ಮಂಡ್ಯ: ರಾಜ್ಯ ರಾಜಕಾರಣದ ಇಬ್ಬರು ಧ್ರುವಗಳಂತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಆಪ್ತ ಸಮಾಲೋಚನೆಯ ಫೋಟೋವೊಂದು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆದ ‘ಶ್ರೀಗುರು ಭೈರವೈಕ್ಯ ಮಂದಿರ’ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಈ ಅಪರೂಪದ ದೃಶ್ಯ ಕಂಡುಬಂದಿದೆ.
ಕುತೂಹಲ ಮೂಡಿಸಿದ ಮೋದಿ ಮಾತು: ಕಾರ್ಯಕ್ರಮಕ್ಕಾಗಿ ಆಗಮಿಸಿದ ಪ್ರಧಾನಿ ಮೋದಿಯವರನ್ನು ಬರಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಪ್ರಧಾನಿಗಳು ಸಿಎಂ ಅವರ ಕಿವಿಗೆ ಬಾಗಿ ಅತ್ಯಂತ ರಹಸ್ಯವಾಗಿ ಏನೋ ಹೇಳುತ್ತಿರುವುದು ಮತ್ತು ಅದನ್ನು ಸಿದ್ದರಾಮಯ್ಯ ಅವರು ಅಷ್ಟೇ ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಿರುವ ಫೋಟೋ ಈಗ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಸಿಎಂ ಅವರೇ ಈ ಫೋಟೋವನ್ನು ತಮ್ಮ ‘X’ ಖಾತೆಯಲ್ಲಿ ಹಂಚಿಕೊಂಡಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಆದಿಚುಂಚನಗಿರಿ ಮಠದ ಕಾರ್ಯಕ್ರಮದ ನಿಮಿತ್ತ ಇಂದು ಬೆಂಗಳೂರಿಗೆ ಬಂದಿಳಿದ ಪ್ರಧಾನಮಂತ್ರಿ ಶ್ರೀ @narendramodi ಅವರನ್ನು ನಾಡಿಗೆ ಬರಮಾಡಿಕೊಂಡು, ಶುಭ ಕೋರಿದೆ.
— Siddaramaiah (@siddaramaiah) April 15, 2026
ಸಚಿವರಾದ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರು ಈ ವೇಳೆ ಹಾಜರಿದ್ದರು.
Welcomed Hon’ble Prime Minister Shri Narendra Modi to… pic.twitter.com/a2f54FGCIJ
ಚರ್ಚೆಯಲ್ಲಿರುವ ಆ ಗುಟ್ಟು ಏನು? ರಾಜಕೀಯವಾಗಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಉಭಯ ನಾಯಕರು ತೋರಿದ ಈ ಸೌಹಾರ್ದಯುತ ನಡವಳಿಕೆ ಜನಮನ ಸೆಳೆದಿದೆ. “ಪ್ರಧಾನಿಗಳು ಮುಖ್ಯಮಂತ್ರಿಗಳಿಗೆ ಅಂತಹದ್ದೇನು ರಹಸ್ಯ ಹೇಳಿರಬಹುದು?” ಎಂಬ ಬಗ್ಗೆ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಮಾತುಕತೆಯೋ ಅಥವಾ ಮುಂದಿನ ರಾಜಕೀಯ ತಂತ್ರಗಾರಿಕೆಯೋ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿವೆ. ಏನೇ ಇರಲಿ, ಆದಿಚುಂಚನಗಿರಿಯ ಈ ‘ಗುಸುಗುಸು’ ಸದ್ಯಕ್ಕೆ ಕರ್ನಾಟಕದ ಹಾಟ್ ಟಾಪಿಕ್ ಆಗಿರುವುದಂತೂ ನಿಜ.
ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಹೆಚ್ಚಾದ ಆಂತರಿಕ ಬಂಡಾಯ, ಸವಾಲು ಹಾಕಿದ ಅಬ್ದುಲ್ ಜಬ್ಬಾರ್
