ಮೈಸೂರು: ಪದವಿ ಶಿಕ್ಷಣ ಪೂರ್ಣಗೊಳಿಸಿ ಸರ್ಕಾರಿ ಹಾಗೂ ಅರೆ-ಸರ್ಕಾರಿ ರಂಗದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಮೈಸೂರು ಜಿಲ್ಲೆಯ ಅಭ್ಯರ್ಥಿಗಳಿಗೆ ನಂಜನಗೂಡಿನಿಂದ ಸಿಹಿ (Job News) ಸುದ್ದಿಯೊಂದು ಬಂದಿದೆ. ನಂಜನಗೂಡು ತಾಲೂಕು ಕಾನೂನು ಸೇವಾ ಸಮಿತಿಯ ಕಚೇರಿಯಲ್ಲಿ ಖಾಲಿ ಇರುವ ‘ಗುಮಾಸ್ತ ಹಾಗೂ ಬೆರಳಚ್ಚುಗಾರ’ (Clerk cum Typist) ಹುದ್ದೆಯನ್ನು ತಾತ್ಕಾಲಿಕ/ಒಪ್ಪಂದ ಆಧಾರದ ಮೇರೆಗೆ ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಶೈಕ್ಷಣಿಕ ಅರ್ಹತೆ (Job News) ಮತ್ತು ಮಾಸಿಕ ವೇತನದ ವಿವರ
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ (Arts, Commerce, Science, etc.) ಪದವಿ (Degree) ಪೂರ್ಣಗೊಳಿಸಿರಬೇಕು. ಶೈಕ್ಷಣಿಕ ಅರ್ಹತೆಯ ಜೊತೆಗೆ ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಮತ್ತು ಕನ್ನಡ ಹಾಗೂ ಇಂಗ್ಲಿಷ್ ಟೈಪಿಂಗ್ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳಿಗೆ ತಾಲೂಕು ಕಾನೂನು ಸೇವಾ ಸಮಿತಿಯ ನಿಯಮಾನುಸಾರ ಪ್ರತಿ ತಿಂಗಳು ₹23,376 ಸಂಚಿತ ವೇತನವನ್ನು (Consolidated Salary) ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕೊನೆಯ ದಿನಾಂಕ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ವ್ಯವಸ್ಥೆ ಇರುವುದಿಲ್ಲ. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವಯಂ ವಿವರಗಳನ್ನು ಒಳಗೊಂಡ ಅರ್ಜಿಯನ್ನು (Biodata/Resume) ಕಾಗದದ ಮೇಲೆ ಸ್ವ-ಹಸ್ತಾಕ್ಷರದಲ್ಲಿ ಭರ್ತಿ ಮಾಡಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ತಮ್ಮ ಶೈಕ್ಷಣಿಕ ಅಂಕಪಟ್ಟಿಗಳು, ಕಂಪ್ಯೂಟರ್ ಪ್ರಮಾಣಪತ್ರ ಹಾಗೂ ಇತರ ಅಗತ್ಯ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 25, 2026ರ ಸಂಜೆ 5:00 ಗಂಟೆಯೊಳಗೆ ನಿಗದಿತ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು.
- ಅರ್ಜಿ ತಲುಪಿಸಬೇಕಾದ ವಿಳಾಸ: ಸದಸ್ಯ ಕಾರ್ಯದರ್ಶಿಗಳು,ತಾಲೂಕು ಕಾನೂನು ಸೇವಾ ಸಮಿತಿ,ನ್ಯಾಯಾಲಯಗಳ ಆವರಣ, ಊಟಿ ರಸ್ತೆ,ನಂಜನಗೂಡು – 571301.
ಮುಂಚಿತವಾಗಿಯೇ ಅರ್ಜಿ ಸಲ್ಲಿಸಲು ನ್ಯಾಯಾಧೀಶರ ಕರೆ
ಅರ್ಜಿಗಳನ್ನು ನಿಗದಿತ ವಿಳಾಸಕ್ಕೆ ಖುದ್ದಾಗಿ ತೆರಳಿ ತಲುಪಿಸಬಹುದು ಅಥವಾ ಅಂಚೆ (Post/Courier) ಮೂಲಕವೂ ರವಾನಿಸಬಹುದು. ಆದರೆ ಅಂಚೆ ವಿಳಂಬದ ನೆಪಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಕೊನೆಯ ಗಳಿಗೆಯವರೆಗೆ ಕಾಯದೆ, ಅರ್ಹತೆ ಹೊಂದಿರುವ ಯುವಜನರು ತಕ್ಷಣವೇ ಅರ್ಜಿ ಸಲ್ಲಿಸಿ ಈ ಉತ್ತಮ ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ನಂಜನಗೂಡು ಹಿರಿಯ ಸಿವಿಲ್ ನ್ಯಾಯಾಧೀಶರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ; ಉದ್ಯೋಗಾಕಾಂಕ್ಷಿಗಳಿಗೆ KSOU ಭರ್ಜರಿ ಕೊಡುಗೆ: ಬ್ಯಾಂಕಿಂಗ್, SSC, RRB ಪರೀಕ್ಷೆಗಳಿಗೆ 45 ದಿನಗಳ ಉಚಿತ ತರಬೇತಿ!
