Road mishap 4 beo injured one driver lost life in express way

Road Mishap: ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಚಾಲಕ ದುರ್ಮರಣ, ನಾಲ್ವರು ಶಿಕ್ಷಣಾಧಿಕಾರಿಗಳ ಸ್ಥಿತಿ ಗಂಭೀರ

ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ಮತ್ತೊಂದು ಭೀಕರ ದುರಂತ ಸಂಭವಿಸಿದೆ. ಇಲಾಖೆಯ ಉನ್ನತ ಮಟ್ಟದ ಸಭೆಗೆ ಹಾಜರಾಗಲು ಮೈಸೂರಿನಿಂದ ಬೆಂಗಳೂರಿನತ್ತ ಧಾವಿಸುತ್ತಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳಿದ್ದ ವಾಹನವು ಚನ್ನಪಟ್ಟಣದ ಮುದುಗೆರೆ ಸಮೀಪ ಭೀಕರ ಅಪಘಾತಕ್ಕೆ (Road Mishap) ಈಡಾಗಿದೆ. ಚಲಿಸುತ್ತಿದ್ದ ಕಾರಿನ ಟೈರ್ ಹಠಾತ್ತನೆ ಸಿಡಿದಿದ್ದರಿಂದ ಈ ಅಪಘಾತ ಸಂಭವಿಸಿದ್ದು, ವಾಹನ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಆನಂದ್ ಎಂಬುವವರೇ ಮೃತಪಟ್ಟ ದುರ್ದೈವಿ ಚಾಲಕ. ಕಾರಿನಲ್ಲಿದ್ದ ಮೈಸೂರು ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಪ್ರಕಾಶ್, ರಾಜು, ಕೃಷ್ಣ ಹಾಗೂ…

Read More
good news indian railway releases bullet train route maps

Bullet Train: ಕರ್ನಾಟಕಕ್ಕೆ ಮೂರು ಬುಲೆಟ್ ರೈಲು ಮಾರ್ಗಗಳ ನಕ್ಷೆ ರಿಲೀಸ್: ಮೈಸೂರು-ಬೆಂಗಳೂರು ನಡುವೆ ಅತೀ ವೇಗದ ಪ್ರಯಾಣ!

ಬೆಂಗಳೂರು: ರಾಜ್ಯದ ಜನತೆ ಬಹುಕಾಲದಿಂದ ಕಾಯುತ್ತಿದ್ದ ಹೈಸ್ಪೀಡ್ ರೈಲು ಯೋಜನೆಗಳ ಅಧಿಕೃತ ಮಾರ್ಗಸೂಚಿ ಹೊರಬಿದ್ದಿದೆ. ಬೆಂಗಳೂರಿನಿಂದ ನೆರೆಯ ರಾಜಧಾನಿಗಳಾದ ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕ ಕಲ್ಪಿಸುವ ಯೋಜನೆಗಳ ಜೊತೆಗೆ, ಈಗ ಮೈಸೂರು-ಬೆಂಗಳೂರು ಹೈಸ್ಪೀಡ್ (Bullet Train) ಮಾರ್ಗದ ನಕ್ಷೆಯೂ ಸಿದ್ಧವಾಗಿರುವುದು ವಿಶೇಷ. ಮೈಸೂರು ಮಾರ್ಗದ ಹೈಲೈಟ್ಸ್: ಸಂಸದ ಯದುವೀರ್ ಒಡೆಯರ್ ಅವರ ಪ್ರಸ್ತಾವನೆಗೆ ಓಗೊಟ್ಟಿರುವ ಕೇಂದ್ರ ಸರ್ಕಾರ, ಚೆನ್ನೈ ಬುಲೆಟ್ ರೈಲು ಯೋಜನೆಯನ್ನು ಮೈಸೂರಿನವರೆಗೆ ವಿಸ್ತರಿಸಲು ಮುಂದಾಗಿದೆ. ಸುಮಾರು 157 ಕಿ.ಮೀ ಉದ್ದದ ಈ ಮಾರ್ಗವು ಮೈಸೂರಿನಿಂದ…

Read More
mysuru women suicide

Mysuru: ಗಂಡನ ಮನೆಯವರ ಕಿರುಕುಳ, ನೇಣಿಗೆ ಶರಣಾದ ಯುವತಿ: ಆರೋಪಿಗಳ ರಕ್ಷಣೆಗೆ ಮುಂದಾಯ್ತ ಖಾಕಿ?

ಮೈಸೂರು: ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಪ್ರಕರಣದಲ್ಲಿ ಪೊಲೀಸರೇ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಏನಿದು ಘಟನೆ?ಮೈಸೂರಿನ ದಟ್ಟಗಳ್ಳಿ ನಿವಾಸಿಯಾದ ಸಹದೇವ್‌ ಅವರ ಮಗಳು 28 ವರ್ಷದ ಸಂಪ್ರೀತ ಆತ್ಮಹತ್ಯೆ ಮಾಡಿಕೊಂಡ ಯುವತಿ ಆಗಿದ್ದು, ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ. ಮಾಹಿತಿಗಳ ಪ್ರಕಾರ, ಮೈಸೂರು ಮೂಲದ ಯುವತಿ…

Read More
Shocking allegation on Mysuru private drm hospital

Shocking: ಚಿಕಿತ್ಸೆ ನೆಪದಲ್ಲಿ 7 ಲಕ್ಷ ವಸೂಲಿ, ಖಾಸಗಿ ಆಸ್ಪತ್ರೆ ವಿರುದ್ಧ ಪೋಷಕರ ಗಂಭೀರ ಆರೋಪ

ಮೈಸೂರು: ಚೆಲುವಾಂಬ ಆಸ್ಪತ್ರೆಯ ಪ್ರಕರಣದ ಬೆನ್ನಲ್ಲೇ, ಇದೀಗ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ (Shocking) ವೈದ್ಯಕೀಯ ನಿರ್ಲಕ್ಷ್ಯ ಮತ್ತು ಹಣದ ಲೂಟಿ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗೋಕುಲಂ ಪ್ರದೇಶದಲ್ಲಿರುವ ಡಿಆರ್‌ಎಂ (DRM) ಆಸ್ಪತ್ರೆಯಲ್ಲಿ 45 ದಿನಗಳ ಕಾಲ ಚಿಕಿತ್ಸೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆದು, ಕೊನೆಗೆ ಮಗು ಮೃತಪಟ್ಟಿದೆ ಎಂದು ತಿಳಿಸಿರುವ ಆಸ್ಪತ್ರೆಯ ನಡೆ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಹಿನ್ನೆಲೆ: ಕೆಆರ್‌ಎಸ್ ಮೂಲದ ದಯಾನಂದ ಮತ್ತು ದಿವ್ಯಾ ದಂಪತಿಗಳ ಮಗು 7 ತಿಂಗಳಿಗೆ…

Read More
shocking hospital negligence 2 people lost life in 2 days

Shocking: ಬಳ್ಳಾರಿ ಮತ್ತು ಮೈಸೂರಿನ ಆಸ್ಪತ್ರೆಗಳಲ್ಲಿ ಸಿಬ್ಬಂದಿ ನಿರ್ಲಕ್ಷ್ಯ; ಇಬ್ಬರು ರೋಗಿಗಳ ಸಾವು

ಬೆಂಗಳೂರು: ರಾಜ್ಯದ ವಿವಿಧೆಡೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ (Shocking) ರೋಗಿಗಳು ಪ್ರಾಣ ಕಳೆದುಕೊಂಡಿರುವ ಎರಡು ಆಘಾತಕಾರಿ ಘಟನೆಗಳು ವರದಿಯಾಗಿವೆ. ಬಳ್ಳಾರಿಯಲ್ಲಿ ಇಬ್ಬಂದಿ ನಿರ್ಲಕ್ಷ್ಯ, ವೃದ್ಧೆ ಸಾವು ಬಳ್ಳಾರಿಯ ಬಿಎಂಇಆರ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ಅಕ್ಕಮ್ಮ ಎಂಬುವವರು ಮೃತಪಟ್ಟಿದ್ದು, ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಾಯಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರಿಗೆ ಏಪ್ರಿಲ್ 17ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿತ್ತು. ಆದರೆ, ಆಪರೇಷನ್ ನಂತರದ ದಿನಗಳಲ್ಲಿ ಅಗತ್ಯವಿದ್ದ ಇಂಜೆಕ್ಷನ್ ಮತ್ತು…

Read More
Apollo Mysuru climbathan for world health day

Apollo: ವಿಶ್ವ ಆರೋಗ್ಯ ದಿನ ಹಿನ್ನಲೆ, ಯಶಸ್ವಿಯಾಗಿ ನಡೆದ

ಮೈಸೂರು: ವಿಶ್ವ ಆರೋಗ್ಯ ದಿನದ ಅಂಗವಾಗಿ ಅಪೋಲೊ ಆಸ್ಪತ್ರೆಯು ಚಾಮುಂಡಿ ಬೆಟ್ಟದಲ್ಲಿ “ಹಂತ ಹಂತವಾಗಿ – 1001 ಹಂತಗಳು” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ‘ಅಪೋಲೊ ಕ್ಲೈಂಬಥಾನ್ 4.0’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. (Apollo) ಎಲ್ಲಾ ವಯೋಮಾನದ ಫಿಟ್ನೆಸ್ ಆಸಕ್ತರು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮವು ಬೆಳಗ್ಗೆ 6:15ಕ್ಕೆ ಗಣ್ಯರ ಆಗಮನದಿಂದೊಂದಿಗೆ ಪ್ರಾರಂಭಯಿತು. ಬಳಿಕ ಜುಂಬಾ ವಾರ್ಮ್-ಅಪ್ ಕಾರ್ಯಕ್ರಮ ನಡೆಯಿತು. ನಂತರ 6:30ಕ್ಕೆ ಕ್ಲೈಂಬಥಾನ್ಗೆ ಅಧಿಕೃತ ಚಾಲನೆ ನೀಡಲಾಯಿತು. 1001 ಮೆಟ್ಟಿಲುಗಳನ್ನು ದೃಢಸಂಕಲ್ಪದೊಂದಿಗೆ ಏರಿ, ಅಂತಿಮ ಗುರಿ ತಲುಪಿದವರಿಗೆ ಪದಕಗಳನ್ನು…

Read More
Crime hunsur police arrested 2 people and seized drugs

Crime: ಹುಣಸೂರಿನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ಮಾದಕ ವಸ್ತುಗಳ ವಶ

ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ (Crime) ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.  ಇಬ್ಬರು ಆರೋಪಿಗಳ ಬಂಧನ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಕ್ರಮ ಜಾಲದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಉತ್ತರ ನಗರ ಪಾಲಿಕೆ…

Read More