TOP NEWS

sandhya m

ಶಿವಮೊಗ್ಗದ ಸಾಗರದವರಾದ ಸಂಧ್ಯಾ.ಎಂ ಪತ್ರಿಕೋದ್ಯಮದಲ್ಲಿ 5 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಆಂಗ್ಲ ಸಾಹಿತ್ಯ ವಿಷಯದಲ್ಲಿ ಪದವಿ ಹಾಗೂ ಮೈಸೂರಿನ ಅಮೃತಾ ಸ್ಕೂಲ್‌ ಆಫ್ ಆರ್ಟ್ಸ್‌ನಲ್ಲಿ ಫಿಲ್ಮ್‌ ಮೇಕಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯೂಸ್‌18 ಕನ್ನಡ ವೆಬ್‌ಸೈಟ್‌ನಲ್ಲಿ ಹಿರಿಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಈಗ ನವಸಮಾಜ.ಕಾಂನಲ್ಲಿ ಕಂಟೆಂಟ್‌ ಪ್ರೊಡ್ಯೂಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಚಲಿತ ರಾಜಕೀಯ ಸುದ್ದಿ, ಸಿನಿಮಾ ಹಾಗೂ ಪ್ರವಾಸ ಸಂಬಂಧಿತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಪತ್ತೆದಾರಿ ಕಾದಂಬರಿ ಓದುವುದು ಇವರ ನೆಚ್ಚಿನ ಹವ್ಯಾಸವಾಗಿದ್ದು,ರವಿ ಬೆಳಗೆರೆ ಬರಹ ಇವರಿಗೆ ಅಚ್ಚುಮೆಚ್ಚು.

Karnataka 12 MLA meets randeep surjewala regarding cabinet expansion

Cabinet: ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ಮಾಡಿದ 12 ಶಾಸಕರು

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ (Cabinet) ಪುನಾರಚನೆಯ ಚರ್ಚೆಗಳು ಮತ್ತೊಮ್ಮೆ ತೀವ್ರಗೊಂಡಿವೆ. ತಮಗೂ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಹಿರಿಯ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ನಿವಾಸಕ್ಕೆ ಭೇಟಿ ನೀಡಿದ ಶಾಸಕರ ತಂಡ, ಸಂಪುಟದಲ್ಲಿ ಬದಲಾವಣೆ ತರುವಂತೆ ಅಧಿಕೃತವಾಗಿ ಮನವಿ ಸಲ್ಲಿಸಿದೆ. ದೆಹಲಿಯಲ್ಲಿ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾದ ಟಿ.ಬಿ. ಜಯಚಂದ್ರ, ಅಶೋಕ್ ಪಟ್ಟಣ್, ರಾಘವೇಂದ್ರ ಹಿಟ್ನಾಳ್…

Read More
Vinod Kambli Has Brain Clot friend revealed shocking truth

Vinod Kambli: ವಿನೋದ್ ಕಾಂಬ್ಳೆಗೆ ಕಾಡುತ್ತಿದೆಯಂತೆ ಈ ರೋಗ

ಮುಂಬೈ: ಭಾರತೀಯ ಕ್ರಿಕೆಟ್‌ನ ಹಿರಿಯ ಆಟಗಾರ ವಿನೋದ್ ಕಾಂಬ್ಳೆ (Vinod Kambli) ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸದ್ಯ ಅವರು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ (Brain Clot) ಸಮಸ್ಯೆಯಿಂದ ಬಳಲುತ್ತಿದ್ದು, ಮುಂದಿನ ದಿನಗಳಲ್ಲಿ ಪಾರ್ಶ್ವವಾಯು (Brain Stroke) ಸಂಭವಿಸುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಆತಂಕಕಾರಿ ವಿಷಯವನ್ನು ಅವರ ಆಪ್ತ ಗೆಳೆಯ ಮಾರ್ಕಸ್ ಕೌಟೊ ಬಹಿರಂಗಪಡಿಸಿದ್ದಾರೆ. ಮರೆಯಾಗುತ್ತಿದೆ ನೆನಪಿನ ಶಕ್ತಿ: ಕಳೆದ ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಕಾಂಬ್ಳೆ ಅವರಿಗೆ ನೆನಪಿನ ಶಕ್ತಿ ಕುಂದುತ್ತಿದ್ದು, ದೇಹದ…

Read More
China is not suppling weapon to iran says Donald trump

Donald Trump: ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿಲ್ಲ ಎಂದು ಟ್ರಂಪ್‌ಗೆ ಭರವಸೆ ನೀಡಿದ ಚೀನಾ

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆಯೇ ಜಾಗತಿಕ ಮಟ್ಟದ ಅತಿದೊಡ್ಡ ಬೆಳವಣಿಗೆಯೊಂದು ನಡೆದಿದೆ. ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರು ಇರಾನ್‌ಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿಲ್ಲ ಎಂದು ತಮಗೆ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. “ಚೀನಾ ಮತ್ತು ಇಡೀ ಜಗತ್ತಿಗಾಗಿ ನಾನು ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದ್ದೇನೆ, ಇದಕ್ಕಾಗಿ ಜಿನ್‌ಪಿಂಗ್ ನನ್ನನ್ನು ಭೇಟಿಯಾದಾಗ ಪ್ರೀತಿಯಿಂದ ಅಪ್ಪಿಕೊಳ್ಳಲಿದ್ದಾರೆ” ಎಂದು ಟ್ರಂಪ್ (Donald Trump) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪತ್ರ ವ್ಯವಹಾರದ ಮೂಲಕ ಸಂಧಾನ:…

Read More
Commander In Grief Iran Cheeky Job application to Italy

IRAN: ಇಟಲಿಗೆ ‘ಬೆಸ್ಟ್ ಫ್ರೆಂಡ್’ ಆಗಲು ಇರಾನ್ ಆಫರ್

ನವದೆಹಲಿ: ಅಂತರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಈಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವಾಕ್ಸಮರ ಸಂಚಲನ ಸೃಷ್ಟಿಸಿದೆ. ಪೋಪ್ ಲಿಯೋ XIV ಅವರ ಶಾಂತಿ ಮಂತ್ರವನ್ನು ಬೆಂಬಲಿಸಿದ್ದಕ್ಕಾಗಿ ಮೆಲೋನಿ ವಿರುದ್ಧ ಟ್ರಂಪ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ಉಭಯ ನಾಯಕರ ಸ್ನೇಹದಲ್ಲಿ ಬಿರುಕು ಮೂಡಿದ್ದು, ಇದೇ ಸಮಯ ಕಾದು ಕುಳಿತಿದ್ದ ಇರಾನ್ (Iran), ಇಟಲಿಗೆ ಫ್ರೆಂಡ್‌ಶಿಪ್ ಆಫರ್ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ವಾಷಿಂಗ್ಟನ್ ಸ್ಥಾನಕ್ಕೆ ಇರಾನ್…

Read More
These leaders should leave their constancy after reservation bill

Reservation Bill: ಮಹಿಳೆಯರಿಗೆ ಕ್ಷೇತ್ರ ಬಿಟ್ಟು ಕೊಡಬೇಕಾಗುತ್ತಂತೆ ಈ ನಾಯಕರು, ಯಾಕೆ?

ನವದೆಹಲಿ: ಲೋಕಸಭೆಯಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ (Reservation Bill) ತಕ್ಷಣವೇ ಜಾರಿಯಾಗಿ, ಅತಿ ಹೆಚ್ಚು ಮಹಿಳಾ ಮತದಾರರಿರುವ ಕ್ಷೇತ್ರಗಳನ್ನು ಮಹಿಳೆಯರಿಗೇ ಮೀಸಲಿಡುವ ‘ರೊಟೇಶನ್ ಫಾರ್ಮುಲಾ’ ಅನ್ವಯಿಸಿದರೆ ಏನಾಗಬಹುದು? ಈ ಪ್ರಶ್ನೆಗೆ ಈಗ ಕುತೂಹಲಕಾರಿ ಉತ್ತರ ಸಿಕ್ಕಿದೆ. ಈ ನಿಯಮ ಜಾರಿಯಾದಲ್ಲಿ ದೇಶದ ಹಲವು ಪ್ರಭಾವಿ ರಾಜಕಾರಣಿಗಳು ತಮ್ಮ ಹಾಲಿ ಕ್ಷೇತ್ರಗಳನ್ನು ಕಳೆದುಕೊಂಡು, ಹೊಸ ಕ್ಷೇತ್ರಗಳ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಬದಲಾಗಲಿದೆ ಲೋಕಸಭೆಯ ಚಿತ್ರಣ: 2024ರ ಚುನಾವಣಾ ಆಯೋಗದ ದತ್ತಾಂಶಗಳ ಆಧಾರದ ಮೇಲೆ ನಡೆಸಲಾದ…

Read More
INDIA Bloc opposing women reservation bill

INDIA Bloc: ಮಹಿಳಾ ಮೀಸಲಾತಿ ಮಸೂದೆಗೆ ಇಂಡಿ ಒಕ್ಕೂಟ ವಿರೋಧ

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯ ಜಾರಿ ಪ್ರಕ್ರಿಯೆಯನ್ನು ವಿರೋಧಿಸಲು ಪ್ರತಿಪಕ್ಷಗಳ ‘ಇಂಡಿಯಾ’ (INDIA Bloc) ಒಕ್ಕೂಟ ನಿರ್ಧರಿಸಿದೆ. ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮಹಿಳೆಯರಿಗೆ ಮೀಸಲಾತಿ ನೀಡುವ ನೀತಿಯನ್ನು ನಾವು ಬೆಂಬಲಿಸುತ್ತೇವೆ, ಆದರೆ ಸರ್ಕಾರ ಇದನ್ನು ಜಾರಿಗೆ ತರುತ್ತಿರುವ ರೀತಿ ಸರಿಯಿಲ್ಲ ಎಂದು ಒಕ್ಕೂಟದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪ್ರೇರಿತ ಅಜೆಂಡಾ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಪ್ರತಿಪಕ್ಷಗಳ ಪ್ರಮುಖ…

Read More
iran Supertanker Crosses Hormuz Strait

Iran: ಅಮೆರಿಕ ದಿಗ್ಬಂಧನ ನಡುವೆಯೂ ಹೊರ್ಮುಜ್ ಜಲಸಂಧಿ ದಾಟಿದ ಇರಾನ್‌ ನೌಕೆ

ತೆಹ್ರಾನ್: ಅಮೆರಿಕ ವಿಧಿಸಿರುವ ಕಠಿಣ ಸೇನಾ ದಿಗ್ಬಂಧನವನ್ನು ಲೆಕ್ಕಿಸದ ಇರಾನ್‌ನ (Iran) ಬೃಹತ್ ತೈಲ ನೌಕೆಯೊಂದು ಹೊರ್ಮುಜ್ ಜಲಸಂಧಿಯ ಮೂಲಕ ಯಶಸ್ವಿಯಾಗಿ ಸಂಚರಿಸಿದೆ. ಸುಮಾರು 20 ಲಕ್ಷ ಬ್ಯಾರೆಲ್ ತೈಲ ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ನೌಕೆಯು, ತನ್ನ ಲೊಕೇಶನ್ ಸಿಗ್ನಲ್‌ಗಳನ್ನು ಆನ್ ಮಾಡಿಕೊಂಡೇ ಬಹಿರಂಗವಾಗಿ ಅಮೆರಿಕದ ಎಚ್ಚರಿಕೆಯನ್ನು ಮೀರಿ ಸಾಗಿದೆ. ಇರಾನ್‌ನ ಈ ನಡೆ ವಾಷಿಂಗ್ಟನ್ ಮತ್ತು ತೆಹ್ರಾನ್ ನಡುವಿನ ಸಂಘರ್ಷವನ್ನು ಮತ್ತಷ್ಟು ಸ್ಫೋಟಕ ಹಂತಕ್ಕೆ ತಲುಪಿಸಿದೆ. ಬೆದರಿಕೆಗೆ ಮಣಿಯದ ಇರಾನ್; 6 ನೌಕೆಗಳು ವಾಪಸ್: ವಿಶ್ವದ…

Read More