TOP NEWS

Shocking: ಶ್ರೀಮಂತ ಯುವಕನ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆಯಿಟ್ಟ ವಿದ್ಯಾರ್ಥಿಗಳ ಬಂಧನ!

Davanagere Police Bust Student Kidnapping Gang Cloth Merchant Rescued 10 Arrested

ದಾವಣಗೆರೆ: ಶ್ರೀಮಂತ ಯುವಕರನ್ನೇ ಟಾರ್ಗೆಟ್ ಮಾಡಿ ಅಪಹರಿಸಿ, ಹಣಕ್ಕಾಗಿ ಪೀಡಿಸುತ್ತಿದ್ದ ಅತಿ ಅಪಾಯಕಾರಿ ಕಿಡ್ನಾಪಿಂಗ್ ಜಾಲವೊಂದನ್ನು ದಾವಣಗೆರೆ ನಗರ ಪೊಲೀಸರು ಯಶಸ್ವಿಯಾಗಿ (Shocking) ಭೇದಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಬೆಚ್ಚಿಬೀಳಿಸುವ ಘಟನೆಯಲ್ಲಿ, ನಗರದ ಬಟ್ಟೆ ವ್ಯಾಪಾರಿಯೊಬ್ಬರನ್ನು ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿ ಹತ್ತು ಲಕ್ಷ ರೂಪಾಯಿ ಕಂಗೆಟ್ಟ ಹಣಕ್ಕಾಗಿ ಬೆದರಿಕೆ ಹಾಕಿದ್ದ ಒಟ್ಟು 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯ ಎಂದರೆ ಬಂಧಿತರೆಲ್ಲರೂ ವಿದ್ಯಾಭ್ಯಾಸಕ್ಕಾಗಿ ದಾವಣಗೆರೆಗೆ ಬಂದಿದ್ದ ವಿವಿಧ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದಾರೆ.

ಘಟನೆಯ ಸಂಪೂರ್ಣ ವಿವರ: ನಗರದ ಆಂಜನೇಯ ಬಡಾವಣೆ ಹಾಗೂ ಶಾಮನೂರು ಸುತ್ತಮುತ್ತ ಈ ಭೀಕರ ಕೃತ್ಯ ನಡೆದಿದೆ. ಬಟ್ಟೆ ಅಂಗಡಿ ನಡೆಸುತ್ತಿದ್ದ 28 ವರ್ಷದ ಯುವಕನನ್ನು ಆತನ ಸ್ನೇಹಿತ ಅಬ್ಬಾಸ್ ಎಂಬಾತ ಹಣಕಾಸಿನ ವಿಚಾರವಾಗಿ ಮಾತನಾಡಬೇಕಿದೆ ಎಂದು ನಂಬಿಸಿ, ಪುಸಲಾಯಿಸಿ ಶಾಮನೂರು ಬಳಿಯ ಸಮುದಾಯ ಭವನದ ಹತ್ತಿರ ಕರೆಸಿಕೊಂಡಿದ್ದನು. ಅಲ್ಲಿಗೆ ಪೂರ್ವಾಪರ ಯೋಜನೆ ರೂಪಿಸಿಕೊಂಡು ಕಾರಿನಲ್ಲಿ ಬಂದಿದ್ದ ನಾಲೈದು ಜನರ ತಂಡವು, ಯುವಕನನ್ನು ಬಲವಂತವಾಗಿ ಕಾರಿಗೆ ತಳ್ಳಿ ಆಂಜನೇಯ ಬಡಾವಣೆಯಲ್ಲಿದ್ದ ರಹಸ್ಯ ಕೊಠಡಿಯೊಂದಕ್ಕೆ ಕರೆದೊಯ್ದಿತ್ತು.

ಅಲ್ಲಿ ಯುವಕನ ಮೇಲೆ ಮರದ ತುಂಡುಗಳು ಹಾಗೂ ಬಿಯರ್ ಬಾಟಲಿಗಳಿಂದ ಬಾಸುಂಡೆ ಬರುವಂತೆ ಮನಸೋಇಚ್ಛೆ ಹಲ್ಲೆ ನಡೆಸಲಾಗಿದೆ. ‘ತಕ್ಷಣವೇ ನಿಮ್ಮ ತಂದೆಗೆ ಕರೆ ಮಾಡಿ ಹತ್ತು ಲಕ್ಷ ರೂಪಾಯಿ ತರಿಸಿಕೊಡಬೇಕು, ಇಲ್ಲವಾದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ಮಾರಣಾಂತಿಕ ಬೆದರಿಕೆ ಹಾಕಿದ್ದರು. ಆದರೆ, ಅಪಹರಣಕ್ಕೊಳಗಾದ ಬಟ್ಟೆ ವ್ಯಾಪಾರಿ ಪ್ರತಿದಿನ ತಮ್ಮ ಕುಟುಂಬದ ವಾಟ್ಸಾಪ್ ಗ್ರೂಪ್‌ನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮೊಬೈಲ್ ಲೈವ್ ಲೋಕೇಷನ್ ಶೇರ್ ಮಾಡುವ ಅಭ್ಯಾಸ ಹೊಂದಿದ್ದರು.

ಯುವಕ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ವಾಟ್ಸಾಪ್ ಲೈವ್ ಲೋಕೇಷನ್ ಆಧರಿಸಿ ಆಂಜನೇಯ ಬಡಾವಣೆಯತ್ತ ಧಾವಿಸಿ ಹುಡುಕಾಟ ನಡೆಸಿದರು. ಸ್ಥಳದಲ್ಲಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಗುಂಪುಗೂಡುತ್ತಿರುವುದನ್ನು ಕಂಡ ಖದೀಮರು, ಸಿಕ್ಕಿಬೀಳುವ ಭಯದಿಂದ ಗಾಯಗೊಂಡಿದ್ದ ಬಟ್ಟೆ ವ್ಯಾಪಾರಿಯನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದರು.

10 ಜನ ಕಾಲೇಜು ವಿದ್ಯಾರ್ಥಿಗಳ ಬಂಧನ

ತಕ್ಷಣವೇ ಸಂತ್ರಸ್ತ ಯುವಕ ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ವಿದ್ಯಾನಗರ ಠಾಣೆ ಪೊಲೀಸರು, ಭೇದಿಸಿ ಒಟ್ಟು 10 ಜನ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಪ್ರಮುಖ ಆರೋಪಿಯಾದ ಗಂಗಾರಾಮ ಪವಾರ್ ಅಲಿಯಾಸ್ ಬಬ್ಲು ಎಂಬಾತನ ವಿರುದ್ಧ ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಮೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಇದನ್ನೂ ಓದಿ: ಜಮೀನು ವಿವಾದ ಹಾಗೂ ಪಡಿತರ ತಂದ ವಿಚಾರಕ್ಕೆ ಗಲಾಟೆ: ಅಣ್ಣನಿಂದ ತಮ್ಮನ ಕೊ*ಲೆ

Leave a Reply

Your email address will not be published. Required fields are marked *