TOP NEWS

Toxic: ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಮುಂಜಾನೆ ಶೋಗಳ ಅಬ್ಬರ: ಯಶ್ ಚಿತ್ರದ ರಿಲೀಸ್ ಪ್ಲಾನ್ ಇಲ್ಲಿದೆ!

Yash Starrer Toxic to Release on August 26 with Record Breaking Screen Count

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿರುವ ‘ಟಾಕ್ಸಿಕ್’ (Toxic) ಸಿನಿಮಾ ಕರ್ನಾಟಕದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದ ಮೊದಲ ದಿನದ ಪ್ರದರ್ಶನಗಳ ಕುರಿತು ಚಿತ್ರ ನಿರ್ಮಾಣ ಸಂಸ್ಥೆಯು ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ರೋಮಾಂಚನವನ್ನು ಹೆಚ್ಚಿಸಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ದಿನ ದಾಖಲೆ ಸಂಖ್ಯೆಯ ಮುಂಜಾನೆಯ ಶೋಗಳನ್ನು (Early Morning Shows) ಆಯೋಜಿಸಲು ಚಿತ್ರತಂಡ ಬೃಹತ್ ಪ್ಲಾನ್ ಮಾಡಿಕೊಂಡಿದೆ.

ರಾಜ್ಯದ ಪ್ರತಿಯೊಂದು ಚಿತ್ರಮಂದಿರಗಳಲ್ಲೂ ಅತಿ ಹೆಚ್ಚು ಶೋಗಳು ಲಭ್ಯವಿರಲಿದ್ದು, ಆಗಸ್ಟ್ 26 ರಂದು ಬೆಳಗ್ಗೆಯಿಂದಲೇ ಸಾರ್ವಜನಿಕರು ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಹಾಲಿವುಡ್ ಮಟ್ಟದಲ್ಲಿ ತಯಾರಾದ ಬಹುಕೋಟಿ ವೆಚ್ಚದ ಸಿನಿಮಾ ‘ಟಾಕ್ಸಿಕ್’ ಸಿನಿಮಾ ಕೇವಲ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಸದ್ದು ಮಾಡಲು ರೆಡಿಯಾಗಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಇದರೊಂದಿಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಮಾಡಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಚಿತ್ರದ ಮೂಲಕ ಯಶ್ ಅವರು ವಿಶ್ವ ಸಿನಿಮಾರಂಗಕ್ಕೆ ಭರ್ಜರಿಯಾಗಿ ಕಾಲಿಡುತ್ತಿದ್ದಾರೆ.

ಚಿತ್ರದ ತಾರಾಗಣ ಮತ್ತು ತಾಂತ್ರಿಕ ತಂಡ ಪ್ರತಿಭಾವಂತ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಸ್ವತಃ ಯಶ್ ಅವರು ಗೀತು ಜೊತೆಗೂಡಿ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಸೇರಿದಂತೆ ಭಾರತೀಯ ಚಿತ್ರರಂಗದ ದಂಡೇ ನಟಿಸಿದೆ. ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಬಂಡವಾಳ ಹೂಡಿದ್ದು, ಕರ್ನಾಟಕದಲ್ಲಿ ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಇನ್ನುಳಿದಂತೆ ಚಿತ್ರಕ್ಕೆ ರವಿಬಸ್ರೂರು ಸಂಗೀತ ನೀಡಿದ್ದರೆ, ರಾಜೀವ್ ರವಿ ಅವರ ಛಾಯಾಗ್ರಹಣವಿದೆ.

ಆಗಸ್ಟ್ 8 ರಂದು ಬಹುನಿರೀಕ್ಷಿತ ಟ್ರೈಲರ್ ರಿಲೀಸ್ ಸಿನಿಮಾ ಆಗಸ್ಟ್ 26 ರಂದು ತೆರೆಕಾಣುತ್ತಿದ್ದು, ಅದಕ್ಕೂ ಮುನ್ನ ಚಿತ್ರದ ಭವ್ಯ ಟ್ರೈಲರ್ ಅನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿಯಾಗಿದೆ. ಆಗಸ್ಟ್ 8 ರಂದು ‘ಟಾಕ್ಸಿಕ್’ ಚಿತ್ರದ ಅಫೀಶಿಯಲ್ ಟ್ರೈಲರ್ ಲಾಂಚ್ ಆಗಲಿದ್ದು, ಇದರಲ್ಲಿ ಯಶ್ ಅವರ ಲುಕ್ ಮತ್ತು ಸಿನಿಮಾದ ಝಲಕ್ ಹೇಗಿರಲಿದೆ ಎಂಬುದನ್ನು ನೋಡಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್: ಯಶ್ ಹೊಸ ಪೋಸ್ಟರ್ ಕಂಡು ಫ್ಯಾನ್ಸ್ ಫಿದಾ!

Leave a Reply

Your email address will not be published. Required fields are marked *