ಚೆನ್ನೈ: ತಮಿಳುನಾಡು ರಾಜಕೀಯದ ದಿಕ್ಸೂಚಿ ಬದಲಾಗಿದ್ದು, ಮೇ 10ರಂದು ನಟ ವಿಜಯ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮೂಲಕ ಮೊದಲ ಪ್ರಯತ್ನದಲ್ಲೇ ಶತಕದ ಗಡಿ ದಾಟಿದ ಸ್ಥಾನಗಳನ್ನು ಗೆದ್ದು ವಿಜಯ್ ಹೊಸ ದಾಖಲೆ ಬರೆದಿದ್ದಾರೆ. ಆದರೆ, ಇಂದು ಸಿಎಂ ಆಗಿ ಮಿಂಚುತ್ತಿರುವ ವಿಜಯ್ (TVK Vijay) ಅವರ ಆರಂಭದ ದಿನಗಳು ಸಾಲು ಸಾಲು ಅವಮಾನ ಮತ್ತು ಸೋಲುಗಳಿಂದ ಕೂಡಿದ್ದವು ಎಂಬುದು ಅನೇಕರಿಗೆ ತಿಳಿದಿಲ್ಲ.
ಕಠಿಣ ಹಾದಿ ಮತ್ತು (TVK Vijay) ಆರಂಭಿಕ ಹಿನ್ನಡೆ
1992ರಲ್ಲಿ ‘ನಾಳಯ್ಯ ತೀರ್ಪು’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ವಿಜಯ್ ಅವರಿಗೆ ಮೊದಲ ಸಿನಿಮಾವೇ ನಿರಾಸೆ ಮೂಡಿಸಿತ್ತು. ಆರಂಭದ 12 ವರ್ಷಗಳ ಕಾಲ ಅವರು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. 1992 ರಿಂದ 2004ರ ಅವಧಿಯಲ್ಲಿ ಸುಮಾರು 17 ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ್ದವು ಅಥವಾ ಸಾಧಾರಣ ಎನಿಸಿಕೊಂಡಿದ್ದವು. ಆದರೆ, ಈ ಸೋಲುಗಳಿಗೆ ವಿಜಯ್ ಎದೆಗುಂದಲಿಲ್ಲ.
‘ಗಿಲ್ಲಿ’ ನೀಡಿದ (TVK Vijay) ಸಂಚಲನ
ವಿಜಯ್ ಅವರ ವೃತ್ತಿಬದುಕಿಗೆ ದೊಡ್ಡ ಬ್ರೇಕ್ ನೀಡಿದ್ದು 2004ರ ‘ಗಿಲ್ಲಿ’ ಸಿನಿಮಾ. ತ್ರಿಶಾ ಕೃಷ್ಣನ್ ಜೊತೆ ನಟಿಸಿದ ಈ ಚಿತ್ರ ವಿಜಯ್ ಅವರನ್ನ ಮಾಸ್ ಹೀರೊ ಆಗಿ ರೂಪಿಸಿತು. ಅಂದು 50 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಆ ವರ್ಷದ ನಂಬರ್ ಒನ್ ಚಿತ್ರವಾಗಿ ಹೊರಹೊಮ್ಮಿತ್ತು. ಈ ಚಿತ್ರದ ಕ್ರೇಜ್ ಎಷ್ಟಿತ್ತೆಂದರೆ, 2024ರಲ್ಲಿ ಮರು ಬಿಡುಗಡೆಯಾದಾಗಲೂ ಸುಮಾರು 30 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಹೊಸ ದಾಖಲೆ ಬರೆಯಿತು. IMDb ನಲ್ಲಿ 8.2 ರೇಟಿಂಗ್ ಹೊಂದಿರುವ ಈ ಚಿತ್ರವೇ ಅವರಿಗೆ ‘ದಳಪತಿ’ ಎಂಬ ಬಿರುದು ಭದ್ರವಾಗುವಂತೆ ಮಾಡಿತು.
ಜನರ ಸೇವೆಗೆ (TVK Vijay) ಅಧಿಕಾರ ಮುಡಿಪು
ವಿಜಯ್ ನಟನೆಯ ‘ಲಿಯೋ’ ಚಿತ್ರ ಅತಿ ಹೆಚ್ಚು ಹಣ ಗಳಿಸಿದ್ದರೂ, ಜನರ ಮನಸ್ಸಿನಲ್ಲಿ ಉಳಿದಿದ್ದು ಮಾತ್ರ ‘ಗಿಲ್ಲಿ’. ಈಗ ಅಧಿಕಾರ ವಹಿಸಿಕೊಂಡಿರುವ ನಟ ವಿಜಯ್, “ಸಿನಿಮಾ ಮೂಲಕ ಅಭಿಮಾನಿಗಳು ತೋರಿದ ಪ್ರೀತಿಗೆ ಋಣಿಯಾಗಿದ್ದೇನೆ. ಇನ್ಮುಂದೆ ನನ್ನ ಪ್ರತಿ ಕ್ಷಣವೂ ಜನರ ಅಭಿವೃದ್ಧಿಗಾಗಿ ಮೀಸಲು” ಎಂದು ಭಾವುಕರಾಗಿ ನುಡಿದಿದ್ದಾರೆ.
ಸಿನೆಮಾ ತೆರೆಯ ಮೇಲಿನ ಸೂಪರ್ ಸ್ಟಾರ್ ಈಗ ನಿಜ ಜೀವನದ ‘ನಾಯಕ’ನಾಗಿ ತಮಿಳುನಾಡನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ಇದನ್ನೂ ಓದಿ: ಟಾಲಿವುಡ್‌ನಲ್ಲಿ ಶೋಕ ಸಾಗರ: ಭೀಕರ ಅಪಘಾತಕ್ಕೆ ಬಲಿಯಾದ ನಟ ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್!
