TOP NEWS

Amazon: ಆರು ತಿಂಗಳಲ್ಲಿ 30,000 ಮಂದಿ ಮನೆಗೆ; ಅಮೆಜಾನ್ ಮಾರಾಟಗಾರರ ಸೇವಾ ವಿಭಾಗದ ಮೇಲೆ ಈಗ ವಜಾ ಕತ್ತಿ.

amazon lay off in Selling Partner Services team shock to employs

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರವನ್ನು ಪುನರ್ವಿಂಗಡಿಸಲು ಮುಂದಾಗಿರುವ ಅಮೆಜಾನ್ (Amazon) ಕಂಪನಿಯು ಉದ್ಯೋಗಿಗಳಿಗೆ ಮತ್ತೊಂದು ಬಿಗ್ ಶಾಕ್ ನೀಡಿದೆ. ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಈ ಬಾರಿ ಕಂಪನಿಯ ಪ್ರಮುಖ ವಿಭಾಗಗಳಲ್ಲಿ ಒಂದಾದ ‘ಸೆಲ್ಲಿಂಗ್ ಪಾರ್ಟ್ನರ್ ಸರ್ವಿಸಸ್’ ತಂಡದ ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನಿಸಿದೆ.

ಯಾವ ವಿಭಾಗದ ಮೇಲೆ ಪ್ರಭಾವ? ಅಮೆಜಾನ್‌ನಲ್ಲಿ ಮಾರಾಟಗಾರರ ಖಾತೆಗಳ ನಿರ್ವಹಣೆ ಮತ್ತು ಸರಕುಗಳ ವಿತರಣಾ ಜವಾಬ್ದಾರಿ ಹೊತ್ತಿದ್ದ ಉದ್ಯೋಗಿಗಳು ಈ ಕಡಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅಲ್ಪ ಪ್ರಮಾಣದ ವಜಾ ಎಂದು ಅಮೆಜಾನ್ ಹೇಳಿಕೊಂಡಿದ್ದರೂ, ಕಳೆದ ಆರು ತಿಂಗಳ ಅವಧಿಯಲ್ಲಿ ಕಂಪನಿಯು ಒಟ್ಟು 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಸಿಇಒ ಆಂಡಿ ಜಸ್ಸಿ ಅವರು ಕಂಪನಿಯ ಕಾರ್ಯವೈಖರಿಯಲ್ಲಿ ದಕ್ಷತೆ ತರಲು ಈ ಕಠಿಣ ಕ್ರಮ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.

ಎಐ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ಒಂದೆಡೆ ಮಾನವ ಸಂಪನ್ಮೂಲವನ್ನು ಕಡಿತಗೊಳಿಸುತ್ತಿರುವ ಅಮೆಜಾನ್, ಮತ್ತೊಂದೆಡೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ತನ್ನ ಹೂಡಿಕೆಯನ್ನು ದ್ವಿಗುಣಗೊಳಿಸುತ್ತಿದೆ. ಜಾಹೀರಾತು ಮತ್ತು ಕ್ಲೌಡ್ ಸೇವೆಗಳಲ್ಲಿ ಎಐ ತಂತ್ರಜ್ಞಾನ ಅಳವಡಿಕೆಯಿಂದಾಗಿ ಸಾಂಪ್ರದಾಯಿಕ ಕೆಲಸಗಳಿಗೆ ಮನುಷ್ಯರ ಅವಶ್ಯಕತೆ ಕಡಿಮೆಯಾಗುತ್ತಿದೆ ಎಂಬುದು ಕಂಪನಿಯ ವಾದವಾಗಿದೆ. ಕೊರೊನಾ ಅವಧಿಯಲ್ಲಿ ಅತಿಯಾದ ನೇಮಕಾತಿ ಮಾಡಿಕೊಂಡಿದ್ದೇ ಈಗಿನ ಈ ಪರಿಸ್ಥಿತಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಉದ್ಯೋಗಿಗಳ ನೆರವಿಗೆ ಭರವಸೆ ದಿಢೀರ್ ಕೆಲಸ ಕಳೆದುಕೊಳ್ಳುವ ಸಿಬ್ಬಂದಿಗೆ ಕಂಪನಿಯು ಪರಿಹಾರದ ರೂಪದಲ್ಲಿ ‘ಸೆವೆರೆನ್ಸ್ ಪ್ಯಾಕೇಜ್’ ಘೋಷಿಸಿದೆ. ಜೊತೆಗೆ ಕೆಲವು ಕಾಲದವರೆಗೆ ವೈದ್ಯಕೀಯ ವಿಮೆ ಸೌಲಭ್ಯ ಹಾಗೂ ಬೇರೆಡೆ ಉದ್ಯೋಗ ಹುಡುಕಲು ಅಗತ್ಯವಿರುವ ಮಾರ್ಗದರ್ಶನ ನೀಡುವುದಾಗಿ ಅಮೆಜಾನ್ ತಿಳಿಸಿದೆ. ದಕ್ಷತೆ ಹೆಚ್ಚಿಸುವ ಈ ಪ್ರಯತ್ನ ಅಂತರಾಷ್ಟ್ರೀಯ ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.

ಇದನ್ನೂ ಓದಿ:  56,432 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್

Leave a Reply

Your email address will not be published. Required fields are marked *