Samantha: ಸಮಂತಾ ಸಂಬಂಧಗಳ ಕುರಿತ ಹೇಳಿಕೆ ವೈರಲ್: ಶೋಭಿತಾ ಧುಳಿಪಾಲ ಟಾಂಗ್ ನೀಡಿದರಾ?
ಹೈದರಾಬಾದ್: ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha) ಅವರು ಇತ್ತೀಚೆಗೆ ಸಂಬಂಧಗಳ ಕುರಿತು ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಮಂತಾ ಅವರು ತಮ್ಮ ಮಾಜಿ ಪತಿ ನಾಗಚೈತನ್ಯ ಅವರ ಪ್ರಸ್ತುತ ಪತ್ನಿ ಶೋಭಿತಾ ಧುಳಿಪಾಲ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಈ ಮಾತುಗಳನ್ನಾಡಿದ್ದಾರೆ ಎಂದು ನೆಟ್ಟಿಗರು ವ್ಯಾಪಕವಾಗಿ ಅಂದಾಜಿಸುತ್ತಿದ್ದಾರೆ. ಬುಧವಾರ ಹೈದರಾಬಾದ್‌ನಲ್ಲಿ ನಡೆದ ತಮ್ಮ ಇತ್ತೀಚಿನ ಯಶಸ್ವಿ ಚಿತ್ರ ‘ಮಾ ಇಂಟಿ ಬಂಗಾರಂ’ ಯಶಸ್ಸಿನ ಸಂಭ್ರಮಾಚರಣೆ ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಂತಾ, ವೃತ್ತಿಜೀವನ,…
