Sandalwood: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ರಾಕಿಂಗ್ ಸ್ಟಾರ್ ಶಹಬ್ಬಾಸ್: ಯುವ ಪಡೆಗೆ ರಾಧಿಕಾ-ಯಶ್ ದಂಪತಿ ಭರ್ಜರಿ ಪ್ರೋತ್ಸಾಹ!
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆಲ್ಲುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಯಶಸ್ಸನ್ನು ದಾಖಲಿಸಿರುವ ‘ಪ್ರೇಮದ ಊರಲಿ’ ಚಿತ್ರದ ವಿಜಯದಾಟ (Sandalwood) ಮುಂದುವರಿದಿದೆ. ಈಗಾಗಲೇ ಕನ್ನಡ ಚಿತ್ರರಂಗದ ಹಲವು ಪ್ರಮುಖ ನಟ-ನಟಿಯರು ಹಾಗೂ ತಂತ್ರಜ್ಞರು ಈ ನೂತನ ತಂಡದ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಸಿನಿಮಾ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇದೀಗ ಭಾರತೀಯ ಚಿತ್ರರಂಗದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಹಾಗೂ ಜನಪ್ರಿಯ ನಟಿ ರಾಧಿಕಾ ಪಂಡಿತ್ ದಂಪತಿಗಳು ನೇರವಾಗಿ ‘ಪ್ರೇಮದ…
