Shocking: ಶ್ರೀಮಂತ ಯುವಕನ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆಯಿಟ್ಟ ವಿದ್ಯಾರ್ಥಿಗಳ ಬಂಧನ!
ದಾವಣಗೆರೆ: ಶ್ರೀಮಂತ ಯುವಕರನ್ನೇ ಟಾರ್ಗೆಟ್ ಮಾಡಿ ಅಪಹರಿಸಿ, ಹಣಕ್ಕಾಗಿ ಪೀಡಿಸುತ್ತಿದ್ದ ಅತಿ ಅಪಾಯಕಾರಿ ಕಿಡ್ನಾಪಿಂಗ್ ಜಾಲವೊಂದನ್ನು ದಾವಣಗೆರೆ ನಗರ ಪೊಲೀಸರು ಯಶಸ್ವಿಯಾಗಿ (Shocking) ಭೇದಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಬೆಚ್ಚಿಬೀಳಿಸುವ ಘಟನೆಯಲ್ಲಿ, ನಗರದ ಬಟ್ಟೆ ವ್ಯಾಪಾರಿಯೊಬ್ಬರನ್ನು ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿ ಹತ್ತು ಲಕ್ಷ ರೂಪಾಯಿ ಕಂಗೆಟ್ಟ ಹಣಕ್ಕಾಗಿ ಬೆದರಿಕೆ ಹಾಕಿದ್ದ ಒಟ್ಟು 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯ ಎಂದರೆ ಬಂಧಿತರೆಲ್ಲರೂ ವಿದ್ಯಾಭ್ಯಾಸಕ್ಕಾಗಿ ದಾವಣಗೆರೆಗೆ ಬಂದಿದ್ದ ವಿವಿಧ ಖಾಸಗಿ ಕಾಲೇಜುಗಳ…
