Big News: ಬಯಲಾದ ಆರೋಗ್ಯ ಇಲಾಖೆಯ ಮಹಾ ಬೇಜವಾಬ್ದಾರಿತನ; ಗೋಮಾಳದಲ್ಲಿ ಪತ್ತೆಯಾದ ಸರ್ಕಾರಿ ಔಷಧಿಗಳು!
ತುಮಕೂರು: ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಉಚಿತವಾಗಿ ಸಿಗಬೇಕಿದ್ದ ಸರ್ಕಾರಿ ಆಸ್ಪತ್ರೆಯ ಬೆಲೆಬಾಳುವ ಮಾತ್ರೆಗಳನ್ನು ಜನರಿಲ್ಲದ ಸ್ಮಶಾನ ಹಾಗೂ ಜಾನುವಾರುಗಳ ಹುಲ್ಲುಗಾವಲಿನಲ್ಲಿ (Big News) ಬೇಜವಾಬ್ದಾರಿತನದಿಂದ ಎಸೆದು ಹೋಗಿರುವ ಗಂಭೀರ ಪ್ರಕರಣ ಕೊರಟಗೆರೆ ತಾಲೂಕಿನ ಕಾಮೇನಹಳ್ಳಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ. ಸುಸ್ಥಿತಿಯಲ್ಲಿದ್ದ ಸಾವಿರಾರು ಔಷಧಿಗಳನ್ನು ಸದ್ದಿಲ್ಲದೆ ಅನಾಥ ಜಾಗದಲ್ಲಿ ಎಸೆದಿರುವ ಅಧಿಕಾರಿಗಳ ನಡೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆತಂಕಕಾರಿ ಘಟನೆ ನಡೆದ ಸ್ಥಳದ ಸಮೀಪದಲ್ಲೇ ಗ್ರಾಮದ ಮುಖ್ಯ ಕೆರೆಯಿದ್ದು, ಮುಂಬರುವ ಮಳೆಗಾಲದಲ್ಲಿ…
