Bigg Boss: ಬಿಗ್ ಬಾಸ್ ದೊಡ್ಮನೆಗೆ ಕಾಲಿಡಲಿದ್ದಾರಾ ಈ ತಾರೆಯರು? ಕಲರ್ಸ್ ಕನ್ನಡ ಪ್ರೋಮೋದಿಂದ ಹೆಚ್ಚಿದ ಕುತೂಹಲ
ಬೆಂಗಳೂರು: ಕಿರುತೆರೆ ವೀಕ್ಷಕರು ಅತ್ಯಂತ ಕಾತುರದಿಂದ ಕಾಯುತ್ತಿರುವ ಬ್ರಹತ್ ರಿಯಾಲಿಟಿ ಶೋ ‘ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 13’ರ ಶುಭಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 6 ರಂದು ಪ್ರೇಕ್ಷಕರ ನೆಚ್ಚಿನ ಈ ರಿಯಾಲಿಟಿ ಶೋದ ಅದ್ಧೂರಿ ಪ್ರೀಮಿಯರ್ ಸಂಚಿಕೆ ಪ್ರಸಾರವಾಗಲಿದ್ದು, ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಗೆ ಕಾಲಿಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮುಗಿಲು ಮುಟ್ಟಿದೆ. ಒಂದೆಡೆ ‘ಅಗ್ನಿಪರೀಕ್ಷೆ’ ಮೂಲಕ ಜನಸಾಮಾನ್ಯರಿಗೆ ಅವಕಾಶ ಸಿಗುತ್ತಿದ್ದರೆ, ಇನ್ನೊಂದೆಡೆ ಬಣ್ಣದ ಲೋಕದ ಪ್ರಸಿದ್ಧ ತಾರೆಯರು ಸೆಲೆಬ್ರಿಟಿ ಸ್ಪರ್ಧಿಗಳಾಗಿ…
