Viral News: ಆಂಧ್ರದಲ್ಲಿ ಅದ್ಭುತ ಶಸ್ತ್ರಚಿಕಿತ್ಸೆ: ಮಹಿಳೆಯ ಹೊಟ್ಟೆಯಿಂದ 14 ಪೆನ್, 5 ಚಮಚ, ಮೇಣದಬತ್ತಿ ಹೊರತೆಗೆದ ವೈದ್ಯರು
ಆಂಧ್ರಪ್ರದೇಶ: ಪಲ್ನಾಡು ಜಿಲ್ಲೆಯ ಕೇಂದ್ರವಾದ ನರಸರಾವ್‌ಪೇಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅತ್ಯಂತ ವಿರಳ ಹಾಗೂ ಆಘಾತಕಾರಿ ವೈದ್ಯಕೀಯ ಘಟನೆಯೊಂದು (Viral News) ಬೆಳಕಿಗೆ ಬಂದಿದೆ. 33 ವರ್ಷದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಹಲವಾರು ವಿಚಿತ್ರ ವಸ್ತುಗಳನ್ನು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಜೀವ ರಕ್ಷಿಸಿದ್ದಾರೆ. ಶಸ್ತ್ರಚಿಕಿತ್ಸೆಯ ವೇಳೆ ಮಹಿಳೆಯ ಹೊಟ್ಟೆಯಿಂದ ಬರೋಬ್ಬರಿ 14 ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ಮೇಣದಬತ್ತಿ ಪತ್ತೆಯಾಗಿದ್ದು, ಇದನ್ನು ಕಂಡ ವೈದ್ಯರೇ ಕೆಲಕಾಲ ದಿಗ್ಭ್ರಮೆಗೊಂಡಿದ್ದಾರೆ. ಏನಿದು ವಿಚಿತ್ರ ಘಟನೆ? ನರಸರಾವ್‌ಪೇಟೆಯ ಮಾತೃಶ್ರೀ…
