Viral Video: ಸ್ಟಾರ್‌ಬಕ್ಸ್ ಕಂಪನಿ ಡ್ರಿಂಕ್‌ ಕ್ಯಾನ್‌ ಒಳಗೆ ಸತ್ತ ಇಲಿ ಪತ್ತೆ, ಅನುಮಾನ ಸೃಷ್ಟಿ ಮಾಡಿದ ವಿಡಿಯೋ

Viral video woman find dead mouse in drink bottle

ಬೆಂಗಳೂರು: ಸ್ಟಾರ್‌ಬಕ್ಸ್ ಕಂಪನಿಯ ‘ಡಬಲ್ ಶಾಟ್ ಎನರ್ಜಿ ಡ್ರಿಂಕ್’ ಕ್ಯಾನ್ ಒಳಗೆ ಸತ್ತ ಇಲಿ ಪತ್ತೆಯಾಗಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Viral Video) ಕಿಚ್ಚು ಹಚ್ಚಿದೆ. ರೆಡಿಟ್‌ನಲ್ಲಿ ಮೊದಲು ಕಾಣಿಸಿಕೊಂಡ ಈ ದೃಶ್ಯಗಳು ಈಗ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪ್ಯಾಕ್ ಮಾಡಲಾದ ಪಾನೀಯಗಳ ಸುರಕ್ಷತೆಯ ಬಗ್ಗೆ ಪೋಷಕರು ಮತ್ತು ಗ್ರಾಹಕರಲ್ಲಿ ಭೀತಿ ಮೂಡಿಸಿದೆ.

ವಿಡಿಯೋದಲ್ಲೇನಿದೆ? ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ತಾವು ಹಿಡಿದಿರುವ ಕಾಫಿ ಕ್ಯಾನ್ ಒಳಗೆ ಏನೋ ಭಾರವಾದ ವಸ್ತು ಇರುವ ಸಂಶಯ ವ್ಯಕ್ತಪಡಿಸುತ್ತಾರೆ. ಕೂಡಲೇ ಅಲ್ಯೂಮಿನಿಯಂ ಕ್ಯಾನ್ ಅನ್ನು ಕತ್ತರಿಸಿದಾಗ, ಅದರೊಳಗಿಂದ ಕಾಫಿಯ ದ್ರವದ ಜೊತೆಗೆ ಕಪ್ಪಗಿನ ಸಣ್ಣ ಇಲಿಯಂತಹ ಪ್ರಾಣಿ ಹೊರಬರುತ್ತದೆ. ಇದನ್ನು ಕಂಡು ಅಲ್ಲಿದ್ದವರು ಅಸಹ್ಯದಿಂದ ಕಿರುಚುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡಿದ ಸಾವಿರಾರು ಮಂದಿ ನೆಟ್ಟಿಗರು, “ಇನ್ನು ಮುಂದೆ ಕ್ಯಾನ್ ಜ್ಯೂಸ್ ಅಥವಾ ಕಾಫಿ ಕುಡಿಯುವ ಮೊದಲು ನೂರು ಬಾರಿ ಯೋಚಿಸಬೇಕು” ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದು ಸತ್ಯವೋ ಅಥವಾ ಸುಳ್ಳೋ? ಈ ವಿಡಿಯೋ ಎಷ್ಟು ವೈರಲ್ ಆಗಿದೆಯೋ, ಅಷ್ಟೇ ಅನುಮಾನಗಳನ್ನೂ ಹುಟ್ಟುಹಾಕಿದೆ. ಹಲವು ವಾರಗಳ ಕಾಲ ಸೀಲ್ ಮಾಡಲಾದ ಕ್ಯಾನ್ ಒಳಗೆ ಇಲಿ ಇದ್ದಿದ್ದರೆ ಅದು ಕೊಳೆಯಬೇಕಿತ್ತು, ಆದರೆ ಇಲ್ಲಿ ಅದು ಅಚ್ಚುಕಟ್ಟಾಗಿ ಕಾಣಿಸುತ್ತಿದೆ ಎಂಬುದು ಸಾರ್ವಜನಿಕರ ವಾದ. ಕಂಪನಿಗೆ ಕೆಟ್ಟ ಹೆಸರು ತರಲು ಅಥವಾ ವೈರಲ್ ಆಗುವ ಉದ್ದೇಶದಿಂದ ಕ್ಯಾನ್ ಅನ್ನು ತಾವೇ ಕತ್ತರಿಸಿ ಇಲಿಯನ್ನು ಒಳಗೆ ಹಾಕಿರಬಹುದು ಎಂದು ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಯಂತ್ರಗಳ ಮೂಲಕವೇ ಪ್ಯಾಕಿಂಗ್ ನಡೆಯುವುದರಿಂದ ಇಂತಹ ಪ್ರಮಾದಗಳು ನಡೆಯುವುದು ತೀರಾ ವಿರಳ. ಸದ್ಯ ಈ ಬಗ್ಗೆ ಮಹಿಳೆ ಕಾನೂನು ಹೋರಾಟ ನಡೆಸುವುದಾಗಿ ಹೇಳುತ್ತಿದ್ದರೂ, ಕಂಪನಿಯಿಂದಾಗಲಿ ಅಥವಾ ಆಹಾರ ಸುರಕ್ಷತಾ ಇಲಾಖೆಯಿಂದಾಗಲಿ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ‘ಫುಡ್ ಸೇಫ್ಟಿ’ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನಂತೂ ಹುಟ್ಟುಹಾಕಿದೆ.

ಇದನ್ನೂ ಓದಿ: ಕಂಪನಿಯಲ್ಲಿ ಮತಾಂತರ ಪ್ರಯತ್ನ, 9 ಎಫ್‌ಐಆರ್‌ ದಾಖಲು

Leave a Reply

Your email address will not be published. Required fields are marked *