Wasabi Matar Chaat: ಮನೆಗೆ ಗೆಸ್ಟ್‌ ಬರ್ತಿದ್ದಾರಾ? ವಾಸಾಬಿ ಮಟರ್‌ ಚಾಟ್‌ ಮಾಡಿ ಕೊಡಿ

Evening Snacks Wasabi Matara Chaat

ಕಾಫಿ ಹಾಗೂ ಟೀ ಜೊತೆ ತಿನ್ನೋಕೆ ಏನಾದರೂ ಇದ್ರೆ ಬಹಳ ಖುಷಿಯಾಗುತ್ತೆ. ಅದರಲ್ಲೂ ಖಾರ ಹಾಗೂ ಸಿಹಿ ಮಿಶ್ರಣದ ಸ್ನ್ಯಾಕ್ಸ್‌ ಇದ್ರೆ ಅದಕ್ಕಿಂತ ಒಳ್ಳೆಯದು ಯಾವುದು ಇದೆ ಹೇಳಿ. ಸಂಜೆ ಮನೆಗೆ ಗೆಸ್ಟ್‌ ಬಂದಾಗ ಸಹ ನೀವು ಈ ವಿಶೇಷವಾದ ಸ್ನ್ಯಾಕ್ಸ್‌ ಮಾಡಿಕೊಡಬಹುದು. ಅದರ ಹೆಸರು ವಾಸಾಬಿ ಮಟಾರ ಚಾಟ್‌. ಇದನ್ನ ಮಾಡೋದು ಬಹಳ ಸುಲಭ. ಹಾಗಾದ್ರೆ ಈ ವಾಸಾಬಿ ಮಟರ್‌ ಚಾಟ್‌ (Wasabi Matar Chaat) ಮಾಡೋದು ಹೇಗೆ? ಇಲ್ಲಿದೆ ರೆಸಿಪಿ.

ವಾಸಾಬಿ ಮಾಟರ್‌ ಚಾಟ್ ಗೆ ಬೇಕಾದ ಪದಾರ್ಥಗಳು

  • 2 ಕಪ್ ಬೇಯಿಸಿದ ಮಟರ್‌ (ಬಟಾಣಿ ಕಾಳುಗಳು)
  • 1 ಈರುಳ್ಳಿ, ಸಣ್ಣದಾಗಿ ಹೆಚ್ಚಿಕೊಳ್ಳಿ
  • 2 ಟೊಮೆಟೊ, ಸಣ್ಣದಾಗಿ ಹೆಚ್ಚಿಕೊಳ್ಳಿ
  • 2 ಚಮಚ ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿಕೊಳ್ಳಿ
  • 1 ಟೀಸ್ಪೂನ್ ಹಸಿ ಮೆಣಸಿನಕಾಯಿ
  • 1 ಚಮಚ ಶಾವಿಗೆ
  • 1 ಕಪ್ ವಾಸಾಬಿ ಮೊಸರು
  • 2 ಕ್ಯಾಸ್ಟರ್ ಸಕ್ಕರೆ
  • 1 ಚಮಚ ಪುದೀನ
  • 1 ಟೀಸ್ಪೂನ್ ಕೊತ್ತಂಬರಿ ಸೊಪ್ಪು
  • ರುಚಿಗೆ ತಕ್ಕಷ್ಟು ಉಪ್ಪು
  • 1 ಚಮಚ ನಿಂಬೆ ರಸ
  • ಹಸಿರು ಮೆಣಸಿನಕಾಯಿ
  • ಕ್ಯಾರೆಟ್ ಜುಲ್ಲಿಯೆನ್
  • ಬೀಟ್‌ರೂಟ್ ಜುಲ್ಲಿಯೆನ್
  • ಶುಂಠಿ ಜುಲ್ಲಿಯೆನ್
  • 2 ಟೀಸ್ಪೂನ್ ಹುಣಸೆಹಣ್ಣು
  • 1/2 ಕಪ್ ಬೆಲ್ಲ
  • 1 ಟೀಸ್ಪೂನ್ ಫೆನ್ನೆಲ್ ಬೀಜ
  • ಉಪ್ಪು
  • 1 ಟೀಸ್ಪೂನ್ ಕರಿಮೆಣಸು
  • 1 ಟೀಸ್ಪೂನ್ ಜೀರಿಗೆ ಪುಡಿ
  • ಚಾಟ್ ಮಸಾಲ
  • ಕೆಂಪು ಮೆಣಸಿನ ಪುಡಿ
  • ಕೊತ್ತಂಬರಿ ಬೀಜ

ವಾಸಾಬಿ ಮಾಟರ್‌ ಚಾಟ್ ಮಾಡುವ ಸುಲಭ ವಿಧಾನ ಇಲ್ಲಿದೆ

ಚಟ್ನಿ ಮಾಡಲು

ಕೊತ್ತಂಬರಿ ಸೊಪ್ಪು, ಪುದೀನ, ಉಪ್ಪು, ಐಸ್ ಕ್ಯೂಬ್‌ಗಳು, ಶುಂಠಿ, ನಿಂಬೆ ರಸ, ಉಪ್ಪನ್ನು ಒಟ್ಟಿಗೆ ಹಾಕಿ ಮಿಕ್ಸಿ ಮಾಡಿ.  ಅದಕ್ಕೆ ಸ್ವಲ್ಪ ಜೀರಿಗೆ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ ಪಕ್ಕಕ್ಕೆ ಇರಿಸಿ.

ಹುಣಸೆ ಸಿರಪ್  ಮಾಡಲು

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಸೇರಿಸಿ, ಅದನ್ನ ಸ್ವಲ್ಪ ಫ್ರೈ ಮಾಡಿ ನಂತರ ಅದಕ್ಕೆ ಹುಣಸೆಹಣ್ಣಿನ ತಿರುಳನ್ನು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿ. ಅಗತ್ಯವಿರುವ ಸಿಹಿಗೆ ಅನುಗುಣವಾಗಿ ಬೆಲ್ಲ ಸೇರಿಸಿ. ಅದಕ್ಕೆ ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲ, ಜೀರಿಗೆ ಪುಡಿ ಮತ್ತು ಸೋಂಪು ಬೀಜಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮಂದ ಆಗುವ ತನಕ ಬೇಯಿಸಿ.

ಈ ಎಲ್ಲಾ ಚಟ್ನಿ ಮಾಡುವ ಮೊದಲು ಬಟಾಣಿಯನ್ನ ಬೇಯಿಸಿಕೊಂಡಿರಿ. ಬೇಯಿಸಿದ ಬಟಾಣಿಯನ್ನ  ತಣ್ಣಗೆ ಮಾಡಿ, ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಅದರ ಮೇಲೆ ಬೆಲ್ಲದ ಸಿರಪ್ ಮತ್ತು ಪುದೀನ ಚಟ್ನಿ ಸೇರಿಸಿ. ಈಗ ಅದಕ್ಕೆ ವಾಸಾಬಿ ಮೊಸರು  ಸೇರಿಸಿ. ಅದರ ಮೇಲೆ ಸಣ್ಣದಾಗಿ ಹೆಚ್ಚಿಕೊಂಡ ಟೊಮೆಟೊ, ಈರುಳ್ಳಿ, ಕೊತ್ತಂಬರಿ, ಮೆಣಸಿನಕಾಯಿ ಮತ್ತು ಮಸಾಲೆ ಹಾಕಿ. ಈಗ ಅದಕ್ಕೆ ಹುರಿದ ಜೀರಿಗೆ ಮತ್ತು ಶುಂಠಿ, ಕ್ಯಾರೆಟ್ ಮತ್ತು ಬೀಟ್ರೂಟ್ ನ ಜುಲಿಯನ್ಸ್ ಮತ್ತು ಅಲಂಕಾರಕ್ಕಾಗಿ ಶ್ಯಾವಿಗೆ  ಸೇರಿಸಿದರೆ ವಾಸಾಬಿ ಮಟರ್‌ ಚಾಟ್‌ ಸವಿಯಲು ರೆಡ್ಡಿ.

ಇದನ್ನೂ ಓದಿ: ಮಲೈ ಕುಟ್ಟು ಭಲ್ಲಾ ಟ್ರೈ ಮಾಡಿದ್ದೀರಾ? ಮಿಸ್‌ ಮಾಡದೇ ಟ್ರೈ ಮಾಡಿ

Leave a Reply

Your email address will not be published. Required fields are marked *