Ram Mandir: ಶ್ರೀರಾಮನ ಭಕ್ತರ ದೇಣಿಗೆ ಹಣದಲ್ಲಿ ಮನೆ-ಆಸ್ತಿ ಖರೀದಿ: ಅಯೋಧ್ಯೆ ಕಾಣಿಕೆ ಕಳ್ಳರ ಬಣ್ಣ ಬಯಲು!
ಅಯೋಧ್ಯೆ: ಅಯೋಧ್ಯೆಯ ಭವ್ಯ (Ram Mandir) ರಾಮಮಂದಿರಕ್ಕೆ ಭಕ್ತರು ನೀಡುತ್ತಿದ್ದ ಕಾಣಿಕೆ ಮತ್ತು ದೇಣಿಗೆ ಹಣವನ್ನು ಅಕ್ರಮವಾಗಿ ಕಳವು ಮಾಡಿ ದುರುಪಯೋಗಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ನ್ಯಾಯಾಲಯಕ್ಕೆ ಬೃಹತ್ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ರವಾನಿಸಿದೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಕೆಯಾಗಿರುವ ಈ ಚಾರ್ಜ್‌ಶೀಟ್ ಬರೋಬ್ಬರಿ ೭೦,೦೦೦ ಪುಟಗಳನ್ನು ಒಳಗೊಂಡಿದ್ದು, ಪ್ರಕರಣದ ತೀವ್ರತೆಯನ್ನು ಎತ್ತಿಹಿಡಿದಿದೆ. ಈ ಕಳವು ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ರಾಮ್ ಶಂಕರ್ ಯಾದವ್…
