Belagavi: ಶಿವಂ ಅಸೋಸಿಯೇಟ್ಸ್ ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ಜಬರ್ದಸ್ತ್ ವಂಚನೆ
ಬೆಳಗಾವಿ: ಕೋಟ್ಯಾಂತರ ರೂಪಾಯಿಗಳ ‘ಶಿವಂ ಅಸೋಸಿಯೇಟ್ಸ್’ ಹಗರಣದ ಬಿಸಿ ಆರುವ ಮುನ್ನವೇ ಬೆಳಗಾವಿ (Belagavi) ಜಿಲ್ಲೆಯಲ್ಲಿ ಮತ್ತೊಂದು ಭಾರೀ ಪ್ರಮಾಣದ ಆನ್‌ಲೈನ್ ಹೂಡಿಕೆ ವಂಚನೆ ಜಾಲ ಪತ್ತೆಯಾಗಿದೆ. ನಗರದ ಭಾಗ್ಯ ನಗರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ‘ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಕಚೇರಿಯ ಮೇಲೆ ಸಹಾಯಕ ಕಮಿಷನರ್ (ಎಸಿ) ತಂಡವು ಹಠಾತ್ ದಾಳಿ ಸಂಘಟಿಸಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಕಂಪನಿಯ ವ್ಯವಸ್ಥಾಪಕರು ಅಧಿಕಾರಿಗಳ ಕೈಗೆ ಯಾವುದೇ ಡಿಜಿಟಲ್ ಸಾಕ್ಷ್ಯ ಸಿಗದಂತೆ ತಡೆಯಲು ಜಾಲತಾಣದ ಲಿಂಕ್‌ಗಳನ್ನು ಬ್ಲಾಕ್…
