TOP NEWS

sandhya m

ಶಿವಮೊಗ್ಗದ ಸಾಗರದವರಾದ ಸಂಧ್ಯಾ.ಎಂ ಪತ್ರಿಕೋದ್ಯಮದಲ್ಲಿ 5 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಆಂಗ್ಲ ಸಾಹಿತ್ಯ ವಿಷಯದಲ್ಲಿ ಪದವಿ ಹಾಗೂ ಮೈಸೂರಿನ ಅಮೃತಾ ಸ್ಕೂಲ್‌ ಆಫ್ ಆರ್ಟ್ಸ್‌ನಲ್ಲಿ ಫಿಲ್ಮ್‌ ಮೇಕಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯೂಸ್‌18 ಕನ್ನಡ ವೆಬ್‌ಸೈಟ್‌ನಲ್ಲಿ ಹಿರಿಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಈಗ ನವಸಮಾಜ.ಕಾಂನಲ್ಲಿ ಕಂಟೆಂಟ್‌ ಪ್ರೊಡ್ಯೂಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಚಲಿತ ರಾಜಕೀಯ ಸುದ್ದಿ, ಸಿನಿಮಾ ಹಾಗೂ ಪ್ರವಾಸ ಸಂಬಂಧಿತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಪತ್ತೆದಾರಿ ಕಾದಂಬರಿ ಓದುವುದು ಇವರ ನೆಚ್ಚಿನ ಹವ್ಯಾಸವಾಗಿದ್ದು,ರವಿ ಬೆಳಗೆರೆ ಬರಹ ಇವರಿಗೆ ಅಚ್ಚುಮೆಚ್ಚು.

china becomes indias biggest trade partner

CHINA: ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾದ ಚೀನಾ

ನವದೆಹಲಿ: ಕಳೆದ ನಾಲ್ಕು ವರ್ಷಗಳಿಂದ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದ ಅಮೆರಿಕವನ್ನು ಹಿಂದಿಕ್ಕಿ ಚೀನಾ (China) ಮತ್ತೆ ಮೊದಲ ಸ್ಥಾನಕ್ಕೇರಿದೆ. ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾ ನಡುವಿನ ಒಟ್ಟು ದ್ವಿಪಕ್ಷೀಯ ವ್ಯಾಪಾರವು ಬರೋಬ್ಬರಿ 151.1 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ಮೂಲಕ 2021-22ರಿಂದ ಸತತವಾಗಿ ಅಗ್ರಸ್ಥಾನದಲ್ಲಿದ್ದ ಅಮೆರಿಕವನ್ನು ಚೀನಾ ಎರಡನೇ ಸ್ಥಾನಕ್ಕೆ ತಳ್ಳಿದ್ದು, ಜಾಗತಿಕ ವ್ಯಾಪಾರ ಸಮೀಕರಣದಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೇಗಿದೆ ರಫ್ತು-ಆಮದು ಅಂಕಿಅಂಶ? ಕಳೆದ ಹಣಕಾಸು…

Read More
Israeli forces strike Hezbollah positions

Israel: ಹಿಜ್ಬುಲ್ಲಾ ಉಗ್ರರ ಮೇಲೆ ಮತ್ತೆ ಇಸ್ರೇಲ್‌ ದಾಳಿ

ಬೈರುತ್: ದಕ್ಷಿಣ ಲೆಬನಾನ್‌ನ ಆಯಕಟ್ಟಿನ ಪ್ರದೇಶವಾದ ಬಿಂಟ್ ಜಬೀಲ್ ನಗರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ (Israel) ಸೇನೆ ತನ್ನ ಭೀಕರ ದಾಳಿಯನ್ನು ಮುಂದುವರಿಸಿದೆ. ಹಿಜ್ಬುಲ್ಲಾ ಉಗ್ರರ ವಿರುದ್ಧ ಸಮರ ಸಾರಿರುವ ಇಸ್ರೇಲ್ ಕಮಾಂಡೋಗಳು, ಸರಣಿ ದಾಳಿಗಳ ಮೂಲಕ ಸಂಘಟನೆಯ ಹತ್ತಾರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಮತ್ತು ಅವರ ಪ್ರಮುಖ ನೆಲೆಗಳನ್ನು ನಾಶಪಡಿಸಿರುವುದಾಗಿ ಘೋಷಿಸಿವೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ತೀವ್ರ ರಕ್ತಪಾತ ಮುಂದುವರಿದಿದ್ದು, ಇಡೀ ಪ್ರದೇಶವು ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ. ಇಸ್ರೇಲ್‌ ಹೇಳಿದ್ದೇನು? ಇಸ್ರೇಲ್ ಪ್ರಧಾನಿ ಬೆಂಜಮಿನ್…

Read More
Why opposition are against delimitation Mallikarjun Kharge taunts center

Mallikarjun Kharge: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ, ಸಂಸತ್ತು ಹೈಜಾಕ್‌ ಮಾಡೋಕೆ ಬಿಡಲ್ಲ

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಸೇರಿದಂತೆ ಮೂರು ಪ್ರಮುಖ ವಿಧೇಯಕಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೆಂಡಕಾರಿದ್ದಾರೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ನೆಪದಲ್ಲಿ ಕೇಂದ್ರ ಸರ್ಕಾರವು ದೋಷಪೂರಿತ ಕ್ಷೇತ್ರ ಪುನರ್ ವಿಂಗಡಣೆ ವಿಧೇಯಕವನ್ನು ಕಳ್ಳತನದಿಂದ ಜಾರಿಗೆ ತರಲು ಸಂಚು ರೂಪಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಮಹಿಳಾ ಮೀಸಲಾತಿಯ ಮುಖವಾಡ ಧರಿಸಿ ಸಂವಿಧಾನ ಮತ್ತು ಸಂಸತ್ತನ್ನು…

Read More
Tejasvi Surya taunts opposition regarding delimitation

Tejasvi Surya: ಸಂಸತ್ತಿನಲ್ಲಿ ತೇಜಸ್ವಿ ಸೂರ್ಯ ಭರ್ಜರಿ ಬ್ಯಾಟಿಂಗ್: ವಿರೋಧ ಪಕ್ಷಗಳದ್ದು ಮೊಸಳೆ ಕಣ್ಣೀರು ಎಂದು ವಾಗ್ದಾಳಿ

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ನಡೆದ ಕ್ಷೇತ್ರ ಪುನರ್ ವಿಂಗಡಣೆ (ಡೆಲಿಮಿಟೇಶನ್) ಕುರಿತಾದ ಚರ್ಚೆಯಲ್ಲಿ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ(Tejasvi Surya) ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ವಾದವನ್ನ ಲೇವಡಿ ಮಾಡಿದ ಸೂರ್ಯ ವಿರೋಧ ಪಕ್ಷಗಳ ತರ್ಕವನ್ನು ಕಟುವಾಗಿ ಪ್ರಶ್ನಿಸಿದ ಅವರು, ಸಂವಿಧಾನಬದ್ಧವಾಗಿ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವುದರ ಹಿಂದೆ ಯಾವುದೇ ಸಕಾರಣವಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್‌ನ ವಾದವನ್ನು ಲೇವಡಿ ಮಾಡಿದ ಸೂರ್ಯ, ಅವರ ತರ್ಕದ ಪ್ರಕಾರ ಹೋದರೆ ಮುಖೇಶ್ ಅಂಬಾನಿಯಂತಹ ಶ್ರೀಮಂತರಿಗೆ ಲಕ್ಷಾಂತರ ಮತಗಳು…

Read More
Narendra modi talks in parliament regarding women reservation

Narendra Modi: ಮೀಸಲಾತಿ ವಿರೋಧಿಸುವವರನ್ನ ದೇಶದ ಮಹಿಳೆಯರು ಕ್ಷಮಿಸಲ್ಲ: ನರೇಂದ್ರ ಮೋದಿ

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ವಿಧೇಯಕದ ಪರವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಈ ಐತಿಹಾಸಿಕ ನಡೆಯನ್ನು ವಿರೋಧಿಸುವವರನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. “ಈ ವಿಧೇಯಕವು ‘ವಿಕಸಿತ ಭಾರತ’ ನಿರ್ಮಾಣದ ಪಯಣದಲ್ಲಿ ಒಂದು ಹೊಸ ಅಧ್ಯಾಯ ಬರೆಯಲಿದೆ. ಈ ಮೂಲಕ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರವು ನಿಜವಾಗಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 30 ವರ್ಷಗಳ ಹಿಂದೆಯೇ ಆಗಬೇಕಿತ್ತು: “ಭಾರತವು ಪ್ರಜಾಪ್ರಭುತ್ವದ…

Read More
cyber fraud delhi police arrested accused

Cyber Fraud: ಮದುವೆ ಹೆಸರಲ್ಲಿ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚನೆ, ಆರೋಪಿ ಅಂದರ್

ನವದೆಹಲಿ: ದೇಶಾದ್ಯಂತ ಡೇಟಿಂಗ್ ಆ್ಯಪ್‌ಗಳ ಮೂಲಕ ಮಹಿಳೆಯರನ್ನು ನಂಬಿಸಿ, ಭಾವನಾತ್ಮಕವಾಗಿ ವಂಚಿಸುತ್ತಿದ್ದ 35 ವರ್ಷದ ಕಿಲಾಡಿ ಆನಂದ್ ಕುಮಾರ್ ಎಂಬಾತನನ್ನು ದೆಹಲಿ (Cyber Fraud) ಪೊಲೀಸರು ಬಂಧಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಮದುವೆಯ ಸುಳ್ಳು ಭರವಸೆ ನೀಡಿ 2 ಕೋಟಿ ರೂಪಾಯಿಗೂ ಅಧಿಕ ಹಣ ಪೀಕಿದ್ದ ಈತನ ಬಣ್ಣದ ಬದುಕು ಈಗ ಜೈಲು ಪಾಲಾಗಿದೆ. ಹತ್ತಾರು ಮುಖವಾಡ, ನೂರಾರು ವಂಚನೆ: ಆರೋಪಿ ಆನಂದ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹತ್ತಾರು ನಕಲಿ ಪ್ರೊಫೈಲ್‌ಗಳನ್ನು ಹೊಂದಿದ್ದ. ತಾನು ದೊಡ್ಡ…

Read More
Breaking Terrorist Amir Hamza shot in Lahore

BREAKING: ಮೋಸ್ಟ್ ವಾಂಟೆಡ್ ಉಗ್ರ ಅಮೀರ್ ಹಮ್ಜಾ ಮೇಲೆ ಭೀಕರ ಗುಂಡಿನ ದಾಳಿ

ಲಾಹೋರ್: ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ, ಲಷ್ಕರ್-ಎ-ತೈಬಾ (LeT) ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಸದಸ್ಯ ಅಮೀರ್ ಹಮ್ಜಾ ಮೇಲೆ ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು (Breaking) ಗುಂಡಿನ ದಾಳಿ ನಡೆಸಿದ್ದಾರೆ. ಲಾಹೋರ್‌ನ ಹಮ್ದರ್ದ್ ಚೌಕ್ ಬಳಿಯ ಸುದ್ದಿ ವಾಹಿನಿಯೊಂದರ ಕಚೇರಿಯ ಹೊರಗೆ ಈ ಘಟನೆ ನಡೆದಿದ್ದು, ಸದ್ಯ ಹಮ್ಜಾನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ದಾಳಿ ನಡೆಸಿದ್ದ ಉಗ್ರ ಲಷ್ಕರ್ ಸಂಘಟನೆಯ ಮತ್ತೊಬ್ಬ ಕುಖ್ಯಾತ ಉಗ್ರ ಹಫೀಜ್ ಸಯೀದ್…

Read More