Shocking: ಚಿಕಿತ್ಸೆ ನೆಪದಲ್ಲಿ 7 ಲಕ್ಷ ವಸೂಲಿ, ಖಾಸಗಿ ಆಸ್ಪತ್ರೆ ವಿರುದ್ಧ ಪೋಷಕರ ಗಂಭೀರ ಆರೋಪ
ಮೈಸೂರು: ಚೆಲುವಾಂಬ ಆಸ್ಪತ್ರೆಯ ಪ್ರಕರಣದ ಬೆನ್ನಲ್ಲೇ, ಇದೀಗ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ (Shocking) ವೈದ್ಯಕೀಯ ನಿರ್ಲಕ್ಷ್ಯ ಮತ್ತು ಹಣದ ಲೂಟಿ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗೋಕುಲಂ ಪ್ರದೇಶದಲ್ಲಿರುವ ಡಿಆರ್‌ಎಂ (DRM) ಆಸ್ಪತ್ರೆಯಲ್ಲಿ 45 ದಿನಗಳ ಕಾಲ ಚಿಕಿತ್ಸೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆದು, ಕೊನೆಗೆ ಮಗು ಮೃತಪಟ್ಟಿದೆ ಎಂದು ತಿಳಿಸಿರುವ ಆಸ್ಪತ್ರೆಯ ನಡೆ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಹಿನ್ನೆಲೆ: ಕೆಆರ್‌ಎಸ್ ಮೂಲದ ದಯಾನಂದ ಮತ್ತು ದಿವ್ಯಾ ದಂಪತಿಗಳ ಮಗು 7 ತಿಂಗಳಿಗೆ…
