SIR: ಮತದಾರರ ಪಟ್ಟಿ ಪರಿಷ್ಕರಣೆ: ರಾಜ್ಯದಲ್ಲಿ 1.08 ಕೋಟಿ ಮತದಾರರು ಎಎಸ್‌ಡಿಡಿಒ ವ್ಯಾಪ್ತಿಗೆ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1,08,75,304 (ಶೇ. 19) ಮತದಾರರನ್ನು ಎಎಸ್‌ಡಿಡಿಒ (ASDDO) ಅಡಿಯಲ್ಲಿ ವರ್ಗೀಕರಿಸಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ಅವರು ತಿಳಿಸಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಗಟ್ಟೆ ಅಧಿಕಾರಿಗಳು (BLO) ಮನೆ ಮನೆಗೆ ಸಮೀಕ್ಷೆಗಾಗಿ ತೆರಳಿದಾಗ ಮತದಾರರು ಸಿಗದೇ ಇದ್ದರೆ ಅವರನ್ನು ‘ಪತ್ತೆಯಾಗದವರು’ (Absent) ಎಂದೂ, ಮನೆ ಬದಲಾಯಿಸಿದ್ದರೆ ‘ಸ್ಥಳಾಂತರ’ (Shifted) ಎಂದೂ ಹಾಗೂ ಮೃತಪಟ್ಟಿದ್ದರೆ…
