Dhurandhar 2: ಬಿಡುಗಡೆಗೆ ಸಜ್ಜಾಯ್ತು ಧುರಂಧರ್‌ 2, ಹೊಸ ಅವತಾರದಲ್ಲಿ ರಣವೀರ್ ಸಿಂಗ್

Dhurandhar 2 teaser poster released

ಮುಂಬೈ: ರಣವೀರ್‌ ಸಿಂಗ್‌ ಅಭಿನಯದ ಬಾಲಿವುಡ್‌ ಸಿನಿಮಾ ಧುರಂಧರ್‌ ಚಿತ್ರವು (Dhurandhar 2) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಹೊಸ ವಿಚಾರವೇನಲ್ಲ. ಇದೀಗ ಅದರ ಯಶಸ್ಸಿನ ನಾಗಾಲೋಟ ಮುಂದುವರೆಯಲು ಸಜ್ಜಾಗಿದ್ದು, ಎರಡನೇ ಭಾಗ ಧುರಂಧರ್: ದಿ ರಿವೇಂಜ್‌ನ ಪೋಸ್ಟರ್‌ ಹಾಗೂ ಟೀಸರ್‌ ರಿಲೀಸ್‌ ಆಗಿದೆ.

ಕುತೂಹಲ ಮೂಡಿಸಿದ ಟೀಸರ್‌

ಇನ್ನು ಈ ಟೀಸರ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಟೀಸರ್‌ನಲ್ಲಿ, ರಣವೀರ್ ಸಿಂಗ್ ಹಮ್ಜಾ ಅಲಿ ಮಜಾರಿ ಪಾತ್ರದ ಮತ್ತೊಂದು ರೂಪವನ್ನ ತೋರಿಸಿದ್ದು, ಮೊದಲ ಅಧ್ಯಾಯಕ್ಕಿಂತಲೂ ಇದು ಇನ್ನೂ ಕ್ರೂರವಾಗಿದೆ ಎನ್ನಬಹುದು. ಈ ಟೀಸರ್‌ ನೋಡಿದರೆ ಹಮ್ಜಾ ಹೊಸ ಶೇರ್-ಎ-ಬಲೂಚ್ ಮತ್ತು ಲಿಯಾರಿಯ ಸಾಮ್ರಾಜ್ಯವನ್ನ ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಸುಳಿವು ನೀಡುತ್ತಿದೆ.

ಟೀಸರ್ ಪೋಸ್ಟರ್‌ನಲ್ಲಿ ರಣವೀರ್ ಸಿಂಗ್ ಕಪ್ಪು ಬಣ್ಣದ ಟ್ರೆಂಚ್ ಕೋಟ್‌ನಲ್ಲಿ ಮಧ್ಯ-ಫ್ರೇಮ್‌ನಲ್ಲಿ ನಿಂತಿದ್ದು, ಎಲ್ಲರ ಚಿತ್ತ ಅವರತ್ತ ನೆಟ್ಟಿದೆ ಸದ್ಯಕ್ಕೆ. ಇನ್ನು ನಿರ್ದೇಶಕ ಆದಿತ್ಯ ಧಾರ್ ನಿರ್ದೇಶನ ಮಾಡಿದ್ದ ಧುರಂಧರ್  ಅತಿದೊಡ್ಡ ಹಿಂದಿ ಚಿತ್ರವಾಗಿ ಹೊರ ಹೊಮ್ಮಿತ್ತು.

ಮಾರ್ಚ್‌ನಲ್ಲಿ ಸಿನಿಮಾ ಬಿಡುಗಡೆ

ಈ ಚಿತ್ರವು ಮಾರ್ಚ್ 19, 2026 ರಂದು ಹಬ್ಬಗಳ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ದಕ್ಷಿಣ ಭಾರತದಾದ್ಯಂತ ಭಾರಿ ಬೇಡಿಕೆಯಿಂದಾಗಿ ಭಾರತಾದ್ಯಂತ ವಿಸ್ತರಣೆಯಾಗಲಿದೆ.

ಈ ಸಿನಿಮಾವನ್ನ ಆದಿತ್ಯ ಧರ್ ಬರೆದು ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ, ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧರ್ ನಿರ್ಮಾಪಕರಾಗಿದ್ದಾರೆ. ಜಿಯೋ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದೆ.

ಇದನ್ನೂ ಓದಿ: ನಟ ವಿಜಯ್‌ಗೆ ಹಿನ್ನೆಡೆ, ಜನ ನಾಯಗನ್‌ ಸಿನಿಮಾಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

Leave a Reply

Your email address will not be published. Required fields are marked *