Apollo: ವಿಶ್ವ ಆರೋಗ್ಯ ದಿನ ಹಿನ್ನಲೆ, ಯಶಸ್ವಿಯಾಗಿ ನಡೆದ

Apollo Mysuru climbathan for world health day

ಮೈಸೂರು: ವಿಶ್ವ ಆರೋಗ್ಯ ದಿನದ ಅಂಗವಾಗಿ ಅಪೋಲೊ ಆಸ್ಪತ್ರೆಯು ಚಾಮುಂಡಿ ಬೆಟ್ಟದಲ್ಲಿ “ಹಂತ ಹಂತವಾಗಿ – 1001 ಹಂತಗಳು” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ‘ಅಪೋಲೊ ಕ್ಲೈಂಬಥಾನ್ 4.0’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. (Apollo) ಎಲ್ಲಾ ವಯೋಮಾನದ ಫಿಟ್ನೆಸ್ ಆಸಕ್ತರು ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮವು ಬೆಳಗ್ಗೆ 6:15ಕ್ಕೆ ಗಣ್ಯರ ಆಗಮನದಿಂದೊಂದಿಗೆ ಪ್ರಾರಂಭಯಿತು. ಬಳಿಕ ಜುಂಬಾ ವಾರ್ಮ್-ಅಪ್ ಕಾರ್ಯಕ್ರಮ ನಡೆಯಿತು. ನಂತರ 6:30ಕ್ಕೆ ಕ್ಲೈಂಬಥಾನ್ಗೆ ಅಧಿಕೃತ ಚಾಲನೆ ನೀಡಲಾಯಿತು. 1001 ಮೆಟ್ಟಿಲುಗಳನ್ನು ದೃಢಸಂಕಲ್ಪದೊಂದಿಗೆ ಏರಿ, ಅಂತಿಮ ಗುರಿ ತಲುಪಿದವರಿಗೆ ಪದಕಗಳನ್ನು ವಿತರಿಸಲಾಯಿತು. ಬೆಟ್ಟ ಏರಿದ ನಂತರ ಬೆಳಿಗ್ಗೆ 7:30ಕ್ಕೆ ಆರ್ಜೆ ಮತ್ತು ಜುಂಬಾ ತಂಡದವರಿಂದ ಆಕರ್ಷಕ ಕಾರ್ಯಕ್ರಮಗಳು ನಡೆದವು. ನಂತರ ಗಣ್ಯರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಂ. ಯೋಗೇಂದ್ರ ಅವರು ಮಾತನಾಡಿ, ದೈನಂದಿನ ಜೀವನದಲ್ಲಿ ಶಿಸ್ತು ಮತ್ತು ದೈಹಿಕ ಕ್ಷಮತೆಯ ಮಹತ್ವವನ್ನು ಒತ್ತಿಹೇಳಿದರು. “ಶಿಸ್ತು ಮತ್ತು ನಿರಂತರ ವ್ಯಾಯಾಮ ಆರೋಗ್ಯಕರ ಜೀವನಕ್ಕೆ ಅಡಿಪಾಯ. ಕ್ಲೈಂಬಥಾನ್ನಂತಹ ಕಾರ್ಯಕ್ರಮಗಳು ಎಲ್ಲರನ್ನೂ ಫಿಟ್ನೆಸ್ ಕಡೆಗೆ ಪ್ರೇರೇಪಿಸುತ್ತವೆʼʼ ಎಂದರು.


ಇನ್ಫೋಸಿಸ್ನ ಮಾನವ ಸಂಪನ್ಮೂಲ ಮುಖ್ಯ ಅಧಿಕಾರಿ (CHRO), ಮುಖ್ಯ ಅತಿಥಿಯೂ ಅದ ಶಾಜಿ ಮ್ಯಾಥ್ಯೂ ಮಾತನಾಡಿ, “ಇಂದಿನ ಒತ್ತಡದ ಕೆಲಸದ ವಾತಾವರಣದಲ್ಲಿ ಕೆಲಸ ಹಾಗೂ ಜೀವನದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಮುನ್ನೆಚ್ಚರಿಕಾ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡುವುದು ಮತ್ತು ದೈಹಿಕವಾಗಿ ಚುರುಕಾಗಿರುವುದು ವ್ಯಕ್ತಿಯ ಆರೋಗ್ಯವನ್ನು ಸುಧಾರಿಸುವುದಷ್ಟೇ ಅಲ್ಲದೆ, ಒಟ್ಟಾರೆ ಉತ್ಪಾದಕತೆ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆʼʼ ಎಂದರು.


ಅಪೋಲೊ ಆಸ್ಪತ್ರೆಯ ಕರ್ನಾಟಕದ ಉಳಿದ ಭಾಗಗಳ ಉಪಾಧ್ಯಕ್ಷರಾದ ಎನ್.ಜಿ. ಭರತೀಶ ರೆಡ್ಡಿ ಮಾತನಾಡಿ, “ಅಪೋಲೊ ಕ್ಲೈಂಬಥಾನ್ ಎಂಬ ಕಾರ್ಯಕ್ರಮವು ನಮ್ಮ ಆರೋಗ್ಯ ಸೇವೆಯನ್ನು ಆಸ್ಪತ್ರೆಯ ಗೋಡೆಗಳಾಚೆಗೂ ಕೊಂಡೊಯ್ಯುವ ಕಾರ್ಯಕ್ರಮವಾಗಿದೆ. ಉತ್ತಮ ಜೀವನಶೈಲಿ ಮತ್ತು ಮುನ್ನೆಚ್ಚರಿಕೆಯಾಗಿ ಆರೋಗ್ಯ ಕಾಪಾಡಿಕೊಳ್ಳುವುದನ್ನು ಉತ್ತೇಜಿಸುವ ಮೂಲಕ ನಾವು ಆರೋಗ್ಯಕರ ಸಮಾಜ ನಿರ್ಮಿಸುತ್ತಿದ್ದೇವೆ ” ಎಂದರು.
ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯ ಅಸ್ಥಿ ಮತ್ತು ರೋಬೋಟಿಕ್ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ವಿಭಾಗದ ಕನ್ಸಲ್ಟಂಟ್ ಡಾ. ಶ್ರೇಯಸ್ ಆಳ್ವ ಮಾತನಾಡಿ, ಫಿಟ್ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಅಗತ್ಯತೆಯನ್ನು ಒತ್ತಿಹೇಳಿದರು.


ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯ ಸಾಮಾನ್ಯ ವೈದ್ಯಕೀಯ ವಿಭಾಗದ ಕನ್ಸಲ್ಟಂಟ್ ಡಾ. ನರಹರಿ ಮಾತನಾಡಿ, ಮುನ್ನೆಚ್ಚರಿಕಾ ಆರೋಗ್ಯ ಸೇವೆ ಮತ್ತು ನಿಯಮಿತ ತಪಾಸಣೆಯ ಮಹತ್ವವನ್ನು ವಿವರಿಸಿದರು.
ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಕನ್ಸಲ್ಟಂಟ್ ಡಾ. ಅಕ್ಷಯ್ ಅಂಚನ್ ಮಾತನಾಡಿ, ಸಮಗ್ರ ಆರೋಗ್ಯ ಮತ್ತು ದೈಹಿಕ ಕ್ಷೇಮದ ಬಗ್ಗೆ ಮಾತನಾಡಿದರು
ಮೈಸೂರಿನ ಬಿಜಿಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅಮನ್ ನಾಯಕ್ ಮಾತನಾಡಿ, ಇಂತಹ ಆರೋಗ್ಯಕರ ಉಪಕ್ರಮಗಳು ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಯಂಗ್ ಇಂಡಿಯನ್ಸ್ (Yi) ಸಂಸ್ಥೆಯ ಆರೋಗ್ಯ ವಿಭಾಗದ ಸಹಾಧ್ಯಕ್ಷೆ ಸುಕೃತಾ ಎನ್ ಮಾತನಾಡಿ, “ಸಮುದಾಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಶಕ್ತಿ ಯುವಜನತಯ ಮೇಲೆ ಇದೆ. ಇಂತಹ ಕಾರ್ಯಕ್ರಮಗಳು ಎಲ್ಲರನ್ನೂ ಒಳಗೊಂಡು ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುತ್ತವೆʼʼ ಎಂದರು.
ಪ್ರಶಸ್ತಿ ವಿತರಣೆ ಕಾರ್ಯಕ್ರಮವು ಬೆಳಗ್ಗೆ 8:15ಕ್ಕೆ ನಡೆಯಿತು. ನಂತರ ಸಿಐಐ ಯಂಗ್ ಇಂಡಿಯಾ, ಪೊಲೀಸ್ ಇಲಾಖೆ, ಚಾಮುಂಡಿ ಬೆಟ್ಟದ ಪ್ರಾಧಿಕಾರ ಮತ್ತು ಆರ್ಜೆ ತಂಡ ಸೇರಿದಂತೆ ಸಹಕರಿಸಿದ ಎಲ್ಲಾ ಸಂಸ್ಥೆಗಳಿಗೆ ಸಸಿಗಳನ್ನು ವಿತರಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮವು ಬೆಳಗ್ಗೆ 8:20ಕ್ಕೆ ಉಪಹಾರದೊಂದಿಗೆ ಸಮಾಪ್ತಿಯಾಯಿತು.
‘ಅಪೋಲೋ ಕ್ಲೈಂಬಥಾನ್ 4.0’ ಕಾರ್ಯಕ್ರಮವು ಆರೋಗ್ಯ ಕುರಿತು ಮುನ್ನೆಚ್ಚರಿಕೆ ವಹಿಸುವುದು, ಸಕ್ರಿಯ ಜೀವನಶೈಲಿ ಮತ್ತು ಸಮುದಾಯದ ಒಟ್ಟಾರೆ ಆರೋಗ್ಯ ಸುಧಾರಣೆಗೆ ಅಪೋಲೊ ಆಸ್ಪತ್ರೆ ಹೊಂದಿರುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

ಇದನ್ನೂ ಓದಿ:  ಹುಲಿಕಲ್‌ ಘಾಟ್‌ ಮಣ್ಣು ಕುಸಿತ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

Leave a Reply

Your email address will not be published. Required fields are marked *