ಮೊನ್ನೆ ಮೊನ್ನೆಯಷ್ಟೇ 2026 ಆರಂಭವಾಗಿರುವ ರೀತಿ ಇದೆ, ಆದರೆ ಈಗಾಗಲೇ 2 ತಿಂಗಳು ಮುಗಿದು ಹೋಗಿ, ಮೂರನೇ ತಿಂಗಳು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಸದ್ಯದಲ್ಲಿ ಮಾರ್ಚ್ ತಿಂಗಳು ಆರಂಭ ಆಗಲಿದ್ದು, ಜ್ಯೋತಿಷ್ಯದ ಪ್ರಕಾರ ಇದು ಬಹಳ ವಿಶೇಷವಾದ ತಿಂಗಳಾಗಿದೆ. ಈ ತಿಂಗಳ ಆರಂಭದಲ್ಲಿ ಘಟಾನುಘಟಿ ಗ್ರಹಗಳ ಸಂಯೋಗ (Planet Conjunction) ಆಗುತ್ತದೆ. ಹಾಗಾದ್ರೆ ಯಾವ ಗ್ರಹಗಳ ಸಂಯೋಗ ಆಗುತ್ತದೆ ಹಾಗೂ ಅದರಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಎಂಬುದು ಇಲ್ಲಿದೆ.
ಯಾವ ಗ್ರಹಗಳ ಸಂಯೋಗ (Planet Conjunction) ಆಗಲಿದೆ?
ಜ್ಯೋತಿಷ್ಯದ ಮಾಹಿತಿ ಪ್ರಕಾರ, ಈ ತಿಂಗಳಲ್ಲಿ ಗ್ರಹಗಳ ರಾಜ ಸೂರ್ಯ, ಸಂಪತ್ತನ್ನ ನೀಡುವ ಶುಕ್ರ ಹಾಗೂ ನ್ಯಾಯದ ದೇವರು ಶನಿ ಗ್ರಹಗಳ ಸಂಯೋಗ ಆಗುತ್ತದೆ. ಈ ಸಂಯೋಗ ಬಹಳ ವಿಶೇಷವಾಗಿದ್ದು, ಇದರಿಂದ ಸೃಷ್ಟಿ ಆಗುವ ಯೋಗ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಹಾಗಾದ್ರೆ ಈ ಮೂರು ಗ್ರಹಗಳ ಸಮ್ಮಿಲನದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗುತ್ತದೆ ಇಲ್ಲಿದೆ.
ವೃಷಭ ರಾಶಿ: ಈ ಯೋಗದ ಕಾರಣದಿಂದ ವೃಷಭ ರಾಶಿಯವರು ಎಲ್ಲಾ ರೀತಿಯ ಒತ್ತಡಗಳಿಂದ ದೂರವಾಗುವವರು ಮತ್ತು ಬೆಳಗ್ಗೆಯಿಂದಲೇ ಶುಭ ಸುದ್ದಿಯನ್ನು ಪಡೆಯುವರು.. ನೀವು ಹೊಸ ವ್ಯಾಪಾರವನ್ನು ಶುರು ಮಾಡಬೇಕೆಂದಿದ್ದರೆ, ಇದು ಉತ್ತಮ ಸಮಯವಾಗಿದೆ. ಮನೆಯಲ್ಲಿ ಯಾವುದಾದರೂ ವಿಷಯಕ್ಕೆ ತಪ್ಪು ತಿಳುವಳಿಕೆ ಉಂಟಾಗಿದ್ದರೆ, ಎಲ್ಲವೂ ಸಕಾರಾತ್ಮಕವಾಗುವುದು ಮತ್ತು ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುವುದು.
ಸಿಂಹ ರಾಶಿ: ಉದ್ಯೋಗಿಗಳ ಜೀವನದಲ್ಲಿ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ, ಪ್ರಸ್ತುತ ನೀವು ಏನು ಮಾಡುತ್ತಿದ್ದೀರಿ ಮತ್ತು ನೀವು ಮಾಡುತ್ತಿರುವ ಸಂಪರ್ಕಗಳು ಭವಿಷ್ಯದಲ್ಲಿ ಲಾಭದಾಯಕವೆಂದು ತಿಳಿದುಬರುತ್ತದೆ. ನೀವು ಅಂದುಕೊಂಡಿರುವ ಅನೇಕ ಕೆಲಸಗಳು ಸರಾಗವಾಗಿ ಆಗುತ್ತದೆ. ಮಾನಸಿಕವಾಗಿ ನೀವು ಗಟ್ಟಿ ಆಗುವ ಸಮಯ ಇದಾಗಿದೆ. ಕನಸುಗಳು ನನಸಾಗುತ್ತದೆ.
ತುಲಾ ರಾಶಿ: ಈ ರಾಶಿಯ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಆಸ್ತಿ, ಮನೆ ಮತ್ತು ಕುಟುಂಬದ ವಿಷಯಗಳಲ್ಲಿ ನೀವು ಹೊಸ ಆರಂಭವನ್ನು ಮಾಡಬಹುದು. ಉದ್ಯೋಗಸ್ಥರು ಅಧಿಕಾರಿಗಳ ನೆರವಿನಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಅಲ್ಲದೆ, ನೀವು ಪ್ರಸ್ತುತ ಏನು ಮಾಡುತ್ತಿದ್ದೀರಿ ಮತ್ತು ನೀವು ಮಾಡುತ್ತಿರುವ ಸಂಪರ್ಕಗಳು ಶೀಘ್ರದಲ್ಲೇ ನಿಮಗೆ ಪ್ರಯೋಜನಗಳನ್ನು ತರುತ್ತವೆ.

ಕುಂಭ ರಾಶಿ: ಈ ಗ್ರಹಗಳ ಸಂಯೋಜನೆಯು ಆರ್ಥಿಕ ಸಮಸ್ಯೆಗಳು ಮತ್ತು ಆಸ್ತಿ ವಿವಾದಗಳಿಂದ ಮುಕ್ತಿಯನ್ನು ನೀಡುತ್ತದೆ. ಆಸ್ತಿ ಮತ್ತು ವ್ಯಾಪಾರ ವ್ಯವಹಾರಗಳು ಅಭಿವರ್ಧಿಸುವ ಸಾಧ್ಯತೆ. ವೃತ್ತಿ ಮತ್ತು ವ್ಯವಹಾರಗಳು ಹೊಸ ಎತ್ತರಕ್ಕೆ ತಲುಪುತ್ತವೆ. ಸಂತಾನ ಯೋಗ ಕೂಡಿಬರಹುದು. ಮಕ್ಕಳಿಂದ ಶುಭ ಸಮಾಚಾರ ಕೇಳಿಬರುವುದು. ಕೆಲಸದಲ್ಲಿ ಕೆಲವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವ ಸಾಧ್ಯತೆಯಿದೆ. ನಿಮ್ಮ ಪ್ರತಿಭೆಯಿಂದ ಇತರರೂ ಉಪಯೋಗಪಡೆಯಲಿದ್ದಾರೆ.
ಮೀನ ರಾಶಿ: ಶುಭ ಗ್ರಹಗಳ ಸಂಯೋಗ ಅನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಚಕ್ರ ಚಿಹ್ನೆಯ ಪ್ರತಿಭೆಗೆ ಕೆಲಸದಲ್ಲಿ ಮಾತ್ರವಲ್ಲದೆ, ಎಲ್ಲೆಡೆಯಿಂದಲೂ ಗುರುತಿಸಲ್ಪಡುತ್ತವೆ. ಆದಾಯವು ಅನೇಕ ರೀತಿಯಲ್ಲಿ ಹೆಚ್ಚಾಗುತ್ತದೆ. ಆಸ್ತಿ ಸಮಸ್ಯೆಗಳು ಮತ್ತು ವಿವಾದಗಳು ಅನಾಯಾಸವಾಗಿ ಪರಿಹರಿಸಲ್ಪಡುತ್ತವೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ವೃತ್ತಿ ಮತ್ತು ವ್ಯಾಪಾರ ನಷ್ಟದಿಂದ ಪಾರಾಗಲಿದ್ದಾರೆ.
