Indian Railway: ವಿಐಪಿ ರೂಮ್‌ನಲ್ಲಿ ತಿಗಣೆ ಕಾಟ: ರೈಲ್ವೇ ಉನ್ನತಾಧಿಕಾರಿಗೆ ಶಾಕ್ ನೀಡಿದ ಕೋರ್ಟ್ ನೋಟಿಸ್!
ಮಹಾರಾಷ್ಟ್ರ: ಸಾಧಾರಣ ರೈಲು ಪ್ರಯಾಣಿಕರು ಪ್ರತಿದಿನ ಸೀಟಿಗಾಗಿ ಪರದಾಡುವುದು, ಕಿಕ್ಕಿರಿದು ತುಂಬಿದ ಬೋಗಿಗಳಲ್ಲಿ ಪ್ರಯಾಣಿಸುವುದು ಹಾಗೂ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವುದು ತೀರಾ ಸಾಮಾನ್ಯ. ಇಂತಹ ಕುಂದುಕೊರತೆಗಳ ಬಗ್ಗೆ ರೈಲ್ವೆ ಆಡಳಿತ ಮಂಡಳಿ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ದೂರುಗಳು ನಿರಂತರವಾಗಿ ಕೇಳಿಬರುತ್ತಲೇ ಇರುತ್ತವೆ. ಆದರೆ, ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ರೈಲು ನಿಲ್ದಾಣದ ವಿಐಪಿ (VIP) ಕಾಯುವಿಕೆ ಕೊಠಡಿಯಲ್ಲಿ (Indian Railway) ತಿಗಣೆಗಳ ಕಾಟ ಕಾಣಿಸಿಕೊಂಡಿದ್ದು, ರೈಲ್ವೆ ಅಧಿಕಾರಿಗಳಿಗೆ ಇದೀಗ ನುಂಗಲಾರದ ಮುಳ್ಳಾಗಿ ಪರಿಣಮಿಸಿದೆ. ಶೋಕಾಸ್ ನೋಟೀಸ್ ಜಾರಿ ಮಾಡಿದ…
