TOP NEWS

Ramayana: ರಾವಣನ ಗಂಭೀರ ಧ್ವನಿಯ ಹಿಂದಿನ ರಹಸ್ಯ ಬಯಲು: ಸ್ಪಷನೆ ಕೊಟ್ಟ ಪ್ರಜ್ವಲ್‌ ದೇವರಾಜ್

Who Voiced Ravana in Ramayana Prajwal Devaraj Clears the Air Over Yash Rumors

ಬೆಂಗಳೂರು: ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್‌ನಲ್ಲಿದ್ದ ರಾವಣನ ಪಾತ್ರದ ಧ್ವನಿ ಯಾರದ್ದು ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿತ್ತು. ಟ್ರೇಲರ್‌ನಲ್ಲಿ ರಾವಣನ ಪಾತ್ರಕ್ಕೆ ಧ್ವನಿ ನೀಡಿರುವುದು ರಾಕಿಂಗ್ ಸ್ಟಾರ್ ಯಶ್ ಅಲ್ಲ, ಬದಲಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ದೇವರಾಜ್ ಅವರು ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಟ ಪ್ರಜ್ವಲ್ ದೇವರಾಜ್ ಸ್ಪಷ್ಟನೆ ನೀಡುವ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ.

ಯಶ್‌ ಜೊತೆ ಮಾತನಾಡಿದ್ದ ಪ್ರಜ್ವಲ್‌ ರೇವಣ್ಣ

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಮುಕ್ತವಾಗಿ ಮಾತನಾಡಿದ ಪ್ರಜ್ವಲ್ ದೇವರಾಜ್, “ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ತೀರಾ ಸುಳ್ಳು. ಈ ಗೊಂದಲದ ವದಂತಿ ಕೇಳಿಬರುತ್ತಿದ್ದಂತೆಯೇ ನಾನು ತಕ್ಷಣವೇ ನಟ ಯಶ್ ಅವರಿಗೆ ಕರೆ ಮಾಡಿ ಮಾತನಾಡಿದೆ. ಆ ಸಂದರ್ಭದಲ್ಲಿ ನಮ್ಮ ತಂದೆ ದೇವರಾಜ್ ಅವರೂ ಸಹ ಯಶ್ ಅವರೊಂದಿಗೆ ಸಂಭಾಷಣೆ ನಡೆಸಿದರು. ಆಗ ಯಶ್ ಅವರು ‘ನನ್ನ ಧ್ವನಿಯನ್ನು ದೇವರಾಜ್ ಅವರಂತಹ ದೈತ್ಯ ಹಾಗೂ ಗಂಭೀರ ಕಂಠದ ಹಿರಿಯ ನಟರಿಗೆ ಹೋಲಿಸುತ್ತಿರುವುದು ನನಗೆ ಅತ್ಯಂತ ಹೆಮ್ಮೆಯ ವಿಚಾರ’ ಎಂದು ತಂದೆಯವರಲ್ಲಿ ಬಹಳ ಗೌರವದಿಂದ ಹೇಳಿದರು” ಎಂದು ಘಟನೆಯನ್ನು ವಿವರಿಸಿದ್ದಾರೆ.

ಅಧಿಕೃತವಾಗಿ ಯಶ್‌ ಧ್ವನಿ ಎಂದು ಸ್ಪಷ್ಟನೆ

ಪ್ರಜ್ವಲ್ ದೇವರಾಜ್ ಅವರ ಈ ಮಾಹಿತಿಯಿಂದಾಗಿ ಟ್ರೇಲರ್‌ನಲ್ಲಿ ಕೇಳಿಬಂದ ಆ ಗಂಭೀರ ಮತ್ತು ಕಠೋರ ಧ್ವನಿ ಸ್ವತಃ ಯಶ್ ಅವರದ್ದೇ ಎಂಬುದು ಅಧಿಕೃತವಾಗಿ ಸ್ಪಷ್ಟವಾಗಿದೆ. ತಮ್ಮದೇ ಆದ ನೈಸರ್ಗಿಕ ಹಾಗೂ ಗಂಭೀರ ಕಂಠಸಿರಿಯಿಂದ ರಾವಣನ ಪಾತ್ರಕ್ಕೆ ಯಶ್ ಅತ್ಯಂತ ಪರಿಣಾಮಕಾರಿಯಾಗಿ ಜೀವ ತುಂಬಿದ್ದಾರೆ. ಯಶ್ ಅವರ ಈ ಕಂಠಸಿರಿ ಮತ್ತು ಧ್ವನಿಯ ಪವರ್ ಕಂಡು ಅಭಿಮಾನಿಗಳು ಹಾಗೂ ಚಲನಚಿತ್ರ ಪ್ರೇಮಿಗಳು ಫಿದಾ ಆಗಿದ್ದಾರೆ.

ಇನ್ನು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಿಗೆ ಈ ವರ್ಷ ಅತ್ಯಂತ ವಿಶೇಷವಾಗಿದೆ. ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಮತ್ತೊಂದೆಡೆ, ಯಶ್ ರಾವಣನಾಗಿ ಅಬ್ಬರಿಸಲಿರುವ ‘ರಾಮಾಯಣ’ ಸಿನಿಮಾ ಈ ವರ್ಷದ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲಿವೆ ಎಂಬ ಬಲವಾದ ನಿರೀಕ್ಷೆ ಚಲನಚಿತ್ರ ರಂಗದಲ್ಲಿದೆ.

ಇದನ್ನೂ ಓದಿ:  ‘ಟಾಕ್ಸಿಕ್’ ಮುಂಗಡ ಬುಕಿಂಗ್ ಶೀಘ್ರ ಆರಂಭ: ಯಶ್ ಅಭಿನಯದ ಮೆಗಾ ಸಿನಿಮಾಗೆ ದಿನಗಣನೆ!

Leave a Reply

Your email address will not be published. Required fields are marked *