಿಸಿದ್ದಾರೆ. ಇದೇ ವೇಳೆ ನೆರೆದಿದ್ದ ಬೃಹತ್ ಅಭಿಮಾನಿ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವನದಲ್ಲಿ ಸಮಯ ಮತ್ತು ಶಕ್ತಿಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬ ಬಗ್ಗೆ ಅತ್ಯಮೂಲ್ಯ ಸಂದೇಶ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿರುವ ನೆಗೆಟಿವಿಟಿ, ದ್ವೇಷ ಸಾಧನೆ ಮತ್ತು ಟ್ರೋಲಿಂಗ್‌ಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದ…
