government warns private schools regarding extra high fee

Private School: ನಿಯಮ ಮೀರಿ ಡೊನೇಷನ್ ಪೀಕುವ ಖಾಸಗಿ ಶಾಲೆಗಳಿಗೆ ಡಿಡಿಪಿಐ ವಾರ್ನಿಂಗ್

ಶಿವಮೊಗ್ಗ: ನಿಯಮಬಾಹಿರವಾಗಿ ಪೋಷಕರಿಂದ ಭಾರಿ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಮತ್ತು ಅನುದಾನರಹಿತ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯು (Private School) ಬೀಗ ಜಡಿಯುವ ಎಚ್ಚರಿಕೆ ನೀಡಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಸಾರಿಗೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆದ ತಾಲೂಕಿನ ಎಲ್ಲಾ ಅನ್‌ಎಡೆಡ್ ಶಾಲೆಗಳ ಮುಖ್ಯಸ್ಥರ ಮಹತ್ವದ ಸಭೆಯಲ್ಲಿ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಮನಬಂದಂತೆ ವರ್ತಿಸುವ ನೀತಿಗೆ ಕಡಕ್ ಬ್ರೇಕ್ ಹಾಕಿದ್ದಾರೆ. ಜನರಿಂದ ದೂರುಗಳ ಮಹಾಪೂರ ಖಾಸಗಿ ಶಾಲೆಗಳು ವಿಧಿಸುತ್ತಿರುವ…

Read More
big announcement from government no hike in MBBS fee

MBBS: ಮೆಡಿಕಲ್ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಈ ಬಾರಿ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳವಿಲ್ಲ!; ಯಥಾಸ್ಥಿತಿ ಮುಂದುವರಿಕೆ

ಬೆಂಗಳೂರು: ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ (MBBS), ದಂತ ವೈದ್ಯಕೀಯ (BDS) ಮತ್ತು ಸ್ನಾತಕೋತ್ತರ (PG) ಕೋರ್ಸ್‌ಗಳ ದಾಖಲಾತಿ ಫೀಸ್ ಹೆಚ್ಚಳ ಮಾಡದಿರಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಹೆಚ್ಚುವರಿ ಶುಲ್ಕ ಭರಿಸುವ ಆತಂಕದಲ್ಲಿದ್ದ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ. ಖಾಸಗಿ ಒಕ್ಕೂಟಗಳ ಬೇಡಿಕೆಗೆ ಮಣಿಯದ ಸರ್ಕಾರ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ….

Read More
kalaburgi bcm girls hostel partied whole night with boys

Kalaburgi: ಕಲಬುರಗಿ ಗರ್ಲ್ಸ್ ಹಾಸ್ಟೆಲ್‌ನಲ್ಲಿ ಮಧ್ಯರಾತ್ರಿ ಮದ್ಯದ ಪಾರ್ಟಿ: ಹುಡುಗರ ಅಕ್ರಮ ಪ್ರವೇಶ

ಕಲಬುರಗಿ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ಸರ್ಕಾರಿ ಮಹಿಳಾ ವಸತಿ ನಿಲಯವೊಂದರಲ್ಲಿ ನಡೆದಿರುವ ಅನಿಷ್ಟ ಕೃತ್ಯವೊಂದು (Kalaburgi) ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಬಿ ಸಿ ಎಂ ಗರ್ಲ್ಸ್ ಹಾಸ್ಟೆಲ್‌ನ ರೂಮ್ ಒಂದರಲ್ಲಿ ವಿದ್ಯಾರ್ಥಿನಿಯರು ಅತ್ಯಂತ ಬಿಂದಾಸ್ ಆಗಿ ಮದ್ಯ ಹಾಗೂ ಬೀಯರ್ ಬಾಟಲಿಗಳನ್ನು ಹಿಡಿದು ಕುಡಿಯುತ್ತಿರುವ ಆಘಾತಕಾರಿ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಆತಂಕ ಮೂಡಿಸಿದೆ. ರಾತ್ರಿಯಿಡೀ ಗರ್ಲ್ಸ್ ಹಾಸ್ಟೆಲ್ ನಲ್ಲಿ ಯುವಕರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ…

Read More
gali janardhan reddy wife puts mehendi of Narendra modi face in her hand

Janardhan Reddy: ಮೋದಿ ಇತಿಹಾಸಕ್ಕೆ ಜನಾರ್ದನ ರೆಡ್ಡಿ ಪತ್ನಿ ಸಾಟಿಯಿಲ್ಲದ ಗೌರವ: ಜನ್ಮದಿನದಂದೇ ಹಸ್ತದ ತುಂಬಾ ಪ್ರಧಾನಿ ಚಿತ್ರದ ಮದರಂಗಿ ಸಂಭ್ರಮ!

ಬಳ್ಳಾರಿ: ದೇಶದ ರಾಜಕೀಯ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ದಿನ ಪ್ರಧಾನ ಮಂತ್ರಿಯಾಗಿ ದೇಶ ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ ಅವರ ಅಭೂತಪೂರ್ವ ಮೈಲಿಗಲ್ಲನ್ನು ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಅವರ ಕುಟುಂಬವು ವಿಶೇಷ ರೀತಿಯಲ್ಲಿ ಆಚರಿಸಿದೆ. ಜನಾರ್ದನ ರೆಡ್ಡಿ ಅವರ ಧರ್ಮಪತ್ನಿ ಲಕ್ಷ್ಮಿ ಅರುಣಾ ಅವರು ತಮ್ಮ ಹುಟ್ಟುಹಬ್ಬದ ಸಡಗರದ ನಡುವೆಯೇ, ಪ್ರಧಾನಿ ಮೋದಿಯವರ ಈ ಐತಿಹಾಸಿಕ ದಾಖಲೆಯನ್ನು ಸ್ಮರಿಸುವ ಸಲುವಾಗಿ ಕೈಗಳ ಮೇಲೆ ಮೋದಿಯವರ ಮುಖದ ಮೆಹಂದಿ…

Read More
siddaramaiah slams bjp and election commission rajya sabha election

Siddaramaiah: ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: “ದೇಶದ ಪ್ರಜಾಪ್ರಭುತ್ವದ ಆಶಯಗಳನ್ನು ಹೊಸಕಿ ಹಾಕಿ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ ನರೇಂದ್ರ ಮೋದಿ ಅವರ ಆಡಳಿತವನ್ನು ಬಿಜೆಪಿ ಸಂಭ್ರಮಿಸುತ್ತಿರುವುದು ದೇಶದ ವ್ಯವಸ್ಥೆಗೆ ಮಾಡಿದ ದೊಡ್ಡ ಅವಮಾನ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ (CWC) ಸದಸ್ಯ ಸಿದ್ದರಾಮಯ್ಯ (Siddaramaiah) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಖಂಡಿಸಿ ಅವರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಪತ್ರಿಕಾ…

Read More
Bitcoin scam Mohammed Nalapad name in SIT chargesheet

Bitcoin Scam: ಬಾಲ್ಯದ ಸ್ನೇಹ ತಂದಿಟ್ಟ ಬಿಟ್‌ಕಾಯಿನ್ ಗಂಡಾಂತರ: ನಲಪಾಡ್ ವಿರುದ್ಧ ಎಸ್‌ಐಟಿ ದೋಷಾರೋಪ ಪಟ್ಟಿ

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಹುಕೋಟಿ ಬಿಟ್‌ಕಾಯಿನ್ (Bitcoin Scam) ಹಗರಣದಲ್ಲಿ ಕಾಂಗ್ರೆಸ್‌ನ ಪ್ರಮುಖ ಯುವ ನಾಯಕ ಮೊಹಮ್ಮದ್ ನಲಪಾಡ್ ಅವರ ಸುತ್ತ ಕಾನೂನಿನ ಬೇಲಿ ಮತ್ತಷ್ಟು ಬಿಗಿಗೊಂಡಿದೆ. ತುಮಕೂರಿನ ಖಾಸಗಿ ಟ್ರೇಡಿಂಗ್ ಕಂಪನಿಯಿಂದ ಡಿಜಿಟಲ್ ಕರೆನ್ಸಿ ಕಳವು ಮಾಡಿದ ಪ್ರಕರಣದ ತನಿಖೆ ಮುಗಿಸಿರುವ ವಿಶೇಷ ತನಿಖಾ ದಳ (SIT), ನ್ಯಾಯಾಲಯಕ್ಕೆ ಅಧಿಕೃತ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ದೋಷಾರೋಪ ಪಟ್ಟಿಯಲ್ಲಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಆತನ ಆಪ್ತ ರಾಬಿನ್…

Read More
lokayukta raid on 24 gram panchayat offices in dharwad

Lokayukta: ಧಾರವಾಡ ಜಿಲ್ಲೆಯ 24 ಗ್ರಾಮ ಪಂಚಾಯಿತಿಗಳ ಮೇಲೆ ಲೋಕಾಯುಕ್ತ ಹಠಾತ್ ದಾಳಿ

ಧಾರವಾಡ: ಗ್ರಾಮೀಣ ಭಾಗದ ಪಂಚಾಯಿತಿ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಸಾಲು ಸಾಲು ಹಗರಣಗಳು ಹಾಗೂ ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದ ಅಧಿಕಾರಿಗಳ ಕಳ್ಳಾಟಕ್ಕೆ ಲೋಕಾಯುಕ್ತ (Lokayukta) ಪೊಲೀಸರು ಬ್ರೇಕ್ ಹಾಕಿದ್ದಾರೆ. ಜಿಲ್ಲೆಯ ಒಟ್ಟು 24 ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ಮೇಲೆ ಲೋಕಾಯುಕ್ತದ ಪ್ರತ್ಯೇಕ ತಂಡಗಳು ಏಕಕಾಲದಲ್ಲಿ ಸುಂಟರಗಾಳಿಯಂತೆ ಮುಗಿಬಿದ್ದಿದ್ದು, ನಕಲಿ ದಾಖಲೆ ಸೃಷ್ಟಿಸಿ ಹಣ ಎಗರಿಸುತ್ತಿದ್ದ ಸಿಬ್ಬಂದಿ ವರ್ಗ ದಿಕ್ಕೆಟ್ಟು ಕೂರುವಂತೆ ಮಾಡಿದೆ. ಹಠಾತ್ತಾಗಿ ನಡೆದ ಈ ಆಪರೇಷನ್‌ನಿಂದಾಗಿ ಇಡೀ ಧಾರವಾಡ ಜಿಲ್ಲೆಯ ಭ್ರಷ್ಟ ಆಡಳಿತ ಯಂತ್ರ ನಡುಗಿಹೋಗಿದೆ….

Read More