Jana Nayagan: ಖಾಕಿ ಉಡುಪಿನಲ್ಲಿ ದಳಪತಿ ವಿಜಯ್ ಖಡಕ್ ಲುಕ್: ಕೊನೆಗೂ ರಿಲೀಸ್ ಡೇಟ್ ಘೋಷಿಸಿದ ‘ಜನನಾಯಗನ್’!
ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಹಾಗೂ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಅವರ ನಟನೆಯ ಕೊನೆಯ ಚಿತ್ರ ‘ಜನನಾಯಗನ್’ (Jana Nayagan) ಜಾಗತಿಕವಾಗಿ ಬಿಡುಗಡೆಯಾಗುವ ದಿನಾಂಕ ಕೊನೆಗೂ ಅಧಿಕೃತಗೊಂಡಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಾವಾಗ ತೆರೆಕಾಣಬಹುದು ಎಂಬ ಹಲವು ವಾರಗಳ ಊಹಾಪೋಹಗಳಿಗೆ ಚಿತ್ರತಂಡ ಈಗ ತೆರೆ ಎಳೆದಿದೆ. ಜುಲೈ 23ಕ್ಕೆ ಸಿನಿಮಾ ರಿಲೀಸ್ ಸ್ವತಃ ನಟ ಹಾಗೂ ರಾಜಕಾರಣಿಯಾಗಿರುವ ವಿಜಯ್ ಅವರು ಬುಧವಾರದಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ, ಚಿತ್ರವು ಜುಲೈ 23,…
