Ramayana: ₹4,000 ಕೋಟಿಯ ‘ರಾಮಾಯಣ’ಕ್ಕೆ ಮುಳುವಾಯಿತೇ ‘ಆದಿಪುರುಷ್’ ನೆರಳು? ಹಕ್ಕು ಖರೀದಿಸಲು ವಿತರಕರ ಹಿಂದೇಟು!
ಮುಂಬೈ: ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೈಭವೋಪೇತ ಹಾಗೂ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ರಣ್ಬೀರ್ ಕಪೂರ್, ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಅವರಂತಹ ಘಟಾನುಘಟಿ ತಾರೆಯರ ದಂಡೇ ಇರುವ ಈ ಚಿತ್ರದ ಮೊದಲ ಭಾಗವನ್ನು ಈ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 6 ರಂದು ತೆರೆಗೆ ತರಲು ಚಿತ್ರತಂಡ ಯೋಜಿಸಿದೆ. ಆದರೆ, ಬಿಡುಗಡೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಚಿತ್ರದ ನಿರ್ಮಾಪಕರಿಗೆ ವಿತರಣೆಯ ದೊಡ್ಡ…
