Viral Video: ಸ್ಟಾರ್‌ಬಕ್ಸ್ ಕಂಪನಿ ಡ್ರಿಂಕ್ ಕ್ಯಾನ್ ಒಳಗೆ ಸತ್ತ ಇಲಿ ಪತ್ತೆ, ಅನುಮಾನ ಸೃಷ್ಟಿ ಮಾಡಿದ ವಿಡಿಯೋ
ಬೆಂಗಳೂರು: ಸ್ಟಾರ್‌ಬಕ್ಸ್ ಕಂಪನಿಯ ‘ಡಬಲ್ ಶಾಟ್ ಎನರ್ಜಿ ಡ್ರಿಂಕ್’ ಕ್ಯಾನ್ ಒಳಗೆ ಸತ್ತ ಇಲಿ ಪತ್ತೆಯಾಗಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Viral Video) ಕಿಚ್ಚು ಹಚ್ಚಿದೆ. ರೆಡಿಟ್‌ನಲ್ಲಿ ಮೊದಲು ಕಾಣಿಸಿಕೊಂಡ ಈ ದೃಶ್ಯಗಳು ಈಗ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪ್ಯಾಕ್ ಮಾಡಲಾದ ಪಾನೀಯಗಳ ಸುರಕ್ಷತೆಯ ಬಗ್ಗೆ ಪೋಷಕರು ಮತ್ತು ಗ್ರಾಹಕರಲ್ಲಿ ಭೀತಿ ಮೂಡಿಸಿದೆ. ವಿಡಿಯೋದಲ್ಲೇನಿದೆ? ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ತಾವು ಹಿಡಿದಿರುವ ಕಾಫಿ ಕ್ಯಾನ್ ಒಳಗೆ ಏನೋ ಭಾರವಾದ ವಸ್ತು ಇರುವ…
