Namma Metro: ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿ: ‘ಆರೆಂಜ್ ಲೈನ್’ ಮೆಟ್ರೋ ಕಂ ಡಬಲ್ ಡೆಕ್ಕರ್ ಫ್ಲೈ ಓವರ್ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ!
ಬೆಂಗಳೂರು: ರಾಜಧಾನಿಯ ಹೊರವರ್ತುಲ ರಸ್ತೆ (ORR) ಭಾಗದ ನಿವಾಸಿಗಳು ಹಾಗೂ ವಾಹನ ಸವಾರರ ಬಹುದಿನಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ನಡೆಸಿದ ದೆಹಲಿ ಪ್ರವಾಸ ಯಶಸ್ವಿಯಾಗಿದ್ದು, ನಮ್ಮ ಮೆಟ್ರೋದ (Namma Metro) 3ನೇ ಹಂತದ ‘ಆರೆಂಜ್ ಲೈನ್’ ಮಾರ್ಗದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಹಳಿಗೆ ಬರಲುವ ಮುನ್ಸೂಚನೆ ಸಿಕ್ಕಿದೆ. ಕಳೆದ ವರ್ಷದ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಲೈನ್…
