Tamil Nadu: : ವಿಜಯ್‌ ಪಟ್ಟಾಭಿಷೇಕದಲ್ಲಿ ವಿಳಂಬ, ಬೆಂಕಿ ಹಚ್ಚಿಕೊಂಡು ಅಭಿಮಾನಿ ಆತ್ಮಹ*ತ್ಯೆ ಯತ್ನ

tamil nadu TVK worker Sets Himself Ablaze

ಚೆನ್ನೈ: ತಮಿಳುನಾಡಿನ (Tamil Nadu) ರಾಜಕೀಯ ಇತಿಹಾಸದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲು ಸಜ್ಜಾಗಿರುವ ನಟ ವಿಜಯ್ ಅವರ ಮುಖ್ಯಮಂತ್ರಿ ಪಟ್ಟಾಭಿಷೇಕಕ್ಕೆ ಅಡೆತಡೆಗಳು ಎದುರಾಗಿವೆ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವುದು ಆತಂಕ ಮೂಡಿಸಿದೆ. ತಿರುನಲ್ವೇಲಿಯ ಚೆಟ್ಟಿಕುಲಂ ನಿವಾಸಿ ಮತ್ತು ಟಿವಿಕೆ ಪಕ್ಷದ ಪದಾಧಿಕಾರಿ ಇಸಕಿಯಪ್ಪನ್ (47) ಎಂಬುವವರು ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ಸಿಗುತ್ತಿಲ್ಲ ಎಂಬ ಬೇಸರದಿಂದ ಮೈಮೇಲೆ ಬೆಂಕಿ ಹಚ್ಚಿಕೊಂಡಿದ್ದಾರೆ. ಶೇ. 30ರಷ್ಟು ಸುಟ್ಟ ಗಾಯಗಳಾಗಿರುವ ಅವರಿಗೆ ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಸರ್ಕಾರ ರಚನೆಯ ಕಸರತ್ತು ಈಗ ತುತ್ತತುದಿಗೆ ತಲುಪಿದ್ದು, ನಟ ವಿಜಯ್ ಅವರು ಸತತ ಮೂರನೇ ದಿನವೂ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 1967ರ ನಂತರ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಹೊರತಾದ ನಾಯಕರೊಬ್ಬರು ತಮಿಳುನಾಡಿನ ಆಡಳಿತ ಹಿಡಿಯುತ್ತಿರುವುದು ಇದೇ ಮೊದಲು ಎಂಬ ಕಾರಣಕ್ಕೆ ಇಡೀ ದೇಶದ ಗಮನ ಈ ಬೆಳವಣಿಗೆಯತ್ತ ನೆಟ್ಟಿದೆ. 118 ಶಾಸಕರ ಸಂಖ್ಯಾಬಲದ ಅಗತ್ಯವಿರುವ ವಿಜಯ್ ಅವರಿಗೆ ಪ್ರಸ್ತುತ ಕೇವಲ ಒಬ್ಬ ಶಾಸಕನ ಬೆಂಬಲದ ಕೊರತೆ ಎದುರಾಗಿದೆ ಎನ್ನಲಾಗುತ್ತಿದೆ.

ಈಗಾಗಲೇ ಕಾಂಗ್ರೆಸ್‌ನ 5 ಶಾಸಕರು ಹಾಗೂ ಸಿಪಿಐ ಮತ್ತು ಸಿಪಿಎಂ ಪಕ್ಷದ ತಲಾ ಇಬ್ಬರು ಶಾಸಕರು ವಿಜಯ್ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಆದರೆ ಎರಡು ಸ್ಥಾನಗಳನ್ನು ಹೊಂದಿರುವ ವಿಸಿಕೆ (VCK) ಪಕ್ಷವು ತನ್ನ ನಿಲುವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸದಿರುವುದು ಕುತೂಹಲ ಮೂಡಿಸಿದೆ. ಈ ಮಧ್ಯೆ, ಸಿಪಿಎಂ ನಾಯಕ ಎಂ.ಎ. ಬೇಬಿ ಅವರು ರಾಜ್ಯಪಾಲರ ನಡೆಯನ್ನು ಟೀಕಿಸಿದ್ದು, ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಪ್ರಜಾಪ್ರಭುತ್ವದ ಸಂಪ್ರದಾಯವನ್ನು ರಾಜಭವನ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಬಹುಮತ ಸಾಬೀತಾದರೆ, ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಆಗಮಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಕಾನೂನು ಸಮರದ ಸ್ವರೂಪದ ಪಡೆದ ಟಿವಿಕೆ ಮತ್ತು ಎಎಂಎಂಕೆ ಪಕ್ಷಗಳ ಸಂಘರ್ಷ

Leave a Reply

Your email address will not be published. Required fields are marked *