TOP NEWS

Renukaswamy Case: ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ನಟ ದರ್ಶನ್ ಗ್ಯಾಂಗ್‌ಗೆ ತಾತ್ಕಾಲಿಕ ರಿಲೀಫ್!

Renukaswamy Case Court Defers 14th Accuseds Approver Plea Giving Darshan and Co a Brief Breathing Space

ಬೆಂಗಳೂರು: ಚಿತ್ರರಂಗ ಹಾಗೂ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ತನಿಖೆ ಮಹತ್ವದ ಹಂತ ತಲುಪಿದ್ದು, ಈ ಕೇಸ್‌ನ 14ನೇ ಆರೋಪಿ ಮಾಫಿ ಸಾಕ್ಷಿಯಾಗಲು (Approver) ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಮುಂದುವರಿಯಿತು. ಸತತ 3ನೇ ದಿನವೂ ನ್ಯಾಯಾಲಯದಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ (VC) ಮೂಲಕವೇ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದರು. ಈ ವೇಳೆ ಸರ್ಕಾರದ ಪರ ವಕೀಲ ಸಚಿನ್, ದರ್ಶನ್ ಪರ ಹಿರಿಯ ನ್ಯಾಯವಾದಿ ಹಷ್ಮತ್ ಪಾಷಾ ಮತ್ತು ಪ್ರದೋಷ್ ಪರ ವಕೀಲ ದಿವಾಕರ್ ನಡುವೆ ತೀವ್ರ ವಾದ-ಪ್ರತಿವಾದಗಳು ನಡೆದವು.

ಒಂದು ವಾರ ಕಾಲಾವಕಾಶ ಕೇಳಿದ ದರ್ಶನ್‌ ಪರ ವಕೀಲರು

ಇಂದಿನ ನ್ಯಾಯಾಲಯದ ಕಲಾಪದಲ್ಲಿ ಪ್ರದೋಷ್ ಪರ ವಕೀಲ ದಿವಾಕರ್ ಅವರು, ಮೊದಲು ಪ್ರದೋಷ್ ಅವರ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಿಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ನಟ ದರ್ಶನ್ ಪರ ವಕೀಲರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಾದ ಮಂಡಿಸಲು ಕನಿಷ್ಠ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ದರ್ಶನ್ ಪರ ವಕೀಲರ ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಆಗಸ್ಟ್ 18ರವರೆಗೆ 14ನೇ ಆರೋಪಿಯ ಮಾಫಿ ಸಾಕ್ಷಿ ಹೇಳಿಕೆಯನ್ನು ದಾಖಲಿಸದಂತೆ ಆದೇಶಿಸಿದೆ. ಕೋರ್ಟ್‌ನ ಈ ತೀರ್ಪಿನಿಂದಾಗಿ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಸದ್ಯಕ್ಕೆ ಒಂದು ವಾರದ ಮಟ್ಟಿಗೆ ಸಣ್ಣ ನಿರಾಳತೆ ಸಿಕ್ಕಂತಾಗಿದ್ದು, ಇಡೀ ಪ್ರಕರಣದ ಮುಂದಿನ ಭವಿಷ್ಯ ಆ.18ರ ವಿಚಾರಣೆಯ ಮೇಲೆ ನಿಂತಿದೆ.

 ರೇಣುಕಾಸ್ವಾಮಿ ಕೊಲೆ ಕೇಸ್: ಪ್ರದೋಶ್ ಮಾಫಿ ಸಾಕ್ಷಿಯಾಗಲು ಕೋರ್ಟ್ ಅಸ್ತು; ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ತಿರುವು ಸಿಕ್ಕಿದೆ. ಪ್ರಕರಣದ 14ನೇ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು (Approver) ಸಲ್ಲಿಸಿದ್ದ ಅರ್ಜಿಯನ್ನು (Big News) ನ್ಯಾಯಾಲಯ ಪುರಸ್ಕರಿಸಿದ್ದು, ಇದರಿಂದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಭಾರಿ ಹಿನ್ನಡೆಯಾಗಿದೆ.

ಆರೋಪಿಗಳ ಆಕ್ಷೇಪಣೆ ಅರ್ಜಿ ಕೋರ್ಟ್ ವಜಾ!

ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ವಿರೋಧಿಸಿ ದರ್ಶನ್ ಹಾಗೂ ಇತರ ಸಹ ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಆಕ್ಷೇಪಣೆಯನ್ನು ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್ ಸಂಪೂರ್ಣವಾಗಿ ತಿರಸ್ಕರಿಸಿದೆ. ಕಾನೂನಿನ ಪ್ರಕಾರ ಮತ್ತೊಬ್ಬ ಆರೋಪಿ ಮಾಫಿ ಸಾಕ್ಷಿಯಾಗುವುದಕ್ಕೆ ಸಹ-ಆರೋಪಿಗಳು ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ವೇಳೆ ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು.

ಅರ್ಜಿಯಲ್ಲಿ ಕರಾಳ ಸತ್ಯ ಬಿಚ್ಚಿಟ್ಟ ಪ್ರದೋಶ್!

ಸಾಕ್ಷಿಯಾಗಲು ಕೋರ್ಟ್‌ಗೆ ನೀಡಿದ ಅರ್ಜಿಯಲ್ಲಿ ಪ್ರದೋಶ್, ಆ ದಿವಸ ನಡೆದ ಭೀಕರ ಕೃತ್ಯದ ಸಂಪೂರ್ಣ ವಿವರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ.

  • ಅಮಾನವೀಯ ಹಲ್ಲೆ: ರೇಣುಕಾಸ್ವಾಮಿಯ ಕೈ-ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಲಾಠಿ ಮತ್ತು ಪೈಪ್‌ಗಳಿಂದ ಬೆನ್ನು ಹಾಗೂ ತಲೆಗೆ ತೀವ್ರವಾಗಿ ಹೊಡೆಯಲಾಯಿತು. ಆತ ಯಾತನೆಯಿಂದ ಕುಡಿಯಲು ನೀರು ಕೇಳಿದರೂ ನೀಡದೆ ಅಮಾನವೀಯವಾಗಿ ಹಿಂಸಿಸಲಾಯಿತು.
  • ಸಿಗರೇಟ್‌ನಿಂದ ಸುಟ್ಟ ದರ್ಶನ್: ಹಲ್ಲೆ ನಡೆಸುವ ವೇಳೆ ನಟ ದರ್ಶನ್ ರೇಣುಕಾಸ್ವಾಮಿಯ ದೇಹದ ಸೂಕ್ಷ್ಮ ಭಾಗಗಳಿಗೆ ಉರಿಯುವ ಸಿಗರೇಟ್‌ನಿಂದ ಸುಟ್ಟು ತೀವ್ರ ಯಾತನೆ ನೀಡಿದರು ಎಂದು ಪ್ರದೋಶ್ ಉಲ್ಲೇಖಿಸಿದ್ದಾನೆ.
  • ದರ್ಶನ್ ಆತ್ಮಹತ್ಯೆ ಬೆದರಿಕೆ: ತಾನು ಹಲ್ಲೆಯನ್ನು ತಡೆಯಲು ಯತ್ನಿಸಿದರೂ ಗ್ಯಾಂಗ್ ತನ್ನ ಮಾತು ಕೇಳಲಿಲ್ಲ. ರೇಣುಕಾಸ್ವಾಮಿ ಅಸುನೀಡಿದ ಬಳಿಕ, ನಟ ದರ್ಶನ್ “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಬೆದರಿಸಿ, ಕೊಲೆಯ ನಿಂದನೆಯನ್ನು ತನ್ನ ಮೇಲೆ ಎಳೆದುಕೊಳ್ಳುವಂತೆ ಸೂಚಿಸಿದ್ದರು ಎಂದು ಪ್ರದೋಶ್ ಅರ್ಜಿಯಲ್ಲಿ ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.

ಪ್ರದೋಶ್ ನೀಡುತ್ತಿರುವ ಈ ಮಹತ್ವದ ಸಾಕ್ಷ್ಯವು ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ನಟ ದರ್ಶನ್ ಸೇರಿದಂತೆ ಇಡೀ ಗ್ಯಾಂಗ್‌ಗೆ ಕಾನೂನಾತ್ಮಕವಾಗಿ ದೊಡ್ಡ ಕಂಠಕವಾಗಿ ಪರಿಣಮಿಸಿದೆ.

ಇದನ್ನೂ ಓದಿ:  ಹಿಮಾಚಲ ಪ್ರದೇಶದಲ್ಲಿ ರಸ್ತೆ ಅಪಘಾತ: ಖಾಸಗಿ ಬಸ್ ಉರುಳಿ ಬಿದ್ದು 8 ಮಂದಿ ದುರ್ಮರಣ, 10 ಜನರಿಗೆ ಗಂಭೀರ ಗಾಯ!

Leave a Reply

Your email address will not be published. Required fields are marked *