TOP NEWS

Samantha: ಸಮಂತಾ ಸಂಬಂಧಗಳ ಕುರಿತ ಹೇಳಿಕೆ ವೈರಲ್: ಶೋಭಿತಾ ಧುಳಿಪಾಲ ಟಾಂಗ್ ನೀಡಿದರಾ?

Did samanth ruth prabhu take a dig aat shobhita

ಹೈದರಾಬಾದ್: ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha) ಅವರು ಇತ್ತೀಚೆಗೆ ಸಂಬಂಧಗಳ ಕುರಿತು ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಮಂತಾ ಅವರು ತಮ್ಮ ಮಾಜಿ ಪತಿ ನಾಗಚೈತನ್ಯ ಅವರ ಪ್ರಸ್ತುತ ಪತ್ನಿ ಶೋಭಿತಾ ಧುಳಿಪಾಲ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಈ ಮಾತುಗಳನ್ನಾಡಿದ್ದಾರೆ ಎಂದು ನೆಟ್ಟಿಗರು ವ್ಯಾಪಕವಾಗಿ ಅಂದಾಜಿಸುತ್ತಿದ್ದಾರೆ. ಬುಧವಾರ ಹೈದರಾಬಾದ್‌ನಲ್ಲಿ ನಡೆದ ತಮ್ಮ ಇತ್ತೀಚಿನ ಯಶಸ್ವಿ ಚಿತ್ರ ‘ಮಾ ಇಂಟಿ ಬಂಗಾರಂ’ ಯಶಸ್ಸಿನ ಸಂಭ್ರಮಾಚರಣೆ ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಂತಾ, ವೃತ್ತಿಜೀವನ, ಬದುಕು ಮತ್ತು ಆತ್ಮವಿಶ್ವಾಸದ ಮಹತ್ವವನ್ನು ಹಂಚಿಕೊಳ್ಳುವಾಗ ಈ ಆಸಕ್ತಿದಾಯಕ ಕಾಮೆಂಟ್ ಮಾಡಿದ್ದಾರೆ.

ಮಹಿಳೆಯರು ತಮ್ಮ ಜೀವನದಲ್ಲಿ ಪರಿಪೂರ್ಣರಾಗಲು (Complete) ಎಂದಿಗೂ ತಮ್ಮ ಸಂಗಾತಿಯ ಮೇಲೆ ಅವಲಂಬಿತರಾಗಬಾರದು ಎಂದು ಸಮಂತಾ ಹೇಳಿದ್ದಾರೆ. “ವೃತ್ತಿಜೀವನ ಮತ್ತು ಸಂಬಂಧಗಳು ನಮ್ಮ ಕೈಯಲ್ಲೇ ಇರುತ್ತವೆ. ಆದರೆ ಕೆಲವೊಮ್ಮೆ ಸಂಬಂಧಗಳು ಅಂದುಕೊಂಡಷ್ಟು ಸುಲಭವಲ್ಲ, ಅವು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಒಂದು ಬಾಂಧವ್ಯ ಯಶಸ್ವಿಯಾಗಬೇಕಾದರೆ ಇಬ್ಬರು ವ್ಯಕ್ತಿಗಳ ಶ್ರಮ ಬೇಕಾಗುತ್ತದೆ. ಹೀಗಾಗಿ ಒಬ್ಬ ಮಹಿಳೆಯಾಗಿ ಮೊದಲು ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಮತ್ತು ವೈಯಕ್ತಿಕವಾಗಿ ನಾವು ಪರಿಪೂರ್ಣರಾಗಿರಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿ ಬಂದು ನಮ್ಮ ಜೀವನವನ್ನು ಪೂರ್ಣಗೊಳಿಸುತ್ತಾನೆ ಎಂದು ಕಾಯುವುದು ಎದುರಿಗಿರುವವರ ಮೇಲೆ ಅನಗತ್ಯ ಒತ್ತಡ ಮತ್ತು ನಿರೀಕ್ಷೆಗಳನ್ನು ಹೇರಿದಂತಾಗುತ್ತದೆ, ಅದು ಸರಿಯಲ್ಲ ಎಂದು ಅವರು ವಿವರಿಸಿದ್ದಾರೆ.

ಶೋಭಿತಾ ಹಳೇ ವಿಡಿಯೋ ರೀ-ಸರ್ಫೇಸ್: ಸ್ಪಷ್ಟನೆ ನೀಡಿದ ನಟಿಯ ಜಂಟಿ ತಂಡ

ಸಮಂತಾ ಅವರು ಸಭೆಯಲ್ಲಿ ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದಿದ್ದರೂ, ಅವರ ಈ ಮಾತುಗಳು ಶೋಭಿತಾ ಧುಳಿಪಾಲ ಅವರು ತಮ್ಮ ಮದುವೆಯ ವಿಡಿಯೋದಲ್ಲಿ ಹೇಳಿದ್ದ ಸಾಲುಗಳಿಗೆ ತದ್ವಿರುದ್ಧವಾಗಿದೆ ಎಂದು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ. ಶೋಭಿತಾ ತಮ್ಮ ವಿವಾಹದ ಸಂದರ್ಭದಲ್ಲಿ “ನಾವು ವೈಯಕ್ತಿಕವಾಗಿ ಪರಿಪೂರ್ಣರಾಗಿದ್ದರೂ, ಅವರ (ನಾಗಚೈತನ್ಯ) ಅನುಪಸ್ಥಿತಿಯಲ್ಲಿ ನಾನು ಅಪೂರ್ಣ” ಎಂಬರ್ಥದಲ್ಲಿ ಮಾತನಾಡಿದ್ದರು. ಇದನ್ನೇ ಉಲ್ಲೇಖಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರು, ಸಮಂತಾ ಖಂಡಿತವಾಗಿಯೂ ಶೋಭಿತಾ ಅವರ “ಹೀ ಕಂಪ್ಲೀಟ್ಸ್ ಮಿ” ಎಂಬ ಹೇಳಿಕೆಗೆ ಕೌಂಟರ್ ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಶೋಭಿತಾ ಅವರ ಹಳೆಯ ವಿಡಿಯೋ ತುಣುಕೊಂದು ಮತ್ತೆ ಹರಿದಾಡುತ್ತಿದ್ದು, ವಿವಾದ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಶೋಭಿತಾ ಅವರ ಆಪ್ತ ತಂಡವು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಎಡಿಟ್ ಮಾಡಿ ತಪ್ಪಾದ ಅರ್ಥ ಬರುವಂತೆ ಬಿತ್ತರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಮಂತಾ

ನಾಗಚೈತನ್ಯ ಮತ್ತು ಸಮಂತಾ ಅವರು ನಾಲ್ಕು ವರ್ಷಗಳ ದಾಂಪತ್ಯ ಜೀವನದ ಬಳಿಕ ಅಕ್ಟೋಬರ್ 2021 ರಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಘೋಷಿಸಿದ್ದರು. ಅದರ ನಂತರ, 2024 ರಲ್ಲಿ ನಾಗಚೈತನ್ಯ ಅವರು ಶೋಭಿತಾ ಧುಳಿಪಾಲ ಅವರನ್ನು ವಿವಾಹವಾದರು. ಇತ್ತ ನಟಿ ಸಮಂತಾ ಅವರು ಸಹ ಕಳೆದ ಡಿಸೆಂಬರ್ 2025 ರಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಕೊಯಮತ್ತೂರಿನ ಲಿಂಗ ಭೈರವಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ‘ಭೂತ ಶುದ್ಧಿ ವಿವಾಹ’ ಪದ್ಧತಿಯಂತೆ ಅತ್ಯಂತ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸದ್ಯ ಈ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವರದಿಗಳ ನಡುವೆಯೇ, ಸಮಂತಾ ಅವರ ಈ ಹಳೆಯ ಮತ್ತು ಹೊಸ ಜೀವನದ ಅನುಭವದ ಮಾತುಗಳು ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿವೆ.

ಇದನ್ನೂ ಓದಿ: ಸ್ನೇಹಿತನ ಕೊನೆಯ ದರ್ಶನ ಸಿಗದೆ ಚಿತಾಗಾರದಲ್ಲೇ ಕಣ್ಣೀರು ಸುರಿಸಿದ ನಟಿ ಕೃಷಿ ತಾಪಂಡ

Leave a Reply

Your email address will not be published. Required fields are marked *