TOP NEWS
Horrific Crime in Kittur Father Daughter Duo Killed over Land Dispute Three Relatives Arrested

Crime: ಸರ್ಕಾರಿ ಕಚೇರಿಯಲ್ಲೇ ಮಾರಣಾಂತಿಕ ದಾಳಿ: ಮಾಜಿ ಯೋಧ ರುದ್ರಪ್ಪ, ಪುತ್ರಿ ಶಶಿಕಲಾ ಸ್ಥಳದಲ್ಲೇ ಸಾವು!

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲೇ ನಡೆದ ಮಾಜಿ ಯೋಧ ಹಾಗೂ ಅವರ ಪುತ್ರಿಯ (Crime) ಭೀಕರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ದಾಯಾದಿಗಳೇ ಈ ಕೃತ್ಯ ಎಸಗಿದ್ದು, ಬಂಧಿತರನ್ನು ಕೊಲೆಯಾದ ರುದ್ರಪ್ಪ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪನ ಪುತ್ರ ಮಡಿವಾಳಪ್ಪ ಕುಂದರಗಿ ಎಂದು ಗುರುತಿಸಲಾಗಿದೆ. ಏನಿದು ಘಟನೆ? ಘಟನೆಯ…

Read More
Not Jail Planting 50 Trees is the Punishment Chikkodi Court Unique Verdict for Drunken Brawl

Chikkodi: ಕುಡಿದು ಗಲಾಟೆ ಮಾಡಿದವನಿಗೆ ಜೈಲಲ್ಲ, 50 ಗಿಡ ನೆಡುವ ಶಿಕ್ಷೆ!: ಚಿಕ್ಕೋಡಿ ಕೋರ್ಟ್‌ನ ಸೂಪರ್ ತೀರ್ಪು!

ಚಿಕ್ಕೋಡಿ: ಮದ್ಯ ಸೇವಿಸಿ ಗಲಾಟೆ ಮಾಡಿದ ಪ್ರಕರಣವೊಂದರಲ್ಲಿ ಅಪರಾಧಿಗೆ ವಿಶಿಷ್ಟ ಹಾಗೂ ಅರ್ಥಪೂರ್ಣ ಶಿಕ್ಷೆ ವಿಧಿಸುವ ಮೂಲಕ ಚಿಕ್ಕೋಡಿಯ ಜೆಎಂಎಫ್‌ಸಿ (JMFC) ನ್ಯಾಯಾಲಯ ಸಾರ್ವಜನಿಕರ (Chikkodi) ಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷೆಯ ಭಾಗವಾಗಿ ಅಪರಾಧಿಗೆ ದಂಡ ಅಥವಾ ಜೈಲು ಶಿಕ್ಷೆ ನೀಡುವ ಬದಲು, ಪರಿಸರ ಸಂರಕ್ಷಣೆಗೆ ನೆರವಾಗುವಂತೆ ಬರೋಬ್ಬರಿ 50 ಸಸಿಗಳನ್ನು ನೆಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. 50 ಗಿಡಗಳನ್ನು ನೆಡುವಂತೆ ಸೂಚನೆ ಯಕ್ಸಂಬಾ ಪಟ್ಟಣದ ನಿವಾಸಿ ಅನಿಲ ನಿಂಗಪ್ಪ ಪೂಜಾರಿ ಎಂಬಾತ ಮದ್ಯ ಸೇವಿಸಿ ಗಲಾಟೆ ಮಾಡಿದ ಆರೋಪ…

Read More
Kittur Jewelry Heist Solved 5 Interstate Gang Members Arrested With 7 kg Silver and i20 Car crime

Crime: ಕಿತ್ತೂರು ಜ್ಯುವೆಲ್ಲರಿ ಅಂಗಡಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; 5 ಅಂತರರಾಜ್ಯ ಖದೀಮರ ಬಂಧನ, ₹17 ಲಕ್ಷದ ಬೆಳ್ಳಿ ಜಪ್ತಿ!

ಬೆಳಗಾವಿ: ಕಿತ್ತೂರಿನ ಪ್ರಸಿದ್ಧ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣವನ್ನು ಅತ್ಯಂತ ಕ್ಷಿಪ್ರವಾಗಿ ಭೇದಿಸಿರುವ ಕಿತ್ತೂರು ಠಾಣೆ ಪೊಲೀಸರು, ಐವರು ಅಂತರರಾಜ್ಯ ಖದೀಮರ (Crime) ಜಾಲವನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿ ಬಂಧಿತ ಆರೋಪಿಗಳಲ್ಲಿ ನಾಲ್ವರು ರಾಜಸ್ಥಾನ ಮೂಲದವರಾಗಿದ್ದು, ಮತ್ತೊಬ್ಬ ಮಧ್ಯಪ್ರದೇಶ ಮೂಲದವನೆಂದು ಗುರುತಿಸಲಾಗಿದೆ. ಆಗಸ್ಟ್ 12ರ ತಡರಾತ್ರಿ ಕಿತ್ತೂರು ಪಟ್ಟಣದಲ್ಲಿರುವ ‘ಮಾನಜ್ಜ ಜ್ಯುವೆಲ್ಲರಿ’ ಅಂಗಡಿಯನ್ನು…

Read More
Maharashtra rain Dams Full Heavy Inflow Into Krishna River Sparks Flood Threat on Belagavi Border

Rain: ಮಹಾರಾಷ್ಟ್ರದ ಜಲಾಶಯಗಳು ಭರ್ತಿ: ಕೃಷ್ಣಾ ನದಿಗೆ ಹರಿದುಬಂತು ಭಾರಿ ನೀರು, ಬೆಳಗಾವಿ ಗಡಿಯಲ್ಲಿ ಪ್ರವಾಹದ ಭೀತಿ!

ಚಿಕ್ಕೋಡಿ (ಬೆಳಗಾವಿ): ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅಲ್ಲಿನ ಪ್ರಮುಖ ಜಲಾಶಯಗಳು ಸಂಪೂರ್ಣ (Rain) ಭರ್ತಿಯಾಗಿವೆ. ಕೊಯ್ನಾ ಮತ್ತು ರಾಧಾನಗರಿ ಡ್ಯಾಂಗಳಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ಇದರ ಪರಿಣಾಮವಾಗಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೃಷ್ಣಾ ಹಾಗೂ ದೂಧಗಂಗಾ ನದಿಗಳು ಭೋರ್ಗರೆದು ಹರಿಯುತ್ತಿವೆ. ಸದ್ಯ ನದಿಗಳ ನೀರಿನ ಮಟ್ಟ ಅಪಾಯದ ಗೆರೆಯನ್ನು ತಲುಪಿದ್ದು, ನದೀತೀರದ ಜನರಲ್ಲಿ ಆತಂಕ ಮನೆಮಾಡಿದೆ. ಲೋ ಲೆವೆಲ್ ಬ್ಯಾರೇಜ್‌ ಮುಳುಗಡೆಯಾಗುವ ಭೀತಿ ಮಹಾರಾಷ್ಟ್ರದ ಸಾತಾರ…

Read More
Mandya Congress rift wide open Ruckus erupts over district chief alleged pact with JDS

Congress: ಮಂಡ್ಯ ಕಾಂಗ್ರೆಸ್ ಕಚೇರಿಯಲ್ಲಿ ಭಾರಿ ಹೈಡ್ರಾಮಾ: ವೀಕ್ಷಕರ ಎದುರಲ್ಲೇ ಕಾರ್ಯಕರ್ತರ ಜಗಳ

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ (Congress) ಪಕ್ಷದ ‘ಸಂಘಟನಾ ಸೃಜನ ಅಭಿಯಾನ’ದ ವೇದಿಕೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಸಭೆಯುದ್ದಕ್ಕೂ ತೀವ್ರ ಗದ್ದಲ, ವಾಗ್ವಾದಗಳು ಏರ್ಪಟ್ಟಿದ್ದು, ಕೈ ನಾಯಕರ ವಿರುದ್ಧವೇ ಕಾರ್ಯಕರ್ತರು ಭಾರಿ ಆಕ್ರೋಶ ಹೊರಹಾಕಿದ ಘಟನೆ ಜುಲೈ 28 ರಂದು ನಡೆದಿದೆ. ತಾಲೂಕಿನಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಸರಿಯಾದ ನಾಯಕರೇ ಇಲ್ಲ ಎಂದು ಕಿಡಿಕಾರಿದ ಸ್ಥಳೀಯ ಕಾರ್ಯಕರ್ತರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಜೆಡಿಎಸ್ ನಾಯಕರೊಂದಿಗೆ ‘ಒಳ ಒಪ್ಪಂದ’ ಹಾಗೂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ…

Read More
Disaster may strike Karnataka after Belagavi RSS meet Congress leader BK Hariprasad explosive claim

BK Hariprasad: ಆರ್‌ಎಸ್‌ಎಸ್ ಸಭೆ ಬೆನ್ನಲ್ಲೇ ಅಹಿತಕರ ಘಟನೆ ಭೀತಿ: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ!

ಬೆಂಗಳೂರು: ಕುಂದಾನಗರಿ ಬೆಳಗಾವಿಯಲ್ಲಿ ಇಂದು (ಶುಕ್ರವಾರ) ಆರಂಭವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಮುಖ ವಾರ್ಷಿಕ ಸಭೆಯ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ತೀವ್ರ ಕಳವಳಕಾರಿ ಮತ್ತು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಗಡಿ ಜಿಲ್ಲೆಯಲ್ಲಿ ಸಂಘ ಪರಿವಾರ ಸಭೆ ನಡೆಸುತ್ತಿರುವುದರ ಹಿಂದೆ ಹತ್ತಾರು ಅನುಮಾನಗಳಿದ್ದು, ಈ ಸಭೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇತಿಹಾಸ ಕೆದಕಿ ಆರ್‌ಎಸ್‌ಎಸ್…

Read More
MES high drama in Belagavi district office

Belagavi: ಸರ್ಕಾರಿ ಆದೇಶದ ಪ್ರತಿ ಹರಿದು ಎಂಇಎಸ್ ಪುಂಡಾಟ; ಕರವೇ ಆಕ್ರೋಶ, ಸಂಘಟನೆ ನಿಷೇಧಕ್ಕೆ ಆಗ್ರಹ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಮಹಾರಾಷ್ಟ್ರ ಏಕೀಕರಣ ಸಮಿತಿಯ (MES) ಕಾರ್ಯಕರ್ತರು ಮತ್ತೊಮ್ಮೆ ತಮ್ಮ ಗೂಂಡಾಗಿರಿ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ರಾಜ್ಯಾದ್ಯಂತ ಕನ್ನಡವನ್ನು ಕಡ್ಡಾಯಗೊಳಿಸಿರುವ ಸರ್ಕಾರದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಂಇಎಸ್ ಕಾರ್ಯಕರ್ತರು, ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲೇ ಭಾರೀ ಗದ್ದಲ ಸೃಷ್ಟಿಸಿದ್ದಾರೆ. ಸ್ಥಳದಲ್ಲೇ ರಕ್ಷಣಾ ಸಿಬ್ಬಂದಿ ಇದ್ದರೂ ಲೆಕ್ಕಿಸದೆ, ಸರ್ಕಾರದ ಅಧಿಕೃತ ಸುತ್ತೋಲೆಯನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಅದರೊಂದಿಗೆ, ಗಡಿ ಪ್ರದೇಶಗಳಲ್ಲಿ ಮರಾಠಿ ಭಾಷೆಯಲ್ಲೇ ಸರ್ಕಾರಿ ದಾಖಲೆಗಳು ಹಾಗೂ ನಾಮಫಲಕಗಳನ್ನು ಅಳವಡಿಸಬೇಕು ಎಂದು ಪಟ್ಟು…

Read More