Ramayana: ಗ್ಲೋಬಲ್ ಟಚ್, ಇಂಟರ್ನ್ಯಾಷನಲ್ ಲುಕ್: ವಿದೇಶಗಳಲ್ಲಿ ಹಾಡುಗಳಿಲ್ಲದೆ ತೆರೆಕಾಣಲಿದೆ ರಾಮಾಯಣ!
ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ‘ರಾಮಾಯಣ’ (Ramayana) ಸಿನಿಮಾ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಪ್ರಮಾಣದಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. ಆದರೆ, ಈ ಸಿನಿಮಾ ಎಲ್ಲ ದೇಶಗಳಲ್ಲೂ ಒಂದೇ ರೀತಿ ಪ್ರದರ್ಶನಗೊಳ್ಳುವುದಿಲ್ಲ ಎನ್ನುವ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ವಿದೇಶಿ ಪ್ರೇಕ್ಷಕರಿಗಾಗಿ ಸಿದ್ಧವಾಗುತ್ತಿರುವ ಈ ಸಿನಿಮಾದ ಇಂಗ್ಲಿಷ್ ಆವೃತ್ತಿಯು ಭಾರತೀಯ ಭಾಷೆಗಳಿಗಿಂತ ಸುಮಾರು 30 ನಿಮಿಷಗಳಷ್ಟು ಚಿಕ್ಕದಾಗಿರಲಿದೆ. ವೀಕ್ಷಣೆಯ ಶೈಲಿಗೆ ತಕ್ಕಂತೆ ಈ ಬದಲಾವಣೆ ವಿಶ್ವದಾದ್ಯಂತ ಇರುವ ಪ್ರೇಕ್ಷಕರ ಸಿನಿಮಾ ವೀಕ್ಷಣೆಯ…
