TOP NEWS
Fresh Disaster Strikes Tibet Strong 5.0 Earthquake Jolt Borders Days After Deadly Floods Region

Tibet: ಹಿಮಾಲಯನ್ ವಲಯದಲ್ಲಿ ಮುಂದುವರಿದ ಪ್ರಕೃತಿಯ ವಿಕೋಪ: ಭೀಕರ ಪ್ರವಾಹದ ಬೆನ್ನಲ್ಲೇ ಟಿಬೆಟ್‌ನಲ್ಲಿ ನಡುಗಿದ ಭೂಮಿ

ಟಿಬೆಟ್‌: ಇತ್ತೀಚೆಗಷ್ಟೇ ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹ ಹಾಗೂ ಜಲಪ್ರಳಯಕ್ಕೆ ನೂರಾರು ಜೀವಗಳು ಬಲಿಯಾದ ಬೆನ್ನಲ್ಲೇ, ಹಿಮಾಲಯನ್ ಪ್ರದೇಶವಾದ ಟಿಬೆಟ್‌ನಲ್ಲಿ (Tibet) ಗುರುವಾರ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಪ್ರಬಲ ಭೂಕಂಪನ ದಾಖಲಾಗಿದ್ದು, ನೇಪಾಳದ ಗಡಿಗೆ ತೀರಾ ಹತ್ತಿರದಲ್ಲಿರುವ ಪಟ್ಟಣವೊಂದರಲ್ಲಿ ಇದರ ಕೇಂದ್ರಬಿಂದು ಪತ್ತೆಯಾಗಿದೆ. ಸುಮಾರು 14 ಕಿಲೋಮೀಟರ್ ಆಳದಲ್ಲಿ ಕಂಪಿಸಿದ ಭೂಮಿ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS) ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಸ್ಥಳೀಯ ಸಮಯ ಮಧ್ಯಾಹ್ನ ಸುಮಾರು 1.46…

Read More
NICE Project Controversy Major Relief for Landowners as Cabinet Sub Committee Approves 15 Sites per Acre

Nice Project: ನೈಸ್ ರಸ್ತೆ ಸಂತ್ರಸ್ತರಿಗೆ ಬಿಗ್ ರಿಲೀಫ್: ಭೂಮಿ ಕಳೆದುಕೊಂಡ ರೈತರಿಗೆ ಎಕರೆಗೆ 15 ಸೈಟ್ ನೀಡಲು ನಿರ್ಧಾರ!

ಬೆಂಗಳೂರು: ಕಳೆದ ಕಾಲು ಶತಮಾನದಿಂದ ಪರಿಹಾರ ಸಿಗದೆ ಕಂಗಾಲಾಗಿದ್ದ ನೈಸ್ ರಸ್ತೆ (Nice Project) ಯೋಜನೆಯ ಸಂತ್ರಸ್ತ ರೈತರಿಗೆ ಕೊನೆಗೂ ದೊಡ್ಡ ನೆಮ್ಮದಿ ಸಿಗುವ ಲಕ್ಷಣಗಳು ಕಂಡುಬಂದಿವೆ. ಪರಿಹಾರ ಕಂಡುಕೊಳ್ಳಲಾಗದೆ ಸಂಕಷ್ಟದಲ್ಲಿದ್ದ ರೈತರಿಗೆ ಭೂಮಿಯ ಬದಲಾಗಿ ಪ್ರತಿ ಎಕರೆಗೆ ಗರಿಷ್ಠ 15 ನಿವೇಶನಗಳನ್ನು (ಸೈಟ್‌ಗಳು) ಪರಿಹಾರ ರೂಪದಲ್ಲಿ ನೀಡಲು ರಾಜ್ಯ ಸರ್ಕಾರದ ಸಂಪುಟ ಉಪಸಮಿತಿ ತೀರ್ಮಾನಿಸಿದೆ. ರೈತರ ಹಿತರಕ್ಷಣೆಗಾಗಿ ಕ್ರಮ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಂಪುಟ ಉಪಸಮಿತಿಯ ಮಹತ್ವದ ಸಭೆಯಲ್ಲಿ…

Read More
Tragedy in Hassan Bank Cash Van Crashes with KSRTC Bus Near Maranahalli One Killed Four Hospitalized

Road Mishap: ಎಟಿಎಂ ಕ್ಯಾಶ್ ವಾಹನ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ರಸ್ತೆ ಅಪಘಾತ, ನಾಲ್ವರಿಗೆ ಗಂಭೀರ ಗಾಯ

ಹಾಸನ: ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Road Mishap) ಬೊಲೆರೋ ಪಿಕಪ್‌ನಲ್ಲಿದ್ದ ದಿನೇಶ್ (38) ಎಂಬುವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವಾಹನದಲ್ಲಿದ್ದ ಸುಬ್ರಮಣ್ಯ, ವೆಂಕಟರಮಣ, ಜಿತೇಂದ್ರ ಮತ್ತು ದುರ್ಗಾಪ್ರಸಾದ್ ಎಂಬ ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಘಟನೆಯ ವಿವರ: ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರಿನಿಂದ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಎಟಿಎಂಗಳಿಗೆ ಹಣ ತಲುಪಿಸಲು…

Read More
KPC Officials Target Poor Farmer Areca Garden Fencing Removed Without Any Prior Notice in sagara

‌Sagara: ಬಡ ರೈತನ ಅಡಿಕೆ ತೋಟಕ್ಕೆ ಕನ್ನ ಹಾಕಿದ ಕೆಪಿಸಿ ಅಧಿಕಾರಿಗಳು!: ಪೂರ್ವಭಾವಿ ನೋಟಿಸ್ ನೀಡದೆ ಬೇಲಿ ತೆರವು

ಸಾಗರ: ಅಧಿಕಾರ ಹಾಗೂ ರಾಜಕೀಯ ಬಲವಿದ್ದವರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ ಎಂಬಂತೆ ಕರ್ನಾಟಕ ಪವರ್ ಕಾರ್ಪೊರೇಷನ್ (KPCL) ಅಧಿಕಾರಿಗಳು ಏಕಪಕ್ಷೀಯವಾಗಿ (Sagara) ನಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯಾವುದೇ ಪೂರ್ವಭಾವಿ ನೋಟಿಸ್ ಅಥವಾ ಮುನ್ಸೂಚನೆ ನೀಡದೆ, ಬಡ ರೈತನೊಬ್ಬನ ಅಡಿಕೆ ತೋಟದ ಬೇಲಿಯನ್ನು ಕೆಪಿಸಿ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ್ದು, ಸಂತ್ರಸ್ತ ರೈತ ಕುಟುಂಬ ಕಣ್ಣೀರಿಡುವಂತಾಗಿದೆ. 80 ವರ್ಷಗಳಿಂದ ಅದೇ ಜಾಗದಲ್ಲಿ ಇರುವ ಕುಟುಂಬ ಸಂತ್ರಸ್ತ ರೈತ ಗೋವರ್ಧನ ಅರಬಳ್ಳಿ ಅವರು ನೀಡಿರುವ ಮಾಹಿತಿಯ…

Read More
Bigg Boss Kannada 13 Hits Legal Roadblock Eco Rules Violation Could Cancel the Show

Bigg Boss: ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನವೇ ಬಿಗ್ ಶಾಕ್!: ಪ್ರಸಾರ ಬಂದ್ ಮಾಡಿಸ್ತಾರಾ ಸಚಿವ ರಾಮಲಿಂಗಾರೆಡ್ಡಿ?

ಬೆಂಗಳೂರು: ಬಹುನಿರೀಕ್ಷಿತ ‘ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 13’ ರಿಯಾಲಿಟಿ ಶೋ ಶುರುವಾಗುವುದಕ್ಕೂ ಮುನ್ನವೇ ದೊಡ್ಡದೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಬಿಗ್ ಬಾಸ್ ಶೋ ನಡೆಸಲು ಅರಣ್ಯ ಇಲಾಖೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಲೇಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟವಾಗಿ ತಿಳಿಸಿದ್ದಾರೆ. ನಿಯಮಗಳನ್ನು ಸರಿಯಾಗಿ ಪಾಲಿಸದೆ ಹೋದರೆ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಡಚಣೆ ಉಂಟುಮಾಡುವ ದುರುದ್ದೇಶವಿಲ್ಲ ಈ ಕುರಿತು ಮಾಧ್ಯಮಗಳೊಂದಿಗೆ…

Read More
Horrific Road mishap in Gadag Tipper Truck Mows Down Bike Two Dead on the Spot

Road Mishap: ಲಾರಿ-ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರು ಸವಾರರ ದುರ್ಮ*ರಣ!

ಗದಗ: ಮಣ್ಣು ತುಂಬಿಕೊಂಡು ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಇಟಗಿ (Road Mishap) ಕ್ರಾಸ್ ಸಮೀಪ ಮಂಗಳವಾರ ನಡೆದಿದೆ. ಏನಿದು ಪ್ರಕರಣ? ರೋಣ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿಗಳಾದ ಶರಣಪ್ಪ ಜಾಲಿಹಾಳ (65) ಹಾಗೂ ಸುರೇಶ ತಳವಾರ (59) ಮೃತಪಟ್ಟ ದುರ್ದೈವಿಗಳು. ಇಬ್ಬರೂ ಇಟಗಿಯಿಂದ ತಮ್ಮ ಸ್ವಗ್ರಾಮ ಹೊಸಳ್ಳಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ರೋಣ ಭಾಗದಿಂದ…

Read More
Bollywood Trouble in Paradise Singer Badshah and Isha Rikhi Call It Quits 5 Months After Wedding

Bollywood: ಮದುವೆಯಾದ 5 ತಿಂಗಳಿಗೇ ಶಾಕ್ ಕೊಟ್ಟ ಕಪಲ್!: ಡಿವೋರ್ಸ್ ವದಂತಿಗೆ ಅಧಿಕೃತ ಮುದ್ರೆ ಒತ್ತಿದ ಬಾದ್‌ಶಾ-ಈಶಾ ರಿಖಿ

ಮುಂಬೈ: ಪ್ರಸಿದ್ಧ ರಾಪರ್ ಹಾಗೂ ಗಾಯಕ ಬಾದ್‌ಶಾ ಮತ್ತು ಪಂಜಾಬಿ ನಟಿ ಈಶಾ ರಿಖಿ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಇವರ ವಿಚ್ಛೇದನದ ವದಂತಿಗಳಿಗೆ ಸ್ವತಃ ದಂಪತಿಯೇ ತೆರೆ ಎಳೆದಿದ್ದು, ಮದುವೆಯಾದ ಕೇವಲ 5 ತಿಂಗಳಲ್ಲೇ ಪರಸ್ಪರ (Bollywood) ಸಮ್ಮತಿಯಿಂದ ಬೇರೆಯಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಆಗಸ್ಟ್ 31ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಜಂಟಿ ಹೇಳಿಕೆ ಹಂಚಿಕೊಳ್ಳುವ ಮೂಲಕ ಈ ಇಬ್ಬರೂ ತಾವೀಗ ಪ್ರತ್ಯೇಕ ಹಾದಿ ತುಳಿದಿರುವುದನ್ನು ಬಹಿರಂಗಪಡಿಸಿದ್ದಾರೆ. ಪರಸ್ಪರ ಗೌರವದಿಂದಲೇ…

Read More