Crime: ಪುಸ್ತಕ ತಂದಿಲ್ಲವೆಂದು ಕ್ರೂರ ಶಿಕ್ಷೆ: ದೆಹಲಿಯಲ್ಲಿ ಸುಡುವ ಬಿಸಿಲಿಗೆ ನಿಂತು 10 ವರ್ಷದ ಬಾಲಕಿ ಸಾ*ವು!
ನವದೆಹಲಿ: ಶಾಲಾ ಶಿಕ್ಷಕರು ನೀಡಿದ ಕಠಿಣ ಶಿಕ್ಷೆಯೊಂದು ಹತ್ತರ ಹರೆಯದ ಪುಟ್ಟ ಬಾಲಕಿಯ ಪ್ರಾಣವನ್ನೇ ಬಲಿ ಪಡೆದಿರುವ ಅತ್ಯಂತ ಆಘಾತಕಾರಿ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ (Crime) ನಡೆದಿದೆ. ತರಗತಿಗೆ ಪಠ್ಯಪುಸ್ತಕ ತರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಸುಡುವ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದರಿಂದ, ಆಕೆ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆಗಸ್ಟ್ 27 ರಂದು ನಡೆದಿದ್ದ ಘಟನೆ ಪೂರ್ವ ದೆಹಲಿಯ ವಿನೋದ್ ನಗರದಲ್ಲಿರುವ ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ಈ ದಾರುಣ ಘಟನೆ ಸಂಭವಿಸಿದೆ….
