Yash: ವಿಶ್ವಮಟ್ಟದಲ್ಲಿ ರಾಕಿ ಬಾಯ್‌ ಅಬ್ಬರ, ರಾಮಾಯಣ ಪ್ರಚಾರ ಮಾಡಿದ ಯಶ್‌

Yash promoted ramayana film in international event

ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ‘ರಾಮಾಯಣ’ ಸಿನಿಮಾದ ಜಾಗತಿಕ ಮಟ್ಟದ ಪ್ರಚಾರ ಕಾರ್ಯಕ್ಕೆ ಅಮೆರಿಕದಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಲಾಸ್ ವೇಗಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಸಿನಿಮಾಕಾನ್ 2026’ ಮೇಳದಲ್ಲಿ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ರಾವಣನ ಪಾತ್ರಧಾರಿ ನಟ ಯಶ್ (Yash) ಅವರು ಈ ಕನಸಿನ ಪ್ರಾಜೆಕ್ಟ್ ಅನ್ನು ಪಾಶ್ಚಿಮಾತ್ಯ ಪ್ರೇಕ್ಷಕರಿಗೆ ಪರಿಚಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮಾಧ್ಯಮಗಳೊಂದಿಗೆ ಸುದೀರ್ಘ ಸಂವಾದ

ಈ ಅದ್ದೂರಿ ಕಾರ್ಯಕ್ರಮದ ಮೊದಲ ದಿನವೇ ಯಶ್ ಮತ್ತು ನಮಿತ್ ಅವರು ಅಂತರಾಷ್ಟ್ರೀಯ ಮಾಧ್ಯಮಗಳೊಂದಿಗೆ ಸುದೀರ್ಘವಾಗಿ ಸಂವಾದ ನಡೆಸಿದರು. ಭಾರತೀಯ ಪುರಾಣದ ಈ ಮಹಾಕಾವ್ಯವನ್ನು ಜಾಗತಿಕ ಮಟ್ಟದ ಸಿನಿಮಾವನ್ನಾಗಿ ಮಾಡುವುದು ಮತ್ತು ಭಾರತೀಯ ಚಿತ್ರರಂಗದ ಕೀರ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ತಮ್ಮ ಗುರಿ ಎಂದು ನಮಿತ್ ಮಲ್ಹೋತ್ರಾ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು. ಇತ್ತೀಚೆಗಷ್ಟೇ ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರ ಮೊದಲ ನೋಟವನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ, ಈಗ ಪ್ರಚಾರದ ಮುಂದಿನ ಹಂತಕ್ಕಾಗಿ ನಟ ಯಶ್ ಅವರನ್ನು ಜಾಗತಿಕ ವೇದಿಕೆಗೆ ಕರೆತಂದಿದೆ.

ಸಹ ನಿರ್ಮಾಪಕರಾಗಿರುವ ಯಶ್‌

ಸಿನಿಮಾದ ಸಹ-ನಿರ್ಮಾಪಕರೂ ಆಗಿರುವ ನಟ ಯಶ್, ತಮ್ಮ ಮೊದಲ ಅಂತರಾಷ್ಟ್ರೀಯ ಪ್ರಚಾರ ಸಭೆಯಲ್ಲಿ ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ನೀಲಿ ಬಣ್ಣದ ಜಾಕೆಟ್ ಮತ್ತು ಶರ್ಟ್ ಧರಿಸಿದ್ದ ಯಶ್ ಅವರ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ರಾಮಾಯಣದ ಜೊತೆಗೆ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಕುರಿತಾದ ಪ್ರಶ್ನೆಗಳಿಗೂ ಉತ್ತರಿಸಿದ ಯಶ್, ಸಿನಿಮಾ ಮತ್ತು ‘ಅಸ್ತ್ರವರ್ಸ್’ (ಬ್ರಹ್ಮಾಸ್ತ್ರ ಒಳಗೊಂಡ ಸಿನಿಮೀಯ ವಿಶ್ವ) ಭವಿಷ್ಯದ ಬಗ್ಗೆ ಮಹತ್ವದ ಸುಳಿವುಗಳನ್ನು ನೀಡಿದ್ದಾರೆ. ಈ ಮೂಲಕ ರಾಮಾಯಣ ಚಿತ್ರವನ್ನು ವಿಶ್ವದಾದ್ಯಂತ ಅತಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಕಾಂತಾರ’ ವಿವಾದ: ಅಫಿಡವಿಟ್ ತಿದ್ದುಪಡಿ ಮಾಡಲು ನಟ ರಣವೀರ್ ಸಿಂಗ್ ಸಮ್ಮತಿ

Leave a Reply

Your email address will not be published. Required fields are marked *